ಹಾಸನದ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ಶಬರಿಮಲೆಗೆ ಹೋಗಿ ಬಂದ ದಿನವೇ ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆಗೈದು ಮೃತದೇಹವನ್ನು ನದಿಗೆ ಬಿಸಾಡಿದ್ದಾನೆ.
ನಾಲ್ಕು ವರ್ಷದಿಂದ ವರ್ಷಗಳಿಂದ ಆತನಿಂದ ದೂರವಿದ್ದ ಪತ್ನಿ, ಇದ್ದಕ್ಕಿದ್ದಂತೆ ಗಂಡನ ಬಳಿ ಬಂದು ಎರಡನೇ ಮದುವೆ ಬಗ್ಗೆ ಪ್ರಶ್ನಿಸಿದಾಗ ಸಿಟ್ಟಿಗೆದ್ದು ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.
ಕುಮಾರ್ ಎಂಬಾತ ಶಬರಿಮಲೆಗೆ ಹೋಗಿ ಬಂದ ದಿನವೇ ಪತ್ನಿ ರಾಧ (40) ಎಂಬಾಕೆಯನ್ನು ಕೊಲೆ ಮಾಡಿದ್ದಾನೆ. ನಾಲ್ಕು ವರ್ಷಗಳಿಂದ ರಾಧಾ ಪತಿಯಿಂದ ಬೇರೆಯಾಗಿ ವಾಸವಾಗಿದ್ದರಂತೆ. ಜನವರಿ ಮೊದಲ ವಾರ ಕುಮಾರ್ ಶಬರಿಮಲೆಗೆ ಹೋಗಿದ್ದರು. ಇರುಮುಡಿ ಕಟ್ಟೋ ವೇಳೆ ಪತ್ನಿ ಸ್ಥಾನದಲ್ಲಿ ಬೇರೊಬ್ಬ ಮಹಿಳೆ ಪೂಜೆ ಮಾಡಿರುವ ವಿಚಾರ ರಾಧಾಗೆ ಗೊತ್ತಾಗಿದೆ. ಈ ವಿಚಾರದ ಬಗ್ಗೆ ಪ್ರಶ್ನಿಸಲೆಂದು ಪತಿ ಶಬರಿಮಲೆಯಿಂದ ಬಂದ ಶನಿವಾರ ರಾತ್ರಿಯೇ ಯಡೂರಿಗೆ ರಾಧಾ ಬಂದಿದ್ದಾರೆ. ಎರಡನೇ ಮದುವೆ ಬಗ್ಗೆ ರಾಧ ಕೇಳಿದ್ದಕ್ಕೆ ಜಗಳ ನಡೆದಿದೆ. ಗಲಾಟೆ ಜೋರಾಗಿ ಕುಮಾರ್, ರಾಧಳನ್ನು ಕೊಲೆ ಮಾಡಿದ್ದಾನೆ.
ಆಕೆಯ ಮೃತ ದೇಹವನ್ನ ಯಗಚಿ ನದಿಗೆ ಎಸೆದಿದ್ದ ಆರೋಪಿ ತಾನೇ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಯಗಚಿ ನದಿಯಿಂದ ಮೃತದೇಹ ಹೊರ ತೆಗೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


