ವಿದ್ಯುತ್ ಚಾಲಿತ ಕಾರು ತಯಾರಿಕಾ ಕಂಪನಿ ‘ಟೆಸ್ಲಾ’ ಬೆಂಗಳೂರಿನಲ್ಲಿ ಜನವರಿ 15ರಂದು ಶೋ ರೂಂ ಆರಂಭಿಸುತ್ತಿದೆ. ಈ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಇಲಾನ್ ಮಸ್ಕ್ ಕಂಪನಿ ಸಿಲಿಕಾನ್ ಸಿಟಿಗೆ ಕಾಲಿಡಲಿದೆ.
ಬೆಂಗಳೂರಿನ ಕೂಡ್ಲೂ ಗೇಟ್ ನಲ್ಲಿ ತಾತ್ಕಾಲಿಕವಾಗಿ ಎಸಿಕೆಒ ಡ್ರೈವ್ ಸರ್ವಿಸ್ ಸೆಂಟರ್ ಕಲ್ಲಿ ಶೋ ರೂಮ್ ಆರಂಭವಾಗಲಿದೆ. ವಿದ್ಯುತ್ ಚಾಲಿತ ವಾಹನಗಳ ಮೇಲೆ ಒಲವು ಹೊಂದಿರುವ ವಾಹನ ಮಾಲೀಕರಿಗೆ ಇದು ಸಿಹಿಸುದ್ದಿ ಆಗಿದೆ.
2023-2024ರಲ್ಲಿ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಕಾರುಗಳು ಟೆಸ್ಲಾ ಕಂಪನಿಯದ್ದಾಗಿದೆ. ಗ್ರಾಹಕರು ಶೋರೂಂಗೆ ಭೇಟಿ ನೀಡಿ ವಾಹನದ ವಿನ್ಯಾಸ, ತಂತ್ರಜ್ಞಾನ, ಸುರಕ್ಷತೆ, ಸಾಫ್ಟ್ ವೇರ್ ಸೇರಿದಂತೆ ಕಾರಿಗೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಪಡೆಯಬಹುದಾಗಿದೆ.
ವಿದ್ಯುತ್ ಚಾಲಿತ ವಾಹನಗಳಿಗೆ ಅತೀ ಹೆಚ್ಚು ಬೇಡಿಕೆ ಹೊಂದಿರುವ ನಗರಗಳಲ್ಲಿ ಬೆಂಗಳೂರು ಮಂಚೂಣಿಯಲ್ಲಿದೆ. ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಶೋರೂಂ ತೆರೆಯುವುದರಿಂದ ಆಸಕ್ತರಿಗೆ ಸೂಕ್ತ ಮಾಹಿತಿ ಪಡೆಯಲು ನೆರವಾಗಲಿದೆ ಎಂದು ಕಂಪನಿ ಹೇಳಿದೆ.
ಕಂಪನಿಯು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಆಸಕ್ತರಿಗೆ ಟೆಸ್ಟ್ ಡ್ರೈವ್ ಅವಕಾಶ ನೀಡಿದೆ. ಟೆಸ್ಲಾ ಇಂಡಿಯಾ ವೆಬ್ ಸೈಟ್ ಮೂಲಕ ವಾಹನ ಖರೀದಿ ಆಸಕ್ತರು ಟೆಸ್ಟ್ ಡ್ರೈವ್ ಗೆ ನೋಂದಣಿ ಮಾಡಿಕೊಳ್ಳಬಹುದು.
ಟೆಸ್ಲಾ ಶೋರೂಂನಲ್ಲಿ ಮಾಡೆಲ್ ವೈ ಕಾರುಗಳು ಮಾತ್ರ ಸದ್ಯಕ್ಕೆ ಲಭ್ಯವಿದೆ. ಈ ಕಾರು ಅತ್ಯಾಧುನಿಕವಾಗಿದ್ದು, ಕೇವಲ 15 ನಿಮಿಷಗಳಲ್ಲಿ 267 ಕಿ.ಮೀ. ವೇಗವಾಗಿ ಸಂಚರಿಸಬಲ್ಲದು.
ಜಾಗತಿಕವಾಗಿ ಅತ್ಯಂತ ಹೆಚ್ಚು ಖ್ಯಾತವಾಗಿರುವ ಮಾಡೆಲ್ ವೈ ಕಾರು ಟೆಸ್ಲಾದ ಸೂಪರ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದ್ದು, ಈ ವಾಹನವು ಕೇವಲ 15 ನಿಮಿಷಗಳಲ್ಲಿ 267 ಕಿಮೀ ಚಾಲನಾ ಸಾಮರ್ಥ್ಯ ಹೊಂದಿದೆ.ಇದು ದೂರದ ಪ್ರಯಾಣಕ್ಕಾಗಿ ಚಾರ್ಜಿಂಗ್ ಆತಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಟೆಸ್ಲಾ ಭಾರತದಲ್ಲಿ ಗ್ರಾಹಕರಿಗೆ ಹೋಮ್-ಚಾರ್ಜಿಂಗ್ ಕೂಡ ಮಾಡಿಕೊಳ್ಳಬಹುದಾಗಿದೆ.
ರೇರ್ ವ್ಹೀಲ್ ಡ್ರೈವ್ ಕಾರುಗಳು ಶೋರೂಮ್ ಬೆಲೆ 59 ಲಕ್ಷದ 89 ಸಾವಿರ ರೂ. ಆಗಿದೆ. ಲಾಂಗ್ ರೇಂಜ್ ರೇರ್ ವ್ಹೀಲ್ ಡ್ರೈವ್ ಕಾರುಗಳು 67 ಲಕ್ಷದ 89 ಸಾವಿರೂ. ಶೋರೂಂ ಬೆಲೆಯಾಗಿದೆ.
ಕಾರು ಖರೀದಿಸಬೇಕಾದರೆ 22,220 ರೂ. ಆರ್ಡರ್ ಠೇವಣಿ ಮತ್ತು 50,000 ರೂ. ನಿರ್ವಾಹಕ ಮತ್ತು ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವೈಯಕ್ತಿಕ ಅರ್ಹತೆಯನ್ನು ಅವಲಂಬಿಸಿ ಶೇ. 8.7 ಮತ್ತು ಶೇ.11ರ ನಡುವೆ ಸೂಚಿತ ಬಡ್ಡಿದರಗಳೊಂದಿಗೆ ಬ್ಯಾಂಕುಗಳ ಮೂಲಕ ಹಣಕಾಸು ಲಭ್ಯವಿದೆ.


