Menu

ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ್ದ 20 ಎಕರೆ ಒತ್ತುವರಿ ಜಾಗ ವಶ

mysore news

ಮೈಸೂರು: ಸಿಎಂ ಸ್ವಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ವ್ಯಕ್ತಿಯೊಬ್ಬ ಧಮ್ಕಿ ಹಾಕಿದ್ದ ಪ್ರಕರಣದಲ್ಲಿ 20 ಎಕರೆ ಒತ್ತುವರಿ ಆಗಿದ್ದ ಸರ್ಕಾರಿ ಜಾಗವನ್ನು ವಶಕ್ಕೆ ಪಡೆಯಲಾಗಿದೆ.

ಜಾಗದ ಸರ್ವೆ ಮಾಡಲು ಬಂದ ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ ಘಟನೆ ಬೆನ್ನಲ್ಲೇ ಸ್ಥಳಕ್ಕೆ ಮೈಸೂರು ತಾಲೂಕು ತಹಸಿಲ್ದಾರ್ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಒತ್ತುವರಿಯಾಗಿದ್ದ 20 ಎಕರೆ ಸರ್ಕಾರ ಜಾಗವನ್ನ ವಶಕ್ಕೆ ಪಡೆದಿದ್ದಾರೆ.

2025ರ ಡಿ.31 ರಂದು ಗುಡಮಾದನಹಳ್ಳಿಯಲ್ಲಿರುವ ಒತ್ತುವರಿ ಜಾಗ ವೀಕ್ಷಣೆಗೆ ಗ್ರಾಮ ಆಡಳಿತ ಮಹಿಳಾ ಅಧಿಕಾರಿ (Women Officer) ಜಿ ಭವ್ಯ ಹಾಗೂ ಗ್ರಾಮ ಸಹಾಯಕ ನವೀನ್ ತೆರಳಿದ್ದರು. ಈ ವೇಳೆ ಜಿ.ಎಂ ಪುಟ್ಟಸ್ವಾಮಿ ಎಂಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿದ್ದ.

ಕಳೆದ ಹಲವು ದಿನಗಳಿಂದ ಇದೇ ಸ್ಥಳದಲ್ಲಿ ರೈತರು ಭೂಮಿ ವಶಕ್ಕೆ ಪಡೆಯದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಒತ್ತುವರಿಯಾಗಿರುವ ಜಾಗ ಸರ್ಕಾರಕ್ಕೆ ಸೇರಿದ್ದ ಜಾಗ ಎಂದು ರೈತರಿಗೆ ತಹಸಿಲ್ದಾರ್ ಮಹೇಶ್ ವಿವರಿಸಿದ ನಂತರ ರೈತರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ.

”ವರುಣ ಹೋಬಳಿಯ ಗುಡಮಾದನಹಳ್ಳಿಯಲ್ಲಿ ನಿಮ್ಹಾನ್ಸ್‌ ಮಾದರಿಯ ಆಸ್ಪತ್ರೆ ನಿರ್ಮಿಸಲು ಸರ್ವೆ ನಂ.8ರಲ್ಲಿ5 ಎಕರೆ 05 ಗುಂಟೆ, ಸರ್ವೆ ನಂ.60ರಲ್ಲಿ6 ಎಕರೆ 10 ಗುಂಟೆ ಹಾಗೂ ಸರ್ವೆ ನಂ.68ರಲ್ಲಿ8 ಎಕರೆ 25 ಗುಂಟೆ ಒಟ್ಟು 20 ಎಕರೆ ಜಾಗ ಮೀಸಲಿಡಲಾಗಿದೆ. ಈ ಜಾಗವನ್ನು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರು ಮತ್ತು ಡೀನ್‌ ಅವರಿಗೆ ಹಸ್ತಾಂತರಿಸುವಂತೆ ತಹಸೀಲ್ದಾರ್‌ ಆದೇಶಿಸಿದ್ದಾರೆ.

Related Posts

Leave a Reply

Your email address will not be published. Required fields are marked *