ಕನ್ನಡ ಬಿಗ್ ಬಾಸ್-12 ಮುಗಿಯುವ ಹಂತಕ್ಕೆ ಬಂದಿದ್ದು, ಮುಂದಿನ ವಾರ ಫೈನಲ್ ಆಗಲಿದೆ. ಈ ನಡುವೆ ಬಿಗ್ಬಾಸ್ ಶೋ ಹಾಗೂ ನಟ ಸುದೀಪ್ ವಿರುದ್ಧ ರಣಹದ್ದುಗಳ ಕುರಿತು ತಪ್ಪು ಮಾಹಿತಿ ನೀಡಿರುವ ಕಾರಣಕ್ಕೆ ದೂರು ದಾಖಲಾಗಿದೆ.
ಸುದೀಪ್ ರಣಹದ್ದುಗಳ ಬಗ್ಗೆ ನಟ ಸುದೀಪ್ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಸುದೀಪ್ ವಿರುದ್ಧ ಪಕ್ಷಿಪ್ರೇಮಿಗಳು ಹಾಗೂ ರಹಣದ್ದು ಸಂರಕ್ಷಣಾ ಟ್ರಸ್ಟ್ ಬೆಂಗಳೂರು ದಕ್ಷಿಣ DFO ರಾಮಕೃಷ್ಣಪ್ಪಗೆ ದೂರು ನೀಡಿದ್ದಾರೆ.
ರಣಹದ್ದುವಿನಂತೆ ಹೊಂಚು ಹಾಕಿ ಸಂಚು ಮಾಡಿ ಹಿಡಿಯುವುದು ಎಂದು ಸುದೀಪ್ ರಣಹದ್ದುಗಳ ಬಗ್ಗೆ ಆಕ್ಷೇಪಾರ್ಹ ಮಾತು ಆಡಿದ್ದಾರೆ. ರಣಹದ್ದುಗಳು ಹೊಂಚು ಹಾಕಿ ಹಿಡಿಯಲ್ಲ. ಇದು ತಪ್ಪು ತಿಳುವಳಿಕೆ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಬೆಂಗಳೂರಿನ ದಕ್ಷಿಣ ಡಿಎಫ್ ಒ ರಾಮಕೃಷ್ಣ ಅವರಿಗೆ ದೂರು ನೀಡಿದೆ. ಮುಂದಿನ ಸಂಚಿಕೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ ತಿದ್ದುಕೊಳ್ಳುವಂತೆ ಹಾಗೂ ಹದ್ದುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ವೀಕ್ಷಕರಿಗೆ ತಿಳಿಸಬೇಕೆಂದು ಆಗ್ರಹಿಸಲಾಗಿದೆ.
ಇತ್ತೀಚೆಗೆ ಮಹಿಳಾ ಸ್ಪರ್ಧಿಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಹೋಗಿದೆ. ಅಶ್ವಿನಿ ಗೌಡ ವಿರುದ್ಧವೂ ಜಾತಿ ನಿಂದನೆ ಆರೋಪದಡಿ ದೂರು ದಾಖಲಾಗಿದೆ. ಈಗ ಸುದೀಪ್ ವಿರುದ್ಧ ರಣಹದ್ದುಗಳ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ನಿಂದ ದೂರು ದಾಖಲಾಗಿದೆ.


