ಬೆಂಗಳೂರಿನ ಐಐಎಂ ನಲ್ಲಿ ಜನವರಿ 16ರಂದು ಬೆಂಗಳೂರು ಸಮಾಜ ವಿಜ್ಞಾನ ಹಬ್ಬ ನಡೆಯಲಿದೆ. ಬಿಎಸ್ಎಸ್ಎಫ್ ಸಮಾಜ ವಿಜ್ಞಾನ ಶಿಕ್ಷಣದ 300ಕ್ಕೂ ಶಿಕ್ಷಕರು, ತಜ್ಞರು, ಇತಿಹಾಸ, ಭೂಗೋಳ, ಆಡಳಿತ ಹಾಗೂ ಸಂಸ್ಕೃತಿ ಬಗ್ಗೆ ಆಸಕ್ತಿ ಇರುವ ಯುವಕರನ್ನು ಒಟ್ಟಿಗೆ ಸೇರಿಸುವ ದೇಶದ ಮೊದಲ ವಾರ್ಷಿಕ ಹಬ್ಬ ಇದಾಗಿದೆ.
ಈ ಕಾರ್ಯಕ್ರಮದಲ್ಲಿ ಪ್ರಕಾಶ್ ಬೆಳವಾಡಿ, ಮಾಳವಿಕ ಅವಿನಾಶ್, ಪದ್ಮಶ್ರೀ ಪುರಸ್ಕೃತ ಪ್ರಹ್ಲಾದ ರಾಮರಾವ್, ಸ್ವಾಮಿ ಮಿತ್ರಾನಂದ ಹಾಗೂ ಅನೇಕ ಶಿಕ್ಷಣ ತಜ್ಞರು ಮಾತನಾಡಲಿದ್ದಾರೆ. ಕಾರ್ಯಕ್ರಮವನ್ನು ಬ್ಲೂವಿಸೆಲ್ ಸಂಸ್ಥೆ ಆಯೋಜಿಸುತ್ತಿದ್ದು, ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಇಒ ಪ್ರತೀಕ್ ಕನೋಡಿಯಾ, ಹಾಗೂ ಸಹ ಸಂಸ್ಥಾಪಕರಾದ ಐಶ್ವರ್ಯ ಡಿಕೆಎಸ್ ಹೆಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.
ಕಾರ್ಯಕ್ರಮಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಬಿಎಸ್ಎಸ್ಎಫ್ ತಂಡ (ಪ್ರತೀಕ್ ಮಂಜುನಾಥ್ +91 96115 09660) ಸಂಪರ್ಕಿಸಬಹುದು.


