Menu

ಬೆಂಗಳೂರಿನಲ್ಲಿ 5.15 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ನೈಜೀರಿಯಾ ಡ್ರಗ್ ಫೆಡ್ಲರ್ ನನ್ನು ಬಂಧಿಸಿದ  ಸಿಸಿಬಿಯ ಪೊಲೀಸರು ಬಂಧಿಸಿ 5.15 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಡ್ರಗ್ಸ್ ಪೆಡ್ಲರ್ ಅರ್ನೆಸ್ಟ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದು, ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಮತ್ತೆ ಹಳೇ ಚಾಳಿ ಮುಂದುವರಿಸಿದ್ದ. ಇದೀಗ ಮತ್ತೆ ಆತನನ್ನು ಬಂಧಿಸಿ 2.5 ಕೆ.ಜಿ ಎಂಡಿಎಂಎ, 300 ಎಕ್ಸ್‌ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಡುಗೋಡಿ, ಹೆಣ್ಣೂರು ಠಾಣೆಗಳಲ್ಲಿ ಡ್ರಗ್ ಫೆಡ್ಲರ್ ಅರ್ನೆಸ್ಟ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಮಾರತ್‌ಹಳ್ಳಿ ವ್ಯಾಪ್ತಿಯ ಮುನೇಕೊಳಲು ಬಳಿ ಬಾಡಿಗೆ ಮನೆ ಪಡೆದಿದ್ದ ಆರೋಪಿ, ಮತ್ತೆ ತನ್ನ ದಂಧೆ ಮುಂದುವರೆಸಿದ್ದ.

ಆರೋಪಿಯ ಜೊತೆ ಸಂಪರ್ಕದಲ್ಲಿದ್ದವರು, ಗಿರಾಕಿಗಳನ್ನು ಪತ್ತೆಹಚ್ಚುವ ಕೆಲಸ ಮುಂದುವರೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಈ ಸಂಬಂಧ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮಾದಕ ವಸ್ತುಗಳ ಮೂಲ ಪತ್ತೆ, ಹಿಂದಿನ ಹಾಗೂ ಮುಂದಿನ ಸಂಪರ್ಕ ಕೊಂಡಿಗಳನ್ನು ಗುರುತಿಸುವುದು ಮತ್ತು ಜಾಲದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಪತ್ತೆಹಚ್ಚುವ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಹೇಳಿದರು.

ಮಾದಕ ವಸ್ತು ಸಾಗಣೆ ಮತ್ತು ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಹಾಗೂ ನಾಗರಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಕಾಪಾಡುವಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆ ತನ್ನ ದೃಢ ಬದ್ಧತೆಯನ್ನು ಪುನರುಚ್ಚರಿಸಿದೆ.

ಈ ಪ್ರಕರಣವನ್ನು ಎಸಿಪಿ ಮಹಾನಂದ ಇನ್‍ಪೆಕ್ಟರ್ ಶಿವರಾಜ್ ಮತ್ತು ಸಿಬ್ಬಂದಿಗಳ ನೇತೃತ್ವದ ತನಿಖಾ ತಂಡವು ಯಶಸ್ವಿಯಾಗಿ ಬೇಧಿಸಿದೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *