Tuesday, December 30, 2025
Menu

ವೇಣುಗೋಪಾಲ್ ಸೂಪರ್ ಸಿಎಂ: ಎನ್.ರವಿಕುಮಾರ್ ಆರೋಪ

ravikumar

ಬೆಂಗಳೂರು: ವೇಣುಗೋಪಾಲ್ ಕರ್ನಾಟಕದ ಸೂಪರ್ ಸಿಎಂ ಅವರ ಅಣತಿಯಂತೆ ಈ ಸರ್ಕಾರ ನಡೀತಾ ಇದೆ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಆರೋಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೇಣುಗೋಪಾಲ್ ಅವರು ಕಣ್ಣುಬಿಟ್ಟರೆ ಸಾಕು; ಅದರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಈ ಸರ್ಕಾರ ಕೆಲಸ ಮಾಡ್ತಾ ಇದೆ. ಹಾಗಾಗಿ ಇದರ ಸೂಪರ್ ಸಿಎಂ ಕರ್ನಾಟಕ ರಾಜ್ಯದ ಸೂಪರ್ ಸಿಎಂ ಇರುವುದು ದೆಹಲಿಯಲ್ಲ. ಇವರು ಅವರ ಅಣತಿಯಂತೆ ಕೆಲಸ ಮಾಡುತ್ತಾರೆ. ಈ ಒಂದು ಪ್ರಜಾಪ್ರಭುತ್ವ ಈ ರೀತಿಯ ಒಂದು ಎಲೆಕ್ಟೆಡ್ ಗವರ್ನಮೆಂಟ್ ಕರ್ನಾಟಕ ರಾಜ್ಯದಲ್ಲಿ ಏನಿದೆ ಇರೋದು ಒಂದೇ ಬೇಗ ಹೊರಟುಹೋಗೋದು ಒಂದೇ ಅಂತಹೇಳಿ ಈ ಸಂದರ್ಭದಲ್ಲಿ ಹೇಳೋದಕ್ಕೆ ಬಯಸುತ್ತೇನೆ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರವನ್ನು ನೋಡಿದಾಗ ಅದು ಒಂದು ರೀತಿ ಕರ್ನಾಟಕ ಪಶ್ಚಿಮ ಬಂಗಾಲ ಆಗುತ್ತಿದೆಯೇ ಅನ್ನುವ ಆತಂಕವಾಗುತ್ತಿದೆ. ಪಶ್ಚಿಮ ಬಂಗಾಲಕ್ಕೆ ನುಸುಳುಕೋರರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ನಮಗೆ ಆಗ್ತಾ ಇದೆ ಯಾಕೆ ವೆಸ್ಟ್ ಬೆಂಗಾಲ್ ಆಗ್ತಾ ಇದೆಯಾ ಕರ್ನಾಟಕ ಅಂತ ಅನಿಸ್ತಾ ಇದೆ. ನುಸುಳುಕೋರರು ದೊಡ್ಡ ಸಂಖ್ಯೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶದಿಂದ ಬಂದಿದ್ದಾರೆ ವೆಸ್ಟ್ ಬೆಂಗಾಲ್ಗೆ ಪಶ್ಚಿಮ ಬಂಗಾಲÀಕ್ಕೆ ಸುಮಾರು ಒಂದುವರೆ ಒಂದು ಒಂದೂವರೆ ಕೋಟಿ ಜನ ಬಂದು ಇರಬಹುದು ಬಾಂಗ್ಲಾದೇಶದವರು. ಇದು ಕಾಂಗ್ರೆಸ್ಸಿನ ಪಾಪದ ಕೂಸು. ಈ ಬಾಂಗ್ಲಾದೇಶದ ನುಸುಳುಕೋರರು ನಮ್ಮ ದೇಶದ ಒಳಗಡೆ ಬರಲು ಪ್ರಾರಂಭ ಆಗಿದ್ದೇ ಕಾಂಗ್ರೆಸ್ಸಿನ ಮೃದುಧೋರಣೆಯಿಂದ ಎಂದು ಟೀಕಿಸಿದರು.

ಅದು ಬಿಹಾರ, ಪಶ್ಚಿಮ ಬಂಗಾಲ, ಅಸ್ಸಾಂನಲ್ಲಿ ಇರಬಹುದು, ಮಣಿಪುರ್, ಮಿಜೋರಂ, ಸಿಕ್ಕಿಂ, ನಾಗಾಲ್ಯಾಂಡ್ ಈ ಏಳು ರಾಜ್ಯಗಳು, ಪಶ್ಚಿಮ ಬಂಗಾಲ, ಬಿಹಾರ್, ಜಾಖರ್ಂಡ್ ಇಲ್ಲೆಲ್ಲ ದೊಡ್ಡ ಸಂಖ್ಯೆಯಲ್ಲಿ ಲಕ್ಷಾಂತರ- ಕೋಟ್ಯಾಂತರ ಸಂಖ್ಯೆಯÀಲ್ಲಿ ಬಾಂಗ್ಲಾದೇಶದಿಂದ ನಸುಳುಕೋರರು ಬರೋದಕ್ಕೆ ಕಾಂಗ್ರೆಸ್ ಬೆಂಬಲವೇ ಕಾರಣ. ಬಳಿಕ ಕಮ್ಯುನಿಸ್ಟ್ ಪಕ್ಷ. ಅವರು ಪಶ್ಚಿಮ ಬಂಗಾಲವನ್ನು 24 ವರ್ಷ ಕಾಲ ಆಡಳಿತ ಮಾಡಿದ್ದರು. ಆಗಲೂ ಲಕ್ಷಾಂತರ ಸಂಖ್ಯೆಯ ನುಸುಳುಕೋರರು ಬಂದರು; ಈಗ ತೃಣಮೂಲ ಕಾಂಗ್ರೆಸ್ ಮಮತಾ ಬ್ಯಾನರ್ಜಿ ಅಲ್ಲಿ ಫೆನ್ಸಿಂಗ್ ಹಾಕೋದಕ್ಕೂ ಕೂಡ ಮಮತಾ ಬ್ಯಾನರ್ಜಿ ಜಾಗ ಕೊಡ್ತಾ ಇಲ್ಲ ಎಂದು ದೂರಿದರು.

ಪಂಜಾಬ್, ಅಸ್ಸಾಂನಲ್ಲಿ ಕೇಂದ್ರವು ಫೆನ್ಸಿಂಗ್ ಮಾಡಿದ್ದರಿಂದ ನುಸುಳುವಿಕೆ ನಿಂತಿದೆ. ಮತದಾರರು ಬರುವ ಕಾರಣ ಫೆನ್ಸಿಂಗ್ ಮಾಡಲು ಪಶ್ಚಿಮ ಬಂಗಾಲ ಸರಕಾರ ಬಿಡುತ್ತಿಲ್ಲ ಎಂದು ಟೀಕಿಸಿದರು. ಅದೇ ರೀತಿ ಕರ್ನಾಟಕ ರಾಜ್ಯನು ಕೂಡ ಒಂದು ಮಾರ್ಗೋಪಾಯವನ್ನ ಕಂಡುಕೊಂಡಿದೆ; ಕೇರಳದಿಂದ ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಾರ್ಟಿಗೆ ವೋಟರ್ಸ್ ಬರ್ತಾ ಇದ್ದಾರೆ ಎಂದು ಆರೋಪಿಸಿದರು.

ಬೆಂಗಳೂರು, ಮಂಗಳೂರು, ಉಡುಪಿ ಇರಬಹುದು; ಭಟ್ಕಳ ಇರಬಹುದು. ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೈವೇ ಪಕ್ಕದಲ್ಲಿ ದೊಡ್ಡ ದೊಡ್ಡ ಸಿಟಿಗಳಲ್ಲಿ ಅಕ್ರಮವಾಗಿ ಜಮೀನುಗಳನ್ನು ತೆಗೆದುಕೊಳ್ತಾ ಇದ್ದಾರೆ. ಸರ್ಕಾರಿ ಜಾಗ ಅವರು ಅತಿಕ್ರಮಿಸುತ್ತಿದ್ದಾರೆ. ಅದೇರೀತಿ ಕೋಗಿಲೆ ಕ್ರಾಸಿನ ಈ ಒಂದು ಜಾಗ. ಅದು ಜನಕ್ಕೆ ಗೊತ್ತಾಗಿ ಸರ್ಕಾರ ಅವರನ್ನ ಖಾಲಿ ಮಾಡಿತು ಎಂದರು. ಮುಂಚೆನೆ ವೇಣುಗೋಪಾಲ್ ಏನಾದರೂ ಫೆÇೀನ್ ಮಾಡಿಬಿಟ್ಟಿದ್ರೆ ಖಾಲಿನೇ ಮಾಡಿಸ್ತಿರಲಿಲ್ವೇನೋ ಎಂದು ಕೇಳಿದರು.

ಕೇರಳದಿಂದ ಬಂದವರಿಗೆ ಯಾವ ಕಾರಣಕ್ಕೋಸ್ಕರ ಮನೆ ಕೊಡುತ್ತೀರಿ? ನಮ್ಮ ಕರ್ನಾಟಕ ರಾಜ್ಯದಲ್ಲಿ ಇರತಕ್ಕಂತವರಿಗೆ ನಿರಾಶ್ರಿತರು ಲಕ್ಷಾಂತರ ಜನ ಇದ್ದಾರೆ. 9 ಲಕ್ಷ ಮನೆಗಳು ಬೇಕು ಅಂತ ಬೇಡಿಕೆ ಇದ್ದರೆ ನೀವು ಕೊಟ್ಟಿರೋದೆ ಇನ್ನು ಮೂರು ಲಕ್ಷ. ಆರು ಲಕ್ಷ ಜನಕ್ಕೆ ಮನೆ ಕೊಟ್ಟಿಲ್ಲ. ಇಂತ ಸಂದರ್ಭದಲ್ಲಿ ಕರ್ನಾಟಕದವರಿಗಿಂತ ಕೇರಳದವರಿಗೆ ಮುಂಚೆನೆ ಜಾಗ ಕೊಡ್ತಾ ಇದ್ದೀರಿ ಮನೆ ಕೊಡ್ತಾ ಇದ್ದೀರಿ ಮನೆ ಕಟ್ಟಿಸಿಕೊಡ್ತಾ ಇದ್ದೀರಿ ಅಂತ ಅಂದ್ರೆ ಏನು ಅರ್ಥ ಎಂದು ಪ್ರಶ್ನಿಸಿದರು. ರಾಜ್ಯ ವಕ್ತಾರ ವೆಂಕಟೇಶ ದೊಡ್ಡೇರಿ, ಎಸ್‍ಸಿ ಮೋರ್ಚಾ ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ್ ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *