Saturday, January 10, 2026
Menu

ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಕಾಂತಾರ ಚಾಪ್ಟರ್ -1

kantara chapter 1

ರಿಷಭ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿದ ಕಾಂತಾರ ಚಾಪ್ಟರ್ 1 ಚಿತ್ರ 98ನೇ ಅಕಾಡೆಮಿ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿದ್ದು ಶೀಘ್ರದಲ್ಲೇ ಹೊರಬೀಳಲಿರುವ ಭಾರತೀಯ ಚಿತ್ರಗಳ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವ ಭರವಸೆ ಮೂಡಿಸಿದೆ.

ನಟ​ ರಿಷಬ್ ಶೆಟ್ಟಿ ಸಾರಥ್ಯದ ‘ಕಾಂತಾರ: ಎ ಲೆಜೆಂಡ್ – ಅಧ್ಯಾಯ 1’ ಮತ್ತು ಅನುಪಮ್ ಖೇರ್ ಅವರ ‘ತನ್ವಿ: ದಿ ಗ್ರೇಟ್’ ಚಿತ್ರಗಳು 98ನೇ ಆಸ್ಕರ್‌ನಲ್ಲಿ ಪರಿಗಣನೆಗೆ ಅರ್ಹವಾಗಿರುವ 201 ಸಿನಿಮಾ ಪಟ್ಟಿಯಲ್ಲಿ (Best Picture race) ಸೇರಿಕೊಂಡಿವೆ.

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ (AMPAS) ಪ್ರತಿಷ್ಠಿತ ಅತ್ಯುತ್ತಮ ಚಿತ್ರ ಸ್ಪರ್ಧೆಗೆ ನೇರವಾಗಿ ಅರ್ಹತೆ ಪಡೆಯುವ 201 ಅರ್ಹ ಚಲನಚಿತ್ರಗಳ ಹೆಸರನ್ನು ಬಹಿರಂಗಪಡಿಸಿದೆ. ಅಕಾಡೆಮಿಯ ಪ್ರಕಾರ, ಅತ್ಯುತ್ತಮ ಚಿತ್ರಕ್ಕಾಗಿ ಅರ್ಹ ಚಲನಚಿತ್ರಗಳು ಸಾಮಾನ್ಯ ಪ್ರವೇಶಕ್ಕೆ ಬೇಕಾಗಿರುವ ಎಲ್ಲಾ ಹೆಚ್ಚುವರಿ ಅರ್ಹತಾ ಅವಶ್ಯಕತೆಗಳನ್ನು ಪೂರೈಸಿವೆ.

2025ರ ನವೆಂಬರ್ ಆರಂಭದಲ್ಲಿ, ಅಕಾಡೆಮಿಯು ಅತ್ಯುತ್ತಮ ಸಾಕ್ಷ್ಯಚಿತ್ರ, ಅನಿಮೇಟೆಡ್ ಫೀಚರ್ ಮತ್ತು ಇಂಟರ್​ನ್ಯಾಷನಲ್​​ ಫೀಚರ್​​ ಫಿಲ್ಮ್​ಗೆ ಅರ್ಹವಾದ ಚಲನಚಿತ್ರಗಳನ್ನು ಬಹಿರಂಗಪಡಿಸಿತು. ಆಸ್ಕರ್​ನ ಅಂತಿಮ ನಾಮನಿರ್ದೇಶನಗಳು ಜನವರಿ 22ರಂದು ಪ್ರಕಟಗೊಳ್ಳಲಿದೆ.

ಸಂತಸ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್​

‘ನಮ್ಮ ಸಂಸ್ಕೃತಿಯಲ್ಲಿ ಬೇರೂರಿದೆ, ದೈವತ್ವದಿಂದ ನಡೆಸಲ್ಪಡುತ್ತಿದೆ. ಆಸ್ಕರ್ ಅಕಾಡೆಮಿ ಪ್ರಶಸ್ತಿಗಳು 2026ರಲ್ಲಿ ಕಾಂತಾರ ಅಧ್ಯಾಯ 1 ಅತ್ಯುತ್ತಮ ಚಿತ್ರ ಸ್ಪರ್ಧೆಗೆ (Best Picture contending race) ಪ್ರವೇಶಿಸಿದ್ದು ಹೆಮ್ಮೆಯ ಕ್ಷಣ” ಎಂದು 2025ರ ಬ್ಲಾಕ್​ಬಸ್ಟರ್ ಚಿತ್ರ ಕಾಂತಾರ ಚಾಪ್ಟರ್ 1ನ್ನು ನಿರ್ಮಾಣ ಮಾಡಿದ ಕನ್ನಡದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ. ಡಿವೈನ್​​​ ಸ್ಟಾರ್​ನ ಪೋಸ್ಟರ್​ ಅನ್ನೂ ಇಲ್ಲಿ ಹಂಚಿಕೊಳ್ಳಲಾಗಿದೆ.

‘ಕಾಂತಾರ: ಅಧ್ಯಾಯ 1’ ಸಿನಿಮಾ ತುಳುನಾಡಿನಲ್ಲಿ ಹೆಚ್ಚು ಆಚರಿಸಲ್ಪಡುವ, ನಂಬಲ್ಪಡುವ ದೈವಾರಾಧನೆಯ ಮೂಲದ ಸುತ್ತ ಸುತ್ತುತ್ತದೆ. ನಾಲ್ಕನೇ ಶತಮಾನದ ಕದಂಬ ರಾಜವಂಶ, ಕಾಂತಾರ ಅರಣ್ಯ ಮತ್ತು ಅದರ ಬುಡಕಟ್ಟು ಸಮುದಾಯಗಳ ರಕ್ಷಕ ಬೆರ್ಮೆ ಪಾತ್ರವನ್ನು ನಿರ್ವಹಿಸಿದ ರಿಷಬ್ ಶೆಟ್ಟಿ ಕಥೆಯ ಸುತ್ತ ಸಿನಿಮಾ ಸಾಗುತ್ತದೆ.

Related Posts

Leave a Reply

Your email address will not be published. Required fields are marked *