Menu

ಗಂಗಾವತಿಯಲ್ಲಿ ಶೌಚಾಲಯವಿಲ್ಲದೆ ಮಹಿಳೆಯರ ಪರದಾಟ: ಸರ್ಕಾರದ ವಿರುದ್ಧ ಆರ್‌ ಅಶೋಕ ಕಿಡಿ

ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮದ ಅಂಬೇಡ್ಕರ್ ಏರಿಯಾ ಮಹಿಳೆಯರು ಸಮುದಾಯ ಶೌಚಾಲಯಕ್ಕೆ ಹೋರಾಡಿ ಬೇಸತ್ತು ಈಗ ಬಯಲನ್ನೇ ಶೌಚಾಲಯ ಮಾಡಿಕೊಂಡು ಸೀರೆಯನ್ನೇ ಬಾಗಿಲು ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಅಂಬೇಡ್ಕರ್, ಗಾಂಧಿ, ದಲಿತರ ಹೆಸರಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಇದಕ್ಕಿಂತ ದೊಡ್ಡ ನಾಚಿಕೆಗೇಡಿನ ಸಂಗತಿ ಮತ್ತೊಂದು ಇರಲಿಕ್ಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ಕಿಡಿ ಕಾರಿದ್ದಾರೆ.

ಚಿಕ್ಕಜಂತಕಲ್ ಗ್ರಾಮದ ಮಹಿಳೆಯರು ಸಮುದಾಯ ಶೌಚಾಲಯಕ್ಕೆ ಹೋರಾಡಿ ಬೇಸತ್ತು ಈಗ ಬಯಲನ್ನೇ ಶೌಚಾಲಯ ಮಾಡಿಕೊಂಡು ಸೀರೆಯನ್ನೇ ಬಾಗಿಲು ಮಾಡಿಕೊಂಡಿರುವುದು  @INCKarnataka ಪಕ್ಷದ ಆಷಾಢಭೂತಿತನ, ಬೂಟಾಟಿಕೆಗೆ ಜೀವಂತ ಉದಾಹರಣೆಯಾಗಿದೆ. ದಶಕಗಳ ಕಾಲ ಕಲ್ಯಾಣ ಕರ್ನಾಟಕದ ಜನತೆಯ ಮೇಲೆ ಸವಾರಿ ಮಾಡಿ ಅಧಿಕಾರ, ಐಷಾರಾಮಿ ಜೀವನ ಅನುಭವಿಸಿದ ಸಚಿವ @PriyankKharge ಅವರ ಕುಟುಂಬದ ಸಾಧನೆಗೆ ಕನ್ನಡಿ ಹಿಡಿದಿದೆ ಎಂದು ಟೀಕಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಂಆಡಿರುವ ಅವರು, ಅಹಿಂದ ಹೆಸರಿನಲ್ಲಿ ಅತ್ಯಂತ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿರುವ ಸಿಎಂ @siddaramaiah ಅವರು, ಮಾತೆತ್ತಿದರೆ ಬುದ್ಧ, ಬಸವ, ಅಂಬೇಡ್ಕರ್ ಎಂದು ಭಾಷಣ ಬಿಗಿಯುವ ಸಚಿವ @CMahadevappa ಅವರು, ನಾನು ಈ ಭಾಗದಲ್ಲೇ ಹುಟ್ಟಬೇಕಿತ್ತು ಎಂದು ನಾಟಕವಾಡಿವ ಡಿಸಿಎಂ @DKShivakumar ಅವರು ಚಿಕ್ಕಜಂತಕಲ್ ಗ್ರಾಮದ ಮಹಿಳೆಯ ಈ ಶೋಚನೀಯ ಪರಿಸ್ಥಿತಿಗೆ ಉತ್ತರಿಸುತ್ತರಾ ಎಂದು ಪ್ರಶ್ನಿಸಿದ್ದಾರೆ.

Related Posts

Leave a Reply

Your email address will not be published. Required fields are marked *