ಹಾವೇರಿ(ಶಿಗ್ಗಾವಿ): ಎಲ್ಲಿ ಅನ್ಯಾಯವಾಗುತ್ತದೆ ಅಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ವಿರೋಧ ಮಾಡಬೇಕಾಗತ್ತದೆ. ಇಲ್ಲವಾದರೆ ವಿರೋಧ ಪಕ್ಷವಾಗಿ ನಾವು ವಿಫಲವಾಗುತ್ತೇವೆ. ಎಲ್ಲೆಲ್ಲಿ ಜನರ ಬೇಡಿಕೆ ಇದೆ. ಅದರ ಪರವಾಗಿ ಹೋರಾಟ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ಶ್ರೀ ಬಸವರಾಜ ಬೊಮ್ಮಾಯಿರವರ ನಿವಾಸದ ಸಭಾಭವನದಲ್ಲಿ ದಿನಾಂಕ 26/01/2026 ರಂದು ನಡೆಯಲಿರುವ ಶ್ರೀಮತಿ ಗಂಗಮ್ಮ ಎಸ್ ಬೊಮ್ಮಾಯಿರವರ 92 ನೇಯ ಜನ್ಮದಿನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ / ಸಂಘ ಸಂಸ್ಥೆಗಳಿಗೆ ಏರ್ಪಡಿಸಿದ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವಭಾವಿ ಸಭೆಯನ್ನು ನಡೆಸಿದರು.
ನಿಮ್ಮ ಭವಿಷ್ಯ ತಾಲೂಕಿನ ಭವಿಷ್ಯ ಹೇಗೆ ರೂಪಿಸಬೇಕು ಯಾರು ರೂಪಿಸಬೇಕು ಎನ್ನುವುದನ್ನು ತಾಲೂಕಿನ ಮಹಾಜನತೆ ತೀರ್ಮಾನ ಮಾಡುತ್ತಾರೆ. ಎಲ್ಲಿ ಅನ್ಯಾಯವಾಗುತ್ತದೆ ಅಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ವಿರೋಧ ಮಾಡಬೇಕಾಗತ್ತದೆ. ಇಲ್ಲಾವಾದರೆ ವಿರೋಧ ಪಕ್ಷವಾಗಿ ನಾವು ವಿಫಲವಾಗುತ್ತೇವೆ. ಎಲ್ಲೆಲ್ಲಿ ಜನರ ಬೇಡಿಕೆ ಇದೆ. ಅದರ ಪರವಾಗಿ ಹೋರಾಟ, ಸಂಘರ್ಷ ಮಾಡುವ ಕೆಲಸ, ಮಾಡಬೇಕು. ಇನ್ನೊಂದು ಜನರಿಗೆ ಉಪಯೋಗ ಆಗುವ ಕೆಲಸ ಸಕಾರಾತ್ಮಕವಾಗಿ ಮಾಡುವ ಕೆಲಸ, ಜನರಿಗೆ ರೇಷನ್ ಕಾರ್ಡ್ ಕೊಡುತ್ತಿಲ್ಲ. ಆಯುಷ್ ಮಾನ್ ಕಾರ್ಡ್ ಕೊಡುತ್ತಿಲ್ಲ. ಕಾಗದ ಪತ್ರ ದುಡ್ಡಿಲ್ಲದೇ ಸಿಗುತ್ತಿಲ್ಲ. ಎಲ್ಲ ಪ್ರಕರಣಗಳಲ್ಲಿ ಜನರ ಪರವಾಗಿ ನಿಂತು ಕೆಲಸ ಮಾಡಬೇಕಿದೆ. ಅವರ ಪರವಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಈಗಿನ ಸರ್ಕಾರ ನಾವು ಆದೇಶ ಮಾಡಿರುವ ಕೆಲಸಗಳನ್ನೇ ಮಾಡುತ್ತಿದ್ದಾರೆ. ದೊಡ್ಡ ಕೆಲಸಗಳನ್ನು ನಾವು ಮಾಡಿದ್ದೇವು ಕನಿಷ್ಠ ಸೌಜನ್ಯ ಅವರಲ್ಲಿ ಇಲ್ಲ. ನಾನು ಸತೀಶ್ ಜಾರಕಿಹೊಳಿ ಅವರಿಗೆ ಅಭಿನಂದನೆ ಹೇಳುತ್ತೇನೆ. ಐಬಿ ಉದ್ಘಾಟನೆ ಸಂದರ್ಭದಲ್ಲಿ ಇದನ್ನು ಬೊಮ್ಮಾಯಿಯವರು ಕಟ್ಟಿಸಿದ್ದಾರೆ ಎಂದು ಹೇಳಿದ್ದರು. ಡಿಪೊ ನಮ್ಮ ಅವಧಿಯಲ್ಲಿಯೇ ಮಾಡಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಎಸ್ ಐ ಆರ್
ನಾವೆಲ್ಲ ಸೇರಿದೀವಿ ಅತ್ಯಂತ ಸೂಕ್ಷ್ಮವಾಗಿ ಒಂದೆರಡು ವಿಚಾರ ಹೇಳುತ್ತೇನೆ. 16 ವರ್ಷದ ನಂತರ ಸರ್ಕಾರ ಮತ್ತು ಪತಿ ನಿಧಿ ಇಲ್ಲದಂತ ಪರಿಸ್ಥಿತಿ ಇದೆ. ವಿಧಾನಸಭೆಯ ಮರುಚುನಾವಣೆಯಲ್ಲಿ ಆಗಿದೆ. ಇದರ ಮಧ್ಯೆ ನಾವು ಎಲ್ಲಿ
ಮೈಮರೆತಿದ್ದೇವೆ ಎಂದು ಆಲೋಚನೆ ಮಾಡಬೇಕು. ಇದಕ್ಕೆ ಹಲವಾರು ಕಾರಣಗಳಿವೆ. ಏನು ಎಐಆರ್ ಆದಾಗ ಯಾವ ಯಾವ ವರ್ಷದಲ್ಲಿ ಎಷ್ಟೆಷ್ಟು ಮತಗಳು ನೈಜವಾಗಿ ಸೇರಿವೆ. ಯಾವಾಗ ಹೊರಗಡೆ ಮತಗಳು ಸೇರಿವೆ ಎನ್ನುವುದು ಎಸ್ಐಆರ್ ದಿಂದ ಗೊತ್ತಾಗುತ್ತದೆ. ಅದಕ್ಕೆ ತಮ್ಮ ಪರಿಶ್ರಮ ಇದೆ. ತಮ್ಮ ಬೂತ್ ನಲ್ಲಿ ಬಿಎಲ್ಒಗಳು ಏನು ಮಾಡಿದ್ದಾರೆ. ಒಂದೂವರೆ ಎರಡು ತಿಂಗಳಲ್ಲಿ ನಮ್ಮ ರಾಜ್ಯದಲ್ಲಿ ಎಸ್ ಐ ಆರ್ ಪ್ರಾರಂಭವಾಗುತ್ತದೆ. ನಿಮ್ಮಬೂತ್ ನೀವು ಸರಿಯಾಗಿ ನೋಡಿಕೊಂಡು ಅಧಿಕೃತವಾಗಿ ಯಾರಿದ್ದಾರೆ. ಈ ಬೂತಿಗೆ ಸಂಬಂಧ ಇದ್ದವರು ನೋಡಿಕೊಳ್ಳಬೇಕು ಎಂದು ಹೇಳಿದರು.
ನ್ಯೂನ್ಯತೆಗಳನ್ನು ನಾನು ಪಟ್ಟಿ ಮಾಡುತ್ತೇನೆ. ಪ್ರತಿ ಬೂತಿನಲ್ಲಿ ನ್ಯಾಯ ಸಮ್ಮತವಾಗಿ ಅವಕಾಶ ಕಲಿಸಲಾಗುವುದು. ಯಾರು ಹೊರಗಡೆಯವರಿದ್ದಾರೆ. ಹೊಸದಾಗಿ ಯಾರು ಸೇರಿದ್ದಾರೆ. 2023, 2024 ರಲ್ಲಿ ಅವರ ಹೆಸರು ಎಲ್ಲಿತ್ತು. ಪತ್ತೆ ಹೆಚ್ಚಿ, ಒಂದೂವರೆ ತಿಂಗಳು ಸರಿಯಾಗಿ ಕೆಲಸ ಮಾಡಿದರೆ ನಮ್ಮ ಮುಂದಿನ ಚುನಾವಣೆಗೆ ಭದ್ರ ಬುನಾದಿ ಹಾಕಿದಂತಾಗುತ್ತದೆ ಎಂದು ಹೇಳಿದರು.
ರೈತ ವಿರೋಧಿ ಸರ್ಕಾರ
ಈ ಸರ್ಕಾರ ರೈತ ವಿರೋಧಿ ಸರ್ಕಾರ ಇದೆ ರೈತರಿಗೆ ಕೃಷಿ ಸನ್ಮಾನ ಯೋಜನೆಯಲ್ಲಿ 4000 ರೂ. ನಮ್ಮ ಸರ್ಕಾರ ಯಡಿಯೂರಪ್ಪ ಅವರ ಸರ್ಕಾರ ಕೊಟ್ಟಿತ್ತು. ಅದನ್ನು ಮುಂದುವರೆಸಿಲ್ಲ. ಮೆಕ್ಕೆ ಜೋಳ ಖರೀದಿ ವಿಚಾರದಲ್ಲಿ ಈಗ ಮಾರ್ಕೆಟ್ ಇಂಟರ್ ವಿನ್ ಸ್ಕಿಮ್ ಅಂತ ಹೇಳುತ್ತಿದ್ದಾರೆ. ಒಂದು ತಿಂಗಳಲ್ಲಿ ರೈತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾನೆ. ಪ್ರತಿ ರೈತರಿಂದ 50 ಕ್ವಿಂಟಲ್ಗೆ ಒಂದು ತಿಂಗಳೊಳಗೆ ಖರೀದಿ ಮಾಡಬೇಕು. ರೈತರಿಗೆ ನೈಯಾ ಪೈಸೆ ಕೊಡಬಾರದು ಅಂತ ಸರ್ಕಾರ ತೀರ್ಮಾನ ಮಾಡಿದೆ. ಶೇ 95 ರಷ್ಟು ಕುಟುಂಬಗಳು ಸಣ್ಣ ಕುಟುಂಬಗಳಿವೆ. ಅವರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಸಮಾಜ ಮತ್ತು ಸಂಸ್ಕೃತಿಯ ಜೊತೆ ಮಾನವೀಯ ಸಂಬಂಧ, ಆದರ್ಶ ಸಂಬಂಧಗಳು ಏನಿವೆ ಇದನ್ನು ಪುನರ್ ಸ್ಥಾಪನೆ ಮಾಡಲು ನಾವು ಪದೇ ಪದೇ ತಾಯಿ ಬಗ್ಗೆ ಮಾತನಾಡುತ್ತೇವೆ. ಅಂದು ಹೆಲ್ತ್ ಕ್ಯಾಂಪ್ ಜೊತೆಗೆ ಎಸ್ಸಿ ಎಸ್ಟಿ , ಒಬಿಸಿ ಸಮುದಾಯದಲ್ಲಿ ಪಿಯುಸಿ, ಎಸ್ ಎಸ್ ಎಲ್ಸಿ ಹೆಚ್ಚು ಅಂಕ ಪಡೆದವರಿಗೆ ಗೌರವಿಸುವ ಕೆಲಸ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಕ್ಷದ ತಾಲೂಕ ಅಧ್ಯಕ್ಷರಾದ ವಿಶ್ವನಾಥ ಹರವಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


