Menu

ಲಕ್ಕುಂಡಿಯ ಮನೆಯೊಳಗೆ ಚಾಲುಕ್ಯರ ಕಾಲದ ಪುರಾತನ ದೇವಸ್ಥಾನ ಪತ್ತೆ!

lakkundi

ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಅಪರೂಪದ ಪುರಾತನ ದೇವಸ್ಥಾನ ಪತ್ತೆಯಾಗಿದ್ದು, ಗಮನ ಸೆಳೆದಿದೆ.

ಹೊರಗಿನಿಂದ ನೋಡಿದರೆ ಸಾಮಾನ್ಯ ಮನೆಯಂತಿರುವ ಚೌಕಿಮಠ ಮನೆಯ ಸಂಕೀರ್ಣದ ಒಳಭಾಗದಲ್ಲಿ ಚಾಲುಕ್ಯರ ಕಾಲದ ಈಶ್ವರ ಹಾಗೂ ಅರ್ಧನಾರೀಶ್ವರ ದೇವಸ್ಥಾನ ಕಂಡುಬಂದಿದೆ.

ಚೌಕಿಮಠ ಮನೆತನದ ಆವರಣದಲ್ಲಿ ಸುಮಾರು ಹತ್ತಡಿ ಮಟ್ಟಿಗೆ ಮುಚ್ಚಿಹೋಗಿರುವ ಪುರಾತನ ದೇವಸ್ಥಾನ ಇತಿಹಾಸಕಾರರ ಕುತೂಹಲ ಕೆರಳಿಸಿದೆ. ಇದು ಚಾಲುಕ್ಯರ ಕಾಲದ ಶಿಲ್ಪಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮನೆಯೊಳಗೆ ಹುದುಗಿರುವ ಈ ದೇವಸ್ಥಾನವನ್ನು ಸರ್ಕಾರ ವಶಕ್ಕೆ ಪಡೆದು ಜೀರ್ಣೋದ್ಧಾರ ಮಾಡುವ ಯೋಜನೆ ರೂಪಿಸುತ್ತಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಚೌಕಿಮಠ ಕುಟುಂಬದ ಸದಸ್ಯ ಶೇಖರಯ್ಯ ಚೌಕಿಮಠ, “ಸರ್ಕಾರ ಸೂಕ್ತ ಪರಿಹಾರ ನೀಡಿದರೆ ದೇವಸ್ಥಾನವನ್ನು ಬಿಟ್ಟುಕೊಡಲು ನಾವು ಸಿದ್ಧ ಎಂದರು.

ಈ ಆವರಣದಲ್ಲಿ ಶರಣಯ್ಯ ಚೌಕಿಮಠ, ಶೇಖರಯ್ಯ ಚೌಕಿಮಠ, ಬಸವ್ವ ಈರಯ್ಯ ಚೌಕಿಮಠ, ಕೊಟ್ರಯ್ಯ ಚೌಕಿಮಠ, ಈರಮ್ಮ ಶಂಕ್ರಯ್ಯ ಚೌಕಿಮಠ ಸೇರಿದಂತೆ ಹಲವು ಕುಟುಂಬಗಳು ವಾಸವಿದ್ದು, ಎಲ್ಲರೂ ಬಡ ವರ್ಗಕ್ಕೆ ಸೇರಿದವರು. ಜೀವನೋಪಾಯಕ್ಕಾಗಿ ಹೋರಾಡುತ್ತಿರುವ ಈ ಕುಟುಂಬಗಳು, ಸರ್ಕಾರದಿಂದ ನ್ಯಾಯಸಮ್ಮತ ಪರಿಹಾರ ದೊರೆತಲ್ಲಿ ಸ್ಥಳವನ್ನು ತೆರವುಗೊಳಿಸಲು ಸಮ್ಮತಿಸಿದ್ದಾರೆ.

ಐತಿಹಾಸಿಕ ಮಹತ್ವ ಹೊಂದಿರುವ ದೇವಸ್ಥಾನ ಉಳಿಯಬೇಕಾದರೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿ ಬರುತ್ತಿದೆ. ಲಕ್ಕುಂಡಿಯ ಪುರಾತನ ವೈಭವವನ್ನು ಮತ್ತೆ ಬೆಳಕಿಗೆ ತರಲು ಇದು ಒಂದು ಅಪೂರ್ವ ಅವಕಾಶವಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Related Posts

Leave a Reply

Your email address will not be published. Required fields are marked *