ಕೇಂದ್ರ ಸರ್ಕಾರದ ಸೂಚನೆ ಮೇರೆಗೆ 10 ನಿಮಿಷದಲ್ಲಿ ಮನೆ ಮನೆಗೆ ವಸ್ತುಗಳನ್ನು ಡೆಲಿವರಿ ಮಾಡುವ ವ್ಯವಸ್ಥೆಯನ್ನು ಬ್ಲಿಂಕಿಟ್ ಮತ್ತು ಸ್ವಿಗ್ಗಿ ಕೈಬಿಟ್ಟಿದೆ.
ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಡಿಸೆಂಬರ್ 31ರಂದು ಸ್ವಿಗ್ಗಿ, ಜೊಮ್ಯಾಟೋ, ಜಿಪ್ಟೊ, ಫ್ಲಿಪ್ ಕಾರ್ಟ್, ಬ್ಲಿಂಕಿಟ್ ಸೇರಿ ಆನ್ಲೈನ್ ಆ್ಯಪ್ಗಳ ಗಿಗ್ ಕಾರ್ಮಿಕರ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಕಲ್ಯಾಣ ಸಚಿವಾಲಯದ ಸೂಚನೆ ಮೇರೆಗೆ 10 ನಿಮಿಷದಲ್ಲಿ ಡೆಲಿವರಿ ವ್ಯವಸ್ಥೆ ಕೈಬಿಟ್ಟಿದೆ.
ಡೆಲಿವರಿ ಬಾಯ್ ಗಳ ಸುರಕ್ಷತೆ ದೃಷ್ಟಿಯಿಂದ 10 ನಿಮಿಷಗಳಲ್ಲಿ ಡೆಲಿವರಿ ಶಪಥ ಮಾಡಬೇಡಿ. ಈ ವ್ಯವಸ್ಥೆಯನ್ನು ಕೈ ಬಿಡಿ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಆನ್ ಲೈನ್ ಶಾಪಿಂಗ್ ಕಂಪನಿಗಳಿಗೆ ಸೂಚಿಸಿದ್ದರು.
ಬ್ಲಿಂಕಿಟ್ ಸಂಸ್ಥೆ 10,000ಕ್ಕೂ ಅಧಿಕ ಡೆಲಿವರಿಗಳನ್ನು 10 ನಿಮಿಷದಲ್ಲಿ ಮಾಡಲಾಗಿದೆ. 30 ಸಾವಿರಕ್ಕೂ ಅಧಿಕ ಡೆಲಿವರಿಗಳನ್ನು 10 ನಿಮಿಷದಲ್ಲಿ ತಲುಪಿಸಲಾಗುವುದು ಎಂದು ಹೇಳಿಕೊಂಡಿತ್ತು.
10 ನಿಮಿಷದಲ್ಲಿ ಡೆಲಿವರಿ ಮಾಡ್ತೀವಿ ಎಂಬ ಕಂಪನಿಗಳ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇಂತಹ ನಿಯಮಗಳು ಜಾರಿಗೆ ಬಂದರೆ ಡೆಲಿವರಿ ಬಾಯ್ ಗಳ ಜೀವಕ್ಕೆ ಅಪಾಯ, ಸಂಚಾರ ನಿಯಮ ಉಲ್ಲಂಘನೆಗಳು ಹೆಚ್ಚಾಗಲಿವೆ ಎಂದು ಆರೋಪಗಳು ಕೇಳಿಬಂದಿದ್ದವು.
ಡೆಲಿವರಿ ಬಾಯ್ ಗಳ ಮುಷ್ಕರದ ಹಿನ್ನೆಲೆಯಲ್ಲಿ ಕೆಲವು ಬದಲಾವಣೆ ಮಾಡಲು ಕಂಪನಿಗಳು ಒಪ್ಪಿಕೊಂಡಿತ್ತು. ಇನ್ನು ಕಾರ್ಮಿಕರು 10 ನಿಮಿಷಗಳ ವಿತರಣಾ ಆಯ್ಕೆಯನ್ನು ತೆಗೆಯುವಂತೆ ಬೇಡಿಕೆಯನ್ನು ಇಟ್ಟಿದ್ದರು. ಹತ್ತು ನಿಮಿಷಗಳ ವಿತರಣಾ ಮಾದರಿಯಿಂದಾಗಿ ಸವಾರರು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅವರ ಸುರಕ್ಷತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಸಾರ್ವಜನಿಕರಿಂದ ಈ ಬಗ್ಗೆ ಚರ್ಚೆ ನಡೆದಿತ್ತು.
ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಮಧ್ಯ ಪ್ರವೇಶಿಸಿದ್ದು, ನಂತರ ಬ್ಲಿಂಕಿಟ್ ಎಲ್ಲಾ ಬ್ರ್ಯಾಂಡ್ ಪ್ಲ್ಯಾಟ್ಫಾರಂಗಳಿಂದ ತನ್ನ 10 ನಿಮಿಷಗಳ ಡೆಲಿವರಿ ವ್ಯವಸ್ಥೆಯನ್ನು ತೆಗೆದುಹಾಕಿದೆ. ಮಾಂಡವಿಯಾ ಅವರು ಬ್ಲಿಂಕಿಟ್, ಜೆಪ್ಟೊ, ಸ್ವಿಗ್ಗಿ ಮತ್ತು ಜೊಮಾಟೊ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ, ಕಾರ್ಮಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಕಟ್ಟುನಿಟ್ಟಾದ ವಿತರಣಾ ಸಮಯದ ಮಿತಿಗಳನ್ನು ತೆಗೆದುಹಾಕುವಂತೆ ಕಂಪನಿಗಳಿಗೆ ಸಲಹೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.


