ಮದುವೆ ಮಾಡಿಲ್ಲ ಎಂದು ತಂದೆಯನ್ನೇ ಮಗನೊಬ್ಬ ಕೊಲೆಗೈದಿರುವ ಘಟನೆ ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಅತ್ತಿಘಟ್ಟ ಗ್ರಾಮ ಕೊಲೆ ನಡೆದಿದೆ. ಸಣ್ಣ ನಿಂಗಪ್ಪ (60) ಕೊಲೆಯಾದ ವೃದ್ಧ ತಂದೆ. ಪುತ್ರ ಲಿಂಗರಾಜ್ ತಂದೆಯನ್ನೇ ಕೊಲೆಗೈದ ಆರೋಪಿ.
ಮನೆಯಲ್ಲಿ ಲಿಂಗರಾಜ್ ಮದುವೆ ವಿಚಾರಕ್ಕೆ ಜಗಳ ಮಾಡಿದ್ದು, ತಂದೆಯ ತಲೆಗೆ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಆರೋಪಿ ಲಿಂಗರಾಜನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಹೊಸದುರ್ಗ ಪಿ.ಐ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.
ಕೊಲೆ ವಿಷಯ ತಿಳಿದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹೊಸದುರ್ಗ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಾದ ನಿಂಗರಾಜನನ್ನು ವಿಚಾರಣೆ ನಡೆಸಲಾಗುತ್ತಿದೆ.
ನಿಂಗರಾಜ ತನ್ನ ಮದುವೆಯನ್ನು ಪೋಷಕರು ಮಾಡಿಲಿಲ್ಲ ಎಂಬ ಕಾರಣಕ್ಕೆ ಹಲವು ದಿನಗಳಿಂದ ಮನೆಯಲ್ಲೇ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಘಟನೆಯ ದಿನ ರಾತ್ರಿ ಸಣ್ಣ ನಿಂಗಪ್ಪ ಮನೆಯಲ್ಲಿ ನಿದ್ರಿಸುತ್ತಿದ್ದಾಗ ಕೋಪದಿಂದ ನಿಂಗರಾಜ ಕಬ್ಬಿಣದ ರಾಡ್‌ನಲ್ಲಿ ತಂದೆಯ ತಲೆಗೆ ಹೊಡೆದು ಹತ್ಯೆಗೈದಿದ್ದಾನೆ. ಗಾಯಗೊಂಡ ಸಣ್ಣ ನಿಂಗಪ್ಪ ಸ್ಥಳದಲ್ಲೇ ಅಸು ನೀಗಿದ್ದಾರೆ.


