ಕಳೆದೆರಡು ವಾರಗಳಿಂದ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಇರಾನ್ ನಲ್ಲಿ ಇದುವರೆಗೆ ಕನಿಷ್ಠ 2000 ಜನರು ಬಲಿಯಾಗಿದ್ದಾರೆ.
ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ನಡುವಿನ ಸಂಘರ್ಷದ ಲಾಭ ಪಡೆದ ಉಗ್ರರು ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಇರಾನ್ ಅಧಿಕಾರಿಗಳು ಆರೋಪಿಸಿದ್ದಾರೆ. ಮೃತಪಟ್ಟವರಲ್ಲಿ ಭದ್ರತಾ ಸಿಬ್ಬಂದಿಯೂ ಸೇರಿದ್ದಾರೆ ಎಂದು ಹೇಳಿದ್ದರೂ ವಿವರ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಪ್ರತಿಭಟನಾಕಾರರ ದಾಳಿಯಿಂದ ಇದುವರೆಗೂ 200ಕ್ಕೂ ಹೆಚ್ಚು ಮಸೀದಿಗಳು ಧ್ವಂಸಗೊಂಡಿದ್ದು, ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ.
ಕಳೆದ 3 ವರ್ಷಗಳಿಂದ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವ ಇರಾನ್ ನಲ್ಲಿ ಇದೀಗ ಅಮೆರಿಕ ಕೂಡ ಮಧ್ಯಪ್ರವೇಶದಿಂದ ಅತಂತ್ರ, ಗೊಂದಲ ಸೃಷ್ಟಿಯಾಗಿದೆ.
1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಅಧಿಕಾರದಲ್ಲಿರುವ ಇರಾನ್ ಕ್ಲೆರಿಕಲ್ ಅಧಿಕಾರಿಗಳು, ಪ್ರದರ್ಶನಗಳಿಗೆ ದ್ವಂದ್ವ ವಿಧಾನವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ, ಆರ್ಥಿಕ ಸಮಸ್ಯೆಗಳ ಮೇಲಿನ ಪ್ರತಿಭಟನೆಗಳನ್ನು ನ್ಯಾಯಯುತವೆಂದು ಕರೆದಿದ್ದಾರೆ ಮತ್ತು ಕಠಿಣ ಭದ್ರತಾ ಕ್ರಮವನ್ನು ಜಾರಿಗೊಳಿಸುತ್ತಿದ್ದಾರೆ.
ಯುಎಸ್ ಮತ್ತು ಇಸ್ರೇಲ್ ಅಶಾಂತಿಯನ್ನು ಹುಟ್ಟುಹಾಕುತ್ತಿದೆ ಎಂದು ಇರಾನ್ ಆರೋಪಿಸಿದೆ. ಮತ್ತು ಭಯೋತ್ಪಾದಕರು ಎಂದು ಕರೆಯುವ ಅನಾಮಧೇಯ ವ್ಯಕ್ತಿಗಳು ಪ್ರತಿಭಟನೆಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


