Menu

ಟ್ರಂಪ್‌ಗೆ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿದ್ರು ವೆನೆಜುವೆಲಾದ ಕೊರಿನಾ ಮಚಾದೋ

2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ವೆನೆಜುವೆಲಾ ವಿರೋಧ ಪಕ್ಷದ ಮಾರಿಯಾ ಕೊರಿನಾ ಮಚಾದೋ ಅವರು ತನಗೆ ಸಿಕ್ಕಿದ್ದ ಪ್ರಶಸ್ತಿಯನ್ನು ಟ್ರಂಪ್‌ ಅವರಿಗೆ ನೀಡಿದ್ದಾರೆ. ಶ್ವೇತಭವನದಲ್ಲಿ ನಡೆದ ಕಾರ್ಯಕ್ರದಲ್ಲಿ ಮಚಾದೊ ಅವರುನೊಬೆಲ್ ಶಾಂತಿ ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ಕೊಟ್ಟಿದ್ದು, ನೊಬೆಲ್‌ ಚಿನ್ನದ ಪದಕಗ ಟ್ರಂಪ್ ಬಳಿ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತೋರಿದ ವಿಶಿಷ್ಟ ಬದ್ಧತೆಗೆ ಮನ್ನಣೆಯಾಗಿ ಅಮೆರಿಕದ ಅಧ್ಯಕ್ಷರಿಗೆ ನೊಬೆಲ್ ಶಾಂತಿ ಪ್ರಶಸ್ತಿಯ ಪದಕವನ್ನು ಪ್ರದಾನ ಮಾಡಿದ್ದೇನೆ ಎಂದು ಮಚಾದೊ ಹೇಳಿರುವುದಾಗಿ ತಿಳಿಸಿದ್ದಾರೆ.  ವೆನೆಜುವೆಲಾದ ಮರಿಯಾ ಕೊರಿನಾ ಮಚಾದೊ ಅವರನ್ನು ಭೇಟಿಯಾಗುವುದು ನನಗೆ ದೊರೆತ ದೊಡ್ಡ ಗೌರವ. ಅವರು ತುಂಬಾ ಕಷ್ಟಗಳನ್ನು ಅನುಭವಿಸಿದ ಅದ್ಭುತ ಮಹಿಳೆ. ನನ್ನ ಕೆಲಸಕ್ಕೆ ಮರಿಯಾ ಅವರು ತನಗೆ ಸಿಕ್ಕಿದ್ದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನನಗೆ ನೀಡಿದರು. ಧನ್ಯವಾದಗಳು ಮರಿಯಾ ಎಂದು ಟ್ರಂಪ್‌ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ನೊಬೆಲ್‌ ಪ್ರಶಸ್ತಿ ಸಿಕ್ಕಿದ ನಂತರ ಮರಿಯಾ ಅವರು ವೆನೆಜುವೆಲಾದ ದುಃಖಿತ ಜನರು ಹಾಗೂ ಪ್ರಜಾಪ್ರಭುತ್ವಪರ ಚಳವಳಿಗೆ ನಿರ್ಣಾಯಕ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಈ ಪ್ರಶಸ್ತಿಯನ್ನು ನಾನು ಅರ್ಪಿಸುವುದಾಗಿ ಅಕ್ಟೋಬರ್‌ 10 ರಂದು ಪ್ರಕಟಿಸಿದ್ದರು.

ನಾನು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಬರಾಕ್‌ ಒಬಾಮ ಏನು ಮಾಡಿದ್ದಾರೆ, ಏನು ಮಾಡದ ಒಬಾಮಗೆ ನೊಬೆಲ್‌ ಸಿಗುವುದಾದರೆ ನನಗೆ ಯಾಕೆ ಸಿಗಬಾರದು ಎಂದು ಟ್ರಂಪ್‌ ಈ ಹಿಂದೆ ಕೆಲವು ಬಾರಿ ಪ್ರಶ್ನಿಸಿದ್ದರು. ಇಸ್ರೇಲ್‌ ಮತ್ತು ಪಾಕಿಸ್ತಾನ ನೊಬೆಲ್‌ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರ ಹೆಸರನ್ನು ನಾಮ ನಿರ್ದೇಶನ ಮಾಡಿತ್ತು.

Related Posts

Leave a Reply

Your email address will not be published. Required fields are marked *