Thursday, January 01, 2026
Menu

ಬುರ್ಖಾ ಧರಿಸಿ ಲಿಪ್ಸ್ಟಿಕ್‌ ಹಚ್ಚಿ ಓಡಾಡುತ್ತಿದ್ದ ಬಾಲಕಿಯ ರೇಪಿಸ್ಟ್‌ ಪಿಸಿ ರಾಜೇಂದ್ರ ಸಿಸೋಡಿಯಾ ಅರೆಸ್ಟ್‌

ರಾಜಸ್ಥಾನದ ಧೋಲ್ಪುರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಬುರ್ಖಾ ಧರಿಸಿ ಲಿಪ್ಸ್ಟಿಕ್‌ ಹಚ್ಚಿಕೊಂಡು ಮಹಿಳೆಯಂತೆ‌ ನಟಿಸುತ್ತ ತಪ್ಪಿಸಿಕೊಳ್ಳುತ್ತಿದ್ದ ಪೊಲೀಸ್ ಪೇದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಧೋಲ್ಪುರದಲ್ಲಿ ಬಾಲಕಿ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ರಾಜೇಂದ್ರ ಸಿಸೋಡಿಯಾ ಎಂಬಾತ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಆತನನ್ನು ಉತ್ತರ ಪ್ರದೇಶದ ವೃಂದಾವನದಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ರಾಜೇಂದ್ರ ಸಿಸೋಡಿಯಾ ಬಾಲಕಿ ಮತ್ತು ಸಹೋದರನಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ ಮನೆಗೆ ಕರೆಸಿಕೊಂಡಿದ್ದ. ಸಹೋದರನನ್ನು ಮಾರುಕಟ್ಟೆಗೆ ಕಳಿ, ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಕಿರುಚಿಕೊಂಡಾಗ ಸ್ಥಳೀಯರು‌ ಆತನ ಮನೆಗೆ ಧಾವಿಸಿದ್ದಾರೆ. ಆದರೆ ಆರೋಪಿ‌ ಪರಾರಿಯಾಗಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಂಗ್ವಾನ್ ತಿಳಿಸಿದ್ದಾರೆ.

ಆತ ವೇಷ ಮತ್ತು ಸ್ಥಳವನ್ನು ಬದಲಿಸುತ್ತಿದ್ದ, ಆಗ್ರಾ, ಲಕ್ನೋ ಮತ್ತು ಗ್ವಾಲಿಯರ್‌ಯಲ್ಲಿ‌ ಶೋಧ ನಡೆಸಿ ಪೊಲೀಸರು ಬೃಂದಾವನದಲ್ಲಿ ಆತನನ್ನು ಬಂಧಿಸಿದ್ದಾರೆ ಎಂದು‌ ಮಾಹಿತಿ ನೀಡಿದ್ದಾರೆ. ಆತನನ್ನು‌ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಹಿಂದೆಯೂ ಆತನ ವಿರುದ್ಧ ನಾನಾ ಆರೋಪಗಳಿದ್ದವು ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *