Tuesday, December 30, 2025
Menu

ಪ್ರಿಯಾಂಕಾ ಗಾಂಧಿಗೆ ಮಗ ರೈಹಾನ್ ವಾದ್ರಾನ ಮದುವೆ ಸಂಭ್ರಮ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಪುತ್ರ ರೈಹಾನ್ ವಾದ್ರಾ ಬಹುಕಾಲದ ಗೆಳತಿ ಅವಿವಾ ಬೇಗ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ರೈಹಾನ್ ವಾದ್ರಾ 25 ವರ್ಷವಾಗಿದ್ದು, ಮದುವೆಯಾಗಲು ಸಿದ್ಧರಾಗಿದ್ದಾರೆ. ಏಳು ವರ್ಷಗಳಿಂದ ರೈಹಾನ್ ವಾದ್ರಾ ಮತ್ತು ಅವಿವಾ ಬೇಗ್ ಪ್ರೀತಿ ಮಾಡುತ್ತಿದ್ದಾರೆ, 18ನೇ ವಯಸ್ಸಿಗೆ ಇವರಿಬ್ಬರೂ ಲವ್‌ನಲ್ಲಿ ಬಿದ್ದಿದ್ದರು. ಈ ಮದುವೆಗೆ ಎರಡೂ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ.

ಪ್ರಿಯಾಂಕಾ ಗಾಂಧಿ, ರಾಬರ್ಟ್ ವಾದ್ರಾ ಮದುವೆಯಾಗಿ 28 ವರ್ಷಕಳೆದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಬ್ರಮ ಮನೆ ಮಾಡಿದೆ. ಅವಿವಾ ಬೇಗ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದೆ, ಎರಡೂ ಕುಟುಂಬಗಳ ನಡುವೆ ಒಳ್ಳೆಯ ಬಾಂಧವ್ಯವಿದೆ ಎನ್ನಲಾಗಿದೆ.

ರೈಹಾನ್ ವಾದ್ರಾ ವಿಷ್ಯುವಲ್ ಆರ್ಟಿಸ್ಟ್ (ದೃಶ್ಯ ಕಲಾವಿದ). ಹತ್ತು ವರ್ಷ ಇದ್ದಾಗಲೇ ಮರಾದಲ್ಲಿ ಅವರು ಫೋಟೋಗಳನ್ನು ಸೆರೆ ಹಿಡಿಯುತ್ತಿದ್ದರು. ಮುಂಬೈನ ಕೊಲಾಬಾದಲ್ಲಿರುವ ‘ಎಪಿಆರ್‌ಇ ಆರ್ಟ್ ಹೌಸ್’ ಎಂಬ ಕಲಾ ಗ್ಯಾಲರಿ ಇದೆ. 2021 ರಲ್ಲಿ ನವದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ‘ಡಾರ್ಕ್ ಪರ್ಸೆಪ್ಶನ್’ ಹೆಸರಿನ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದ್ದರು. 2017 ರಲ್ಲಿ ಶಾಲಾ ಕ್ರಿಕೆಟ್ ಪಂದ್ಯದಲ್ಲಿ ಅವರ ಕಣ್ಣಿಗೆ ಗಾಯವಾಗಿತ್ತು. ಆಮೇಲೆ ಅನುಭವಿಸಿದ ನೋವನ್ನು ಅವರು ದೃಶ್ಯದ ಮೂಲಕ ಪ್ರದರ್ಶನ ಮಾಡಿದ್ದರು.“ನನ್ನ ಕಣ್ಣಿಗೆ ಗಾಯ ಆದ್ಮೇಲೆ ನಾನು ಕಪ್ಪು, ಬಿಳಿಪು ಫೋಟೋಗಳನ್ನು ತೆಗೆಯಲು ಶುರು ಮಾಡಿದೆ. ಒಂದು ವಿಷಯವನ್ನು ಒಬ್ಬರು ಹೇಗೆ ಗ್ರಹಿಸುತ್ತಾರೆ, ಬೆಳಕನ್ನು ಹೇಗೆ ಹುಡುಕುತ್ತಾರೆ, ಕತ್ತಲೆಯನ್ನು ಹೇಗೆ ಬಳಸಿಕೊಳ್ತಾರೆ ಅನ್ನೋದನ್ನು ಈ ದೃಶ್ಯ ಪ್ರದರ್ಶನ ತಿಳಿಸುವುದು” ಎಂದು ಹೇಳಿದ್ದರು.

ರೈಹಾನ್ ಅಜ್ಜ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಫೋಟೋಗಳನ್ನು ತುಂಬ ಇಷ್ಟಪಡುತ್ತಿದ್ದರು. ರೈಹಾನ್ತಾತನ ಫೋಟೋಗ್ರಫಿ ಕೆಲಸಗಳನ್ನುಅಧ್ಯಯನ ಮಾಡಿದ್ದಾರೆ. ಅವಿವಾ ಬೇಗ್ ಕೂಡ ಫೋಟೋಗ್ರಾಫರ್‌, ಪ್ರೊಡ್ಯೂಸರ್‌ ಆಗಿದ್ದಾರೆ.

Related Posts

Leave a Reply

Your email address will not be published. Required fields are marked *