Wednesday, January 14, 2026
Menu

ಶಿಕಾರಿಪುರ ಶಾಲೆ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ  ಶಿಕ್ಷಕ

ಶಿಕಾರಿಪುರ ತಾಲೂಕಿನ ಬಳ್ಳೂರು ಗ್ರಾಮದ ಸರ್ಕಾರಿ‌ ಹಿರಿಯ ಪ್ರಾಥಮಿಕ ಶಾಲೆ‌ಯ ಶಿಕ್ಷಕ ಧನಂಜಯ್(51) ಶಾಲೆಯ ತರಗತಿ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.‌

ಮೃತ ಶಿಕ್ಷಕ ಧನಂಜಯ್ ಶಾಲೆಗೆ ಹೋಗಿ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ನಂತರ ವಿಶ್ರಾಂತಿ ಪಡೆಯುವಾಗ  ಕೊಠಡಿಯಿಂದ ವಿದ್ಯಾರ್ಥಿಗಳನ್ನು ಹೊರಗೆ ಕಳಿಸಿ  ಕಿಟಕಿ ಮುಚಿ ಕೊಠಡಿಯಲ್ಲಿ  ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಶಾಲೆ ಕಟ್ಟೆಯ ಮೇಲೆ ಕುಳಿತಿರುವುದನ್ನು ನೋಡಿದ ಇತರೆ ಶಿಕ್ಷಕರು ಬಾಗಿಲು ಹಾಕಿದ್ದ ಕೊಠಡಿಯ ಬಾಗಿಲು ತೆರೆಯುವುದಕ್ಕೆ ಪ್ರಯತ್ನಿಸಿ ವಿಫಲರಾಗಿದ್ದು, ನಂತರ ಕಿಟಕಿಯನ್ನು ತೆಗೆದಾಗ ಶಿಕ್ಷಕ ತರಗತಿ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಹೊನ್ನಾಳಿ ತಾಲೂಕಿನ ಜೀನಳ್ಳಿ ಗ್ರಾಮದ ನಿವಾಸಿಯಾಗಿದ್ದ ಶಿಕ್ಷಕ ಧನಂಜಯ್ ಹೊನ್ನಾಳಿಯಲ್ಲಿ ವಾಸವಿದ್ದರು. ಬಿಎಲ್ ಒ ಕೆಲಸದ ಒತ್ತಡದಿಂದ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪತ್ನಿ ಆಶಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿ ದ್ದಾರೆ. ಆತ್ಮಹತ್ಯೆ ಸಂಬಂಧಿಸಿದಂತೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Posts

Leave a Reply

Your email address will not be published. Required fields are marked *