Menu

ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಅಪ್ಪ, ಮಗನ ಬಂಧನ

ತಿ.ನರಸೀಪುರ ತಾಲೂಕಿನ ಮಾದಾಪುರ ಗ್ರಾಮದ ಸಮೀಪ  ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಅಪ್ಪ, ಮಗನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಹಿರಿಯೂರು ಗ್ರಾಮದ ನಾಗೇಶ ಬಿನ್ ಶಿವಪ್ರಸಾದ್(28) ಹಾಗೂ ಶಿವಪ್ರಸಾದ್ ಬಿನ್ ಷಡಕ್ಷರಿ(48)  ಖೋಟಾ ನೋಟು ಪ್ರಿಂಟ್ ಮಾಡಿ ಪೋಲೀಸರ ಬಲೆಗೆ ಬಿದ್ದ ಆರೋಪಿಗಳು.

ಮಾದಾಪುರ ಎಲ್ಲೆಯಲ್ಲಿ ನಾಗೇಶ್ ಮತ್ತು ಶಿವಪ್ರಸಾದ್ ರವರಿಗೆ ಸೇರಿದ ಜಮೀನಿನಲ್ಲಿ ದನ ಕಟ್ಟುವ ಶೆಡ್ ನಿರ್ಮಿಸಿಕೊಂಡು ಖೋಟಾ ನೋಟ್ ಪ್ರಿಂಟ್ ಮಾಡಲಾಗುತ್ತಿತ್ತು.

ರಾತ್ರಿ  ಹಿರಿಯೂರು ಗ್ರಾಮಕ್ಕೆ ಹೋದ ಪೋಲೀಸರ ತಂಡ ಅಲ್ಲಿಂದ ಮಾದಾಪುರ ಕಡೆಗೆ ಹೋಗಿ  ಶೆಡ್ ಸುತ್ತುವರೆದು ಕಾರ್ಯಾಚರಣೆ ಮಾಡಿದ್ದಾರೆ. ಆರೋಪಿಗಳು ತಾವು ಮಲಗಿಕೊಳ್ಳಲು ಹಾಸಿಕೊಂಡಿದ್ದ ಹಾಸಿಗೆಯ ಪಕ್ಕದಲ್ಲಿ ರಟ್ಟಿನ ಬಾಕ್ಸ್ ಒಳಗಡೆ ಖೋಟಾ ನೋಟು ಪ್ರಿಂಟ್ ಮಾಡಲು ಬಳಸುತ್ತಿದ್ದ ಸಾಧನಗಳು ಪತ್ತೆಯಾಗಿವೆ.

ಬಂಧಿತರಿಂದ ಒಂದು ಕಪ್ಪು ಬಣ್ಣದ ಎಪ್ಸನ್ ಕಲರ್ ಪ್ರಿಂಟರ್,ಕಪ್ಪು ಬಣ್ಣದ ಪೇಪರ್ ಮೆಷರ್ ಮೆಂಟ್ ಕಟಿಂಗ್ ಸ್ಕೇಲ್,ಎ4 ಅಳತೆಯ ಗಾಂಧೀಜಿ ಭಾವಚಿತ್ರದ ವಾಟರ್ ಮಾರ್ಕ್ ಮತ್ತು ನೋಟಿನ ಗೆರೆಯುಳ್ಳ ಬಿಳಿ ಬಣ್ಣದ ಹಾಳೆ,4 ಕಲರ್ ಇಂಕ್ ಬಾಟೆಲ್,ಎ4 ಸೈಜ್ ಅಳತೆಯ 19 ಸಂಖ್ಯೆಯ ಬಿಳಿ ಹಾಳೆಗಳು ಹಾಗೂ ಅಸಲಿ ನೋಟುಗಳಂತೆ ಕಾಣುವ 25,500 ರೂ.ಮೌಲ್ಯದ 51 ಖೋಟಾ ನೋಟುಗಳೊಂದಿಗೆ ಮತ್ತಿತರ ವಸ್ತುಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

 

Related Posts

Leave a Reply

Your email address will not be published. Required fields are marked *