Wednesday, December 31, 2025
Menu

ಹೊಸ ವರ್ಷಾಚರಣೆಯಲ್ಲಿ ಕುಡಿದು ಬಿದ್ದವರನ್ನು ಮನೆಗೆ ಬಿಡುವುದಿಲ್ಲ: ಸಚಿವ ಪರಮೇಶ್ವರ್‌

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ತುಂಬಾ ಕುಡಿದು ನಡೆಯಲು ಆಗದಿರುವವರನ್ನು ವಿಶ್ರಾಂತಿ ಸ್ಥಳಕ್ಕೆ ಬಿಡುತ್ತೇವೆ. ಡ್ರಿಂಕ್ಸ್ ಮಾಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡುವುದಿಲ್ಲ ಎಂದು ಗೃಹ ಪರಮೇಶ್ವರ್ ಸ್ಪಷ್ಟವಾಗಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಂಬಾ ಕುಡಿದು ನಡೆಯಲು ಆಗದಿರುವವರನ್ನು ವಿಶ್ರಾಂತಿ ಸ್ಥಳಕ್ಕೆ ಬಿಡುತ್ತೇವೆ. ಕೆಲವರು ಕುಡಿದು ಪ್ರಜ್ಞೆ ಇರದ ಮಟ್ಟಕ್ಕೆ ಹೋಗುತ್ತಾರೆ. ಅಂಥವರನ್ನು ರೆಸ್ಟಿಂಗ್ ಪ್ಲೇಸ್ ಗೆ ತಲುಪಿಸಲಾಗುವುದು. 15 ಕಡೆ ರೆಸ್ಟಿಂಗ್ ಪ್ಲೇಸ್ ಮಾಡಿದ್ದೇವೆ. ನಶೆ ಇಳಿಯುವವರೆಗೂ ಅಲ್ಲಿ ಇರಿಸಿ ನಂತರ ಕಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಡ್ರಿಂಕ್ ಆಂಡ್ ಡ್ರೈವ್‌ಗೆ ಕೇಸ್ ಕೂಡ ದಾಖಲಾಗುತ್ತದೆ. 160 ಸ್ಪಾಟ್ ಗುರುತಿಸಲಾಗಿದೆ. ಒಂದು ಹಂತದವರೆಗೆ ಬಿಡುತ್ತೇವೆ. ಹಂತ ಮೀರಿದಾಗ ಡ್ರೈವ್ ಮಾಡೋದು ಕಷ್ಟವಾಗುತತ್ತದೆ, ಆಗ ಅಪಘಾತವಾಗಿ ತಾವು ಸಾಯುವುದರ ಜೊತೆಗೆ ಬೇರೆಯವರನ್ನು ಸಾಯಿಸುತ್ತಾರೆ. ಎರಡು ದಿನ ನಾವು ಕಂಟ್ರೋಲ್ ಮಾಡಿದರೆ ಕೆಲವರ ಪ್ರಾಣ ಉಳಿಯುತ್ತವೆ ಎಂದಿದ್ದಾರೆ.

ಹೆಚ್ಚು ಜನರು ಸೇರಿದಾಗ ಪೊಲೀಸರು ಎಲ್ಲ ಆಯಾಮದಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ. ಪೊಲೀಸರಿಗೆ ಬಾಡಿ ಕ್ಯಾಮರಾ ಅಳವಡಿಸಿಕೊಳ್ಳಲು ಊಚಿಸಲಾಗಿದೆ. ಈ ಕ್ಯಾಮೆರಾ ಡೈರೆಕ್ಟ್ ಆಗಿ ಕಮಾಂಡ್ ಸೆಂಟರ್‌ಗೆ ಕನೆಕ್ಟ್ ಆಗಿರುವುದರಿಂದ ಹೆಚ್ಚಿನ ಪೊಲೀಸ್‌ ಅಗತ್ಯವಿದ್ದರೆ ಆ ಸ್ಥಳಕ್ಕೆ ಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಬಾರ್, ಪಬ್ ಓಪನ್ ಇಡಲು ಸಮಯ ನಿಗದಿ ಮಾಡಲಾಗಿದೆ. ಟೈಮಿಂಗ್ ಪ್ರಕಾರ ಬಾರ್ ಮುಚ್ಚಬೇಕು. ರಾತ್ರಿ ಒಂದು ಗಂಟೆಗೆ ಎಲ್ಲ ಬಾರ್‌ಗಳನ್ನು ಮುಚ್ಚಬೇಕು. ಮುಚ್ಚದಿದ್ದರೆ ಕೇಸ್ ಹಾಕಲಾಗುವುದು ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *