ಈ ಬಾರಿ ಬಿಗ್‌ಬಾಸ್ ಕನ್ನಡದ ಗೆಲ್ಲುವ ಅಭ್ಯರ್ಥಿಗೆ ದಾಖಲೆ ಪ್ರಮಾಣದಲ್ಲಿ ಮತಗಳು ಬಂದಿವೆ, ವೋಟಿಂಗ್ ಮುಗಿಯಲು ಒಂದು ದಿನ ಬಾಕಿ ಇರುವಾಗಲೇ ಗೆಲುವಿನ ಅಭ್ಯರ್ಥಿ ಪರ 37 ಕೋಟಿಗೂ ಅಧಿಕ ಮತಗಳು ಲಭಿಸಿವೆ.
ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಕಳೆದ ಸೀಸನ್ 11ರಲ್ಲಿ ಹನುಮಂತುಗೆ 5 ಕೋಟಿಗೂ ಅಧಿಕ ಮತಗಳು ಬಂದಿದ್ದು, ದಾಖಲೆಯಾಗಿತ್ತು. ಆದರೆ ಈ ಬಾರಿ ವೋಟಿಂಗ್‌ಗೆ ಇನ್ನೂ ಒಂದು ದಿನ ಇರುವಾಗಲೇ ಗೆಲುವಿನ ಅಭ್ಯರ್ಥಿ ಪರ 37 ಕೋಟಿಗೂ ಅಧಿಕ ಮತಗಳು ಹರಿದು ಬಂದಿದೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆ ಮತದಾನವಾಗಿದೆ. ವೋಟಿಂಗ್ ಭಾನುವಾರ ರಾತ್ರಿ 10 ಗಂಟೆಯವರೆಗೆ ನಡೆಯಲಿದ್ದು, ಸೀಸನ್ 12ರ ಅಭ್ಯರ್ಥಿ ಪರ 50 ಕೋಟಿಗೂ ಅಧಿಕ ಮತಗಳು ದಾಖಲಾಗುವ ಸಾಧ್ಯತೆ ಇದೆ.
‘ಬಿಗ್ ಬಾಸ್’ಸೀಸನ್ 11’ರ ಟ್ರೋಫಿಯನ್ನು ಹನುಮಂತು ಗೆದ್ದುಕೊಂಡಿದ್ದು, 50 ಲಕ್ಷ ರೂಪಾಯಿಯ ನಗದು ಬಹುಮಾನ ಪಡೆದಿದ್ದಾರೆ. ಸೀಸನ್ 11ರ ವಿಜೇತ ಬರೋಬ್ಬರಿ 5,23,89,318 ಮತ ಪಡೆದು ಇತಿಹಾಸ ಸೃಷ್ಟಿಸಿದ್ದರು. 10ನೇ ಸೀಸನ್ ವಿನ್ನರ್ ಎರಡುಕೋಟಿ ಮತಗಳನ್ನು ಪಡೆದುಕೊಂಡಿದ್ದರು. 11ನೇ ಸೀಸನ್‌ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದ ಹನುಮಂತು 5.23 ಕೋಟಿಗೂ ಹೆಚ್ಚು ಮತಗಳನ್ನುಗಳಿಸಿದ್ದರು. ಇಷ್ಟೊಂದು ಮತಗಳನ್ನು ಪಡೆದ ಮೊದಲ ಸ್ಪರ್ಧಿ ಇವರು. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸೀಸನ್ 12ರ ವಿಜೇತರು ಎಷ್ಟು ಮತಗಳನ್ನು ಪಡೆದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಹೆಚ್ಚಿದೆ.
ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಸೀಸನ್ 12 ಅಂತಿಮ ಘಟ್ಟ ತಲುಪಿದೆ. ಗಿಲ್ಲಿ ನಟ ಟ್ರೆಂಡ್ ಸೆಟ್ಟರ್, ಇದೊಂದು ಒನ್ ಮ್ಯಾನ್ ಶೋ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಗಿಲ್ಲಿ ವಿಜೇತರಾಗಲಿ ಎಂದು ಎಲ್ಲೆಡೆಯಿಂದ ಶುಭ ಹಾರೈಕೆಗಳು ವ್ಯಕ್ತವಾಗುತ್ತಿವೆ.
111 ದಿನಗಳ ಕಾರ್ಯಕ್ರಮಕ್ಕೆ 24 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. 6 ಮಂದಿ ಫೈನಲ್‌ಗೆ ಬಂದಿದ್ದಾರೆ. ಪ್ರೋಮೋ ಅನಾವರಣಗೊಳಿಸಿರುವ ತಂಡ, ”6 ಫೈನಲಿಸ್ಟ್ಸ್, 1 ವಿನ್ನರ್; ನೀವು ಪ್ರೀ ಫಿನಾಲೆಗೆ ರೆಡಿ ತಾನೇ, ಬಿಗ್ ಬಾಸ್, ಪ್ರೀ ಗ್ರಾಂಡ್ ಫಿನಾಲೆ, ಇಂದು ರಾತ್ರಿ 9”ಕ್ಕೆ ಎಂದು ಬರೆದುಕೊಂಡಿದೆ. ನೆಟ್ಟಿಗರು ಗಿಲ್ಲಿ ವಿನ್ನರ್, ರಕ್ಷಿತಾ ರನ್ನರ್ ಎಂಬ ಅಭಿಪ್ರಾಯಗಳೊಂದಿಗೆ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.


