Wednesday, January 07, 2026
Menu

“ತಿಥಿ” ಖ್ಯಾತಿಯ ಸೆಂಚುರಿ ಗೌಡ ಇನ್ನಿಲ್ಲ

ತಿಥಿ ಸಿನಿಮಾದಲ್ಲಿ ಸೆಂಚುರಿ ಗೌಡ ಪಾತ್ರ ನಿರ್ವಹಿಸಿ ಜನಮನ ಗೆದ್ದಿದ್ದ  ಪಾಂಡವಪುರ ತಾಲೂಕಿನ  ಸಿಂಗ್ರೆಗೌಡ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೆಗೌಡನ ಕೊಪ್ಪಲು ಗ್ರಾಮದಲ್ಲಿ ನೆಲೆಸಿದ್ದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

100 ವರ್ಷ ದಾಟಿದ್ದ ಅವರು ಸಿನಿಮಾದಲ್ಲೂ ಸೆಂಚುರಿ ಗೌಡ ಪಾತ್ರದಲ್ಲಿ ಅಭಿನಯಿಸುವ ಮೂಲಕ ಪ್ರಸಿದ್ಧರಾಗಿದ್ದರು. ಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ. 2015 ರಲ್ಲಿ ಬಿಡುಗಡೆಯಾಗಿದ್ದ ತಿಥಿ ಸಿನಿಮಾ ಹಲವು ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

ಸಿನಿಮಾ ನಿರ್ದೇಶಕರು ಸಿಂಗ್ರಿಗೌಡ ಅವರನ್ನು ಆಯ್ಕೆ ಮಾಡಿದ್ದೇ ಒಂದು ಅಚ್ಚರಿ. ಸಿಂಗ್ರಿಗೌಡ ಅಣ್ಣ ಸತ್ತು ಹೋಗಿದ್ದರಂತೆ. ಅವರ ತಿಥಿಗೆ ‘ತಿಥಿ’ ಸಿನಿಮಾ ನಿರ್ದೇಶಕರು ಬಂದಿದ್ದರು. ಈ ವೇಳೆ ಸಿನಿಮಾ ಸೆಂಚುರಿ ಗೌಡ ಇಷ್ಟ ಆಗಿ ಸಿನಿಮಾ ಅವಕಾಶ ಕೊಟ್ಟರು. ಸಿನಿಮಾದಲ್ಲಿ ಸೆಂಚುರಿ ಗೌಡ ಪಾತ್ರ ಮಾಡಿದ್ದರು. ಈ ಚಿತ್ರಕ್ಕಾಗಿ ಅವರಿಗೆ 20 ಸಾವಿರ ಸಂಭಾವನೆ ಸಿಕ್ಕಿತ್ತು ಎನ್ನಾಗಿದೆ. ಬಳಿಕ ಅನೇಕ ಚಿತ್ರಗಳಲ್ಲಿ ಸಿಂಗ್ರಿಗೌಡ ನಟಿಸಿದ್ದಾರೆ.

ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ 2025 ನವೆಂಬರ್ 12ರಂದು ನಿಧನ ಹೊಂದಿದ್ದರು.

Related Posts

Leave a Reply

Your email address will not be published. Required fields are marked *