Thursday, January 01, 2026
Menu

ಸಾಕ್ಷಿ ನಾಶ, ರೇಪಿಸ್ಟ್‌ಗಳ ರಕ್ಷಣೆಗೆ ಯತ್ನ ಆರೋಪ: ಯಲಬುರ್ಗ ವೈದ್ಯಾಧಿಕಾರಿ ವಿರುದ್ಧ ಎಫ್‌ಐಆರ್‌

ಯಲಬುರ್ಗದ ಮದ್ಲೂರಿನಲ್ಲಿ ನವೆಂಬರ್​​ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ವೈದ್ಯಾಧಿಕಾರಿ ವಿರುದ್ಧವೂ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಗ್ಯಾಂಗ್‌ ರೇಪ್‌ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ಅತ್ಯಾಚಾರಿಗಳನ್ನು ರಕ್ಷಿಸಲು ಪ್ರಯತ್ನಿಸಿ ಸಾಕ್ಷಿ ನಾಶಪಡಿಸಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಡಾ. ಶಿವಕುಮಾರ್ ವಿರುದ್ಧ ಯಲಬುರ್ಗ ಸಿಪಿಐ ಮೌನೇಶ್ವರ್‌ ಮಾಲಿಪಾಟೀಲ್ ಪ್ರಕರಣ ದಾಖಲಿಸಿ ದ್ದಾರೆ.

ಈ ಕೇಸ್‌ನಲ್ಲಿ ವೈದ್ಯಾಧಿಕಾರಿಯ ನಿರ್ಲಕ್ಷ್ಯತೆ ಪತ್ತೆಯಾಗಿದೆ, ಪ್ರಕರಣ ಸಂಬಂಧ ಪೊಲೀಸರು ಸಂಗ್ರಹಿಸಿದ್ದ ವಸ್ತುಗಳ ಮೇಲೆ ಡಾಕ್ಟರ್‌ ನೆರವಿನಿಂದಲೇ ಸಿಬ್ಬಂದಿ ಸಹಿ ಮಾಡಿದ್ದಾರೆ. ಆರೋಪಿಗಳಿಂದ ಸಂಗ್ರಹಿಸಿದ ವಸ್ತುಗಳು ಹಾಗೂ ಡಿಎನ್‌ಎ ಸಾಕ್ಷಿಗಳನ್ನು ಸಿಗದಂತೆ ಮಾಡಿ ಆರೋಪಿಗಳಿಗೆ ನೆರವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಈ ಬಗ್ಗೆ ಕೇಳಿದರೆ ಉದ್ಧಟತನದಿಂದ ವರ್ತಿಸಿದ್ದಾರೆ ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮದ್ಲೂರ ಗ್ರಾಮದ ಬಳಿ 39 ವರ್ಷದ ಮಹಿಳೆ ಮೇಲೆ ನವೆಂಬರ್ 17 ರ ಸಂಜೆ ಗ್ಯಾಂಗ್‌ ರೇಪ್‌ ನಡೆದಿತ್ತು. ಹೊಸಪೇಟೆಯಿಂದ ಕುಷ್ಟಗಿಗೆ ತಮ್ಮ ಪರಿಚದವರ ಬಳಿ ಹಣ ತಗೆದುಕೊಂಡು ಹೋಗಲು ಮಹಿಳೆ ಬಂದಿದ್ದರು. ಆದರೆ ಅಲ್ಲಿಂದ ಆ ಮಹಿಳೆ ಯನ್ನು ಕರೆದುಕೊಂಡ ಹೋದ ನಾಲ್ವರು ಮತ್ತು ಬರಿಸುವ ಜ್ಯೂಸ್ ಕುಡಿಸಿ ಅತ್ಯಾಚಾರ ಎಸಗಿದ್ದರು.

ಕೃತ್ಯದ ಸಂಬಂಧ ಮಹಿಳೆಯು ಪರಿಚಯಸ್ಥ ಲಕ್ಷ್ಮಣ ಎಂಬಾತ ಸೇರಿ ನಾಲ್ವರ ವಿರುದ್ದ ಯಲಬುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕುಷ್ಟಗಿ ಹಾಗೂ ಮದ್ಲೂರಿನ ಪಾಳು ಬಿದ್ದ ಮನೆಯಲ್ಲಿ ಯಾವುದೋ ಜ್ಯೂಸ್ ಕುಡಿಸಿ ಅತ್ಯಾಚಾರ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದರು.

Related Posts

Leave a Reply

Your email address will not be published. Required fields are marked *