ಕೋಗಿಲು ಲೇಔಟ್ ಹಾಗೂ ಫಕೀರ್ ಕಾಲೊನಿಯಲ್ಲಿ ಅಕ್ರಮವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವರನ್ನು ತೆರವುಗೊಳಿಸಿರುವ ಪ್ರಕರಣ ಸಂಬಂಧ ಹೊರ ರಾಜ್ಯದವರಿಗೆ ಫ್ಲ್ಯಾಟ್ ಕೊಟ್ಟರೆ ಸಹಿಸುವುದಿಲ್ಲ, ಹೋರಾಟ ಮಾಡುತ್ತೇವೆ, ಮೂಲ ಕನ್ನಡಿಗರಿಗೆ ಮನೆಗಳನ್ನು ಕೊಡಿ ಎಂದು ಕರವೇ ರಾಜಾಧ್ಯಕ್ಷ ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ.
ಸರ್ಕಾರ ಕಾಂಗ್ರೆಸ್ ಹೈಕಾಂಡ್‌ನ ಕೆ.ಸಿ ವೇಣುಗೋಪಾಲ್ ಮಾತು ಕೇಳಿ, ಹೊರ ರಾಜ್ಯದವರಿಗೆ ಮನೆ ನೀಡಿದರೆ ಸಹಿಸಲಾಗದು, ಅಕ್ರಮ ಎಂದು ಮನೆಗಳನ್ನು ಧ್ವಂಸಗೊಳಿಸಿ ಮತ್ತೆ ಸರ್ಕಾರವೇ ಪರಿಹಾರ ಘೋಷಿಸಿರುವುದು ವಿಪರ್ಯಾಸ, ಕೇರಳಹಾಗೂ ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿದು ನಿರಾಶ್ರಿತರಿಗೆ ಸರ್ಕಾರ ಪರಿಹಾರ ನೀಡುತ್ತಿದೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕರವೇ ಕೂಡ ಎಚ್ಚರಿಕೆ ನೀಡಿದೆ.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಕೆ.ಸಿ ವೇಣುಗೋಪಾಲ್ ಮಾತು ಕೇಳಿ, ಹೊರ ರಾಜ್ಯದವರಿಗೆ ಮನೆಗಳನ್ನು ಕೊಡುವುದಾದರೆ ಕನ್ನಡ ಪರ, ರೈತಪರ ಹೋರಾಟಗಾರರಿಗೆ ಕೊಡಿ ಎಂದು ಆಗ್ರಹಿಸಿ ದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ, ಕೈಗಾ ಅಣುಗಾರಿಕೆ ಸೇರಿದಂತೆ ಹಲವೆಡೆ ಭೂಮಿ ಕಳೆದುಕೊಂಡ ರೈತರಿಗೆ ಮನೆ, ಫ್ಲ್ಯಾಟ್ ಕೊಡಿ. ಅಕ್ರಮ ವಲಸಿಗರಿಗೆ ಮನೆ ಕೊಟ್ಟರೇ ಸಹಿಸುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಬೆಂಗಳೂರಿನ ಉತ್ತರ ತಾಲೂಕಿನ ಯಲಹಂಕ ಬಳಿಯ ಕೋಗಿಲು ಲೇಔಟ್‌ನಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಮನೆಗಳು ಮತ್ತು ಶೆಡ್‌ಗಳ ತೆರವು ಕಾರ್ಯಾಚರಣೆಯ ನಡೆಸಲಾಗಿತ್ತು. ಒತ್ತುವರಿಗೆ ಅವಕಾಶ ಕಲ್ಪಿಸಿದ ಅಧಿಕಾರಿಗಳ ಅಮಾನತಿಗೆ ಜಿಬಿಎ ಸಿದ್ಧತೆ ನಡೆಸಿದೆ. ಒತ್ತುವರಿ ನಡೆಯುವಾಗ ಸುಮ್ಮನಿದ್ದ ಅಧಿಕಾರಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳ ತಲೆದಂಡವಾಗುವ ಸಾಧ್ಯತೆ ಇದ್ದು. ಅನಧಿಕೃತ ಮನೆಗಳಿಗೆ ಕರೆಂಟ್, ನೀರು ಪೂರೈಸಿರುವ ಬೆಸ್ಕಾಂ, BWSSB ಅಧಿಕಾರಿಗಳಿಗೂ ತಲೆನೋವು ಉಂಟಾಗಿದೆ. ದಾಖಲೆಗಳು ಇಲ್ಲದ ಮನೆಗಳಿಗೆ ನೀರು, ಕರೆಂಟ್ನ ಸೌಕರ್ಯ ಒದಗಿಸಿರುವ ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳ ಬಳಿ ಜಿಬಿಎ ನಗರಾಭಿವೃದ್ಧಿ ಇಲಾಖೆ ಮಾಹಿತಿ ಕೇಳಿದೆ.


