Menu

ಕನ್ನಡದ ಖ್ಯಾತ ಲೇಖಕಿ ಆಶಾ ರಘು ಆತ್ಮಹತ್ಯೆ

asha raghu

ಬೆಂಗಳೂರು: ಪತಿಯ ಸಾವಿನಿಂದ ಮಾನಸಿಕವಾಗಿ ಅಘಾತಕ್ಕೊಳಗಾಗಿದ್ದ ಲೇಖಕಿ ಪ್ರಕಾಶಕಿ ಆಶಾ ರಘು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಲ್ಲೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ಆಶಾ ರಘು ನೇಣಿಗೆ ಶರಣಾಗಿದ್ದಾರೆ. ಎರಡು ವರ್ಷಗಳ ಹಿಂದೆ ಅವರ ಪತಿ, ಆಹಾರ ತಜ್ಞ ಕೆ.ಸಿ ರಘು ಅವರು ಕ್ಯಾನ್ಸರ್‌ಗೆ ತುತ್ತಾಗಿ ಸಾವನ್ನಪ್ಪಿದ್ದರು. ಅವರ ಅಗಲಿಕೆಯಿಂದ ಆಶಾ ಅವರು ಮಾನಸಿಕವಾಗಿ ನೊಂದಿದ್ದರು.

ಈ ನೋವನ್ನು ಮೀರಲು ಸಾಹಿತ್ಯ ಕೃತಿಗಳ ರಚನೆ, ಉಪಾಸನಾ ಬುಕ್ಸ್ ಎಂಬ ಪ್ರಕಾಶನ ಸಂಸ್ಥೆ ಕಟ್ಟಿ ಅದರ ಮೂಲಕ ಯುವ ಸಾಹಿತಿಗಳ ಪುಸ್ತಕ ಪ್ರಕಟಣೆ ಮೊದಲಾದ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಆಂತರಿಕವಾಗಿ ಬಹಳ ಕುಸಿದಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.

ಆಶಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಶನಿವಾರ ಸಂಜೆ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಿತು . ಕೆ.ಸಿ ರಘು ಮತ್ತು ಆಶಾ ದಂಪತಿಗೆ ಓರ್ವ ಮಗಳು ಇದ್ದಾರೆ. ಆಶಾ ಅವರ ಅಗಲಿಕೆಗೆ ನೂರಾರು ಸಾಹಿತ್ಯಪ್ರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿ ಮೃತರ ಕುಟುಂಬದವರಿಗೆ ಸಾಂತ್ವನ ತಿಳಿಸಿದ್ದಾರೆ.

ಆಶಾ ರಘು ಅವರು ಆವರ್ತ, ಗತ, ಮಾಯೆ, ಚಿತ್ತರಂಗ, ಕೆಂಪು ದಾಸವಾಳ, ವಕ್ಷ ಸ್ಥಲ ಕಾದಂಬರಿಗಳನ್ನು ಬರೆದಿದ್ದಾರೆ. ಆರನೇ ಬೆರಳು, ಬೊಗಸೆಯಲ್ಲಿ ಕಥೆಗಳು, ಅಪರೂಪದ ಪುರಾಣ ಕಥೆಗಳು ಸೇರಿದಂತೆ ಹಲವು ಕಥಾಸಂಕಲನಗಳನ್ನು ರಚಿಸಿದ್ದಾರೆ. ಅಲ್ಲದೆ, ಚೂಡಾಮಣಿ, ಕ್ಷಮಾದಾನ, ಬಂಗಾರದ ಪಂಜರ ಮತ್ತು ಪೂತನಿ ನಾಟಕಗಳನ್ನು ಬರೆದಿದ್ದಾರೆ. ಶನಿವಾರ ಅಂತ್ಯಕ್ರಿಯೆ ನೆರವೇರಿದೆ.

Related Posts

Leave a Reply

Your email address will not be published. Required fields are marked *