ತುಮಕೂರು ಜಿಲ್ಲೆಯ ಬ್ಯಾತ ಗ್ರಾಮದಲ್ಲಿ ಯುವತಿಯೊಬ್ಬಳು ಋತುಸ್ರಾವದ ವೇಳೆ ಬಾಧಿಸುವ ಹೊಟ್ಟೆನೋವು ತಾಳಿಕೊಳ್ಳಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 19 ವರ್ಷದ ಕೀರ್ತನಾ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಕಲಬುರಗಿ ಜಿಲ್ಲೆಯ ಕಲಗಿ ತಾಲೂಕಿನ ಸಾಲಹಳ್ಳಿ ನಿವಾಸಿ ಕೀರ್ತನಾ ತುಮಕೂರಿನ ಬ್ಯಾತ ಗ್ರಾಮದಲ್ಲಿ ಇರುವ ಚಿಕ್ಕಪ್ಪನ ಮನೆಯಲ್ಲಿ ಇದ್ದುಕೊಂಡು ಕಳೆದರಡು ತಿಂಗಳಿಂದ ಕೆಲಸಕ್ಕಾಗಿ ಪ್ಯತ್ನ ಮಾಡುತ್ತಿದ್ದಳು. ಆದರೆ ಸೂಕ್ತ ಉದ್ಯೋಗ ಲಭಿಸಿರಲಿಲ್ಲ.
ಪೋಷಕರು ನೀಡಿರುವ ಮಾಹಿತಿಯ ಪ್ರಕಾರ, ಕೀರ್ತನಾ ಕೆಲವು ಸಮಯದಿಂದ ತೀವ್ರ ಋತುಸ್ರಾವದ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದಳು. ಆತ್ಮಹತ್ಯೆ ಮಾಡಿಕೊಂಡ ದಿನ ಚಿಕ್ಕಪ್ಪನ ಮನೆಯಲ್ಲಿ ಯಾರೂ ಇರಲಿಲ್ಲ, ಹೊಟ್ಟೆನೋವು ತಾಲಲಾಗದೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕ್ಯಾತಸಂದ್ರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಾಗಿದೆ.


