ಬಳ್ಳಾರಿಯಲ್ಲಿ ನಿನ್ನೆ ನಡೆದ ಬ್ಯಾನರ್ ಕಟ್ಟುವ ವಿಷಯದಲ್ಲಿ ಗಲಾಟೆ ವಿಷಯದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವಿನ ವಿಷಯದಲ್ಲಿ ಯಾವುದೇ ರೀತಿಯ ತನಿಖೆಗೆ ನಾವು ಸಿದ್ಧ. ಆದರೆ ಈ ರೀತಿಯ ಗೂಂಡಾಗಿರಿಗೆ ನಾವು ಬಗ್ಗುವುದಿಲ್ಲ ಎಂದು ಬಿಜೆಪಿಯ ಮಾಜಿ ಶಾಸಕ ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ಸವಾಲು ಹಾಕಿದ್ದಾರೆ.
ಬಳ್ಳಾರಿಯಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ನಿನ್ನೆ ನಡೆದ ಘರ್ಷಣೆಯಲ್ಲಿ ನಮ್ಮ ಕಡೆಯಿಂದ ಸಣ್ಣ ತಪ್ಪು ಆಗಿಲ್ಲ. ಯುವಕರು ಈ ರೀತಿಯ ಪ್ರಚೋದನೆಗೆ ಒಳಗಾಗಿ ಜಗಳ ಮಾಡಬೇಡಿ. ಹೋರಾಟ ಮಾಡುವುದರಲ್ಲಿ ತಪ್ಪಿಲ್ಲ ಎಂದರು.
ಕಾಂಗ್ರೆಸ್ ಶಾಸಕರು ವೈಯಕ್ತಿಕ ದ್ವೇಷದಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಪಾಯಿಂಟ್ ೭೬ ಎಂಎಂ ಬುಲೆಟ್ ಫೈರಿಂಗ್ ಆಗಿದೆ. ಶಾಸಕರು ಆವೇಶದಿಂದ ನಮ್ಮ ಮೇಲಿನ ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕ್ಷುಲಕ ಕಾರಣಕ್ಕಾಗಿ ಗಲಾಟೆ ಮಾಡಿದ್ದಾರೆ. ಇದೇ ಗಲಾಟೆಯ ಲಾಭ ಪಡೆದು ಜನಾರ್ದನ ರೆಡ್ಡಿ ಹತ್ಯೆಗೆ ಯತ್ನ ನಡೆದಿದೆ. ಈ ಬಗ್ಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅಥವಾ ಸಿಬಿಐ ಮೂಲಕ ತನಿಖೆ ಮಾಡಿಸಿ. ತಪ್ಪು ಕಂಡು ಬಂದರೆ ನಾವು ಯಾವುದೇ ಶಿಕ್ಷೆಗೆ ಸಿದ್ಧರಾಗಿದ್ದೇವೆ.
ವಾಲ್ಮೀಕಿ ಬಾವುಟ ಹಾಕುತ್ತಿದ್ದಾಗ ಜನಾರ್ದನ ರೆಡ್ಡಿ ಮನೆಗೆ ಬಂದಿದ್ದು, ಜಾಗ ಬಿಡಿ ಎಂದು ಕೇಳಿದ್ದಕ್ಕೆ ಪೂರ್ವ ಯೋಜಿತ ದಾಳಿ ನಡೆಸಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಶ್ರೀರಾಮುಲು ಆರೋಪಿಸಿದರು.
ಪೊಲೀಸರು .35 ಗನ್ ಗೆ ಅನುಮತಿ ಕೊಡುತ್ತಾರೆ. ಆದರೆ ಸತೀಶ್ ರೆಡ್ಡಿ ಅವರ ಬೆಂಬಲಿಗರು ಹಾರಿಸಿದ ಗುಂಡು .72 ಎಂಎಂ ನಿಂದ ಗುಂಡು ಹಾರಿಸಿದ್ದಾರೆ. ದಾಳಿ ವೇಳೆ ಪೆಟ್ರೋಲ್ ಬಾಂಬ್ ಕೂಡ ತಂದಿದ್ದರು ಎಂಬ ಬಗ್ಗೆ ಮಾಹಿತಿ ಇದೆ ಎಂದು ಅವರು ಗಂಭೀರ ಆರೋಪ ಮಾಡಿದರು.


