ಬಾಗಲಕೋಟೆ ( ಬಾದಾಮಿ): ಪ್ರಪಂಚದ ಮಾನವ ಜೀವನ ಬದುಕಿನ ಶೈಲಿಯನ್ನು ಮರಳುಕಲ್ಲಿನಲ್ಲಿ ಶಿಲ್ಪದ ಕೆತ್ತನೆಯ ಮೂಲಕ ಅಪಾರ ಕೊಡುಗೆ ನೀಡಿದ ಚಾಲುಕ್ಯರ ಸ್ಮರಣೆಯ ಚಾಲುಕ್ಯ ಉತ್ಸವ ವೈಭವಕ್ಕೆ ಸಿಎಂ ಸಿದ್ದರಾಮಯ್ಯ ಡೊಳ್ಳು ಹಾಗೂ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ಹತ್ತು ವರ್ಷಗಳ ನಂತರ ನಡೆದ ಉತ್ಸವಕ್ಕೆ ನಾಡಿನ ಸಾವಿರಾರು ಜನರ ಸಾಕ್ಷಿಯಾದರು. ನಂತರ ಸಿಎಂ ಸಿದ್ದರಾಮಯ್ಯ ಮಾತನಾಡಿ, ಉತ್ಸವಕ್ಕೆ ಮೂರು ಕೋಟಿ ರೂ. ಕೊಟ್ಟಿದ್ದೇನೆ. ಅದು ಸಾಲಲ್ಲ ಎಂದಿದ್ದಾರೆ. ಇನ್ನು ಒಂದು ಕೋಟಿ ರೂಪಾಯಿ ಕೊಡುತ್ತೇನೆ ಎಂದು ಘೋಷಿಸಿದರು.
ಐದು ಬಾರಿ ಶಾಸಕನಾಗಿದ್ದ ಮೈಸೂರಿನ ಚಾಮುಂಡಿ ಕ್ಷೇತ್ರದಲ್ಲಿ ಸೋಲಿಸಿದರು. ಬಾದಾಮಿ ಅವರು ಗೆಲ್ಲಿಸಿದರು. ಅದರಿಂದಾಗಿಯೇ ಮುಂದೆ ವರುಣಾದಲ್ಲಿ ಗೆದ್ದು ಸಿಎಂ ಆದೆ. ಇದಕ್ಕೆ ಬಾದಾಮಿಯೇ ಕಾರಣ. ನಾನು ಎಂಎಲ್ ಎ. ಆದಾಗ ಚಾಲುಕ್ಯ ಉತ್ಸವ ಆಗಲಿಲ್ಲ ಅನ್ನುವ ಬೇಸರವಿದೆ. ಎಂದರು.
ಕೇಂದ್ರ ಸರಕಾರ ನಮ್ಮ ಮನವಿಗೆ ಸ್ಪಂದಿಸಲ್ಲ ಆದರೂ ಈ ಭಾಗದ ಎಂಪಿ ಗದ್ದಿಗೌಡರು ಬಾದಾಮಿ ಅಭಿವೃದ್ಧಿಗೆ ಕೇಂದ್ರದಿಂದ ಹಣ ತರುವುದಾಗಿ ಹೇಳಿರುವುದರಿಂದ ನಾಳೆಯೇ ಮನವಿ ಕೊಡುತ್ತೇವೆ ಹಣ ತನ್ನಿ ಎಂದು ತಿಳಿಸಿದರು.
ನಾನು ಎರಡನೇ ಅವಧಿಯಲ್ಲಿ ಸಿಎಂ ಆದ ಮೇಲೆ ಬಾದಾಮಿ ಅಭಿವೃದ್ದಿಗೆ 2000 ಕೋಟಿ ರೂಪಾಯಿ ನೀಡಿದ್ದೇನೆ ಎಂದರು.
ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಹಾಗೂ ಕನ್ನಡತನಕ್ಕೆ ಬುನಾದಿ ಹಾಕಿದ್ದು ಇಮ್ಮಡಿ ಪುಲಕೇಶಿ. ಹರ್ಷವರ್ಧನನ ಸೋಲಿಸಿ ದಕ್ಷಿಶ ಪಥೇಶ್ವರ ಎನಿಸಿಕೊಂಡಿದ್ದು ಪುಲಕೇಶಿ. ಅಂತಹ ನೆಲದಲ್ಲಿ ಉತ್ಸವ ನಡೆದಿರುವುದು ಖುಷಿ ತಂದಿದೆ ಎಂದರು.
1400ಕೋಟಿ ರೂ. ಯೋಜನೆಯ ಕೆರೂರ ಏತನೀರಾವರಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು ಖುಷಿಯ ವಿಚಾರ ಬಾದಾಮಿ ಮತಕ್ಷೇತ್ರಕ್ಕೆ 500ಕೋಟಿಯಷ್ಟು ಹಣ ಬಂದಿದ್ದು, ಅಭಿವೃದ್ದಿ ಕೆಲಸ ನಡೆದಿವೆ ಎಂದು ತಿಳಿಸಿದರು.


