ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಖಲೀದಾ ಜಿಯಾ(80) ನಿಧನರಾದರು. ಅವರು ಅನಾರೋಗ್ಯದಿಂದ ದೀರ್ಘಕಾಲ ಆಸ್ಪತ್ರೆಯಲ್ಲಿದ್ದರು. ಎದೆಯ ಸೋಂಕು, ಹೃದಯ ಮತ್ತು ಶ್ವಾಸಕೋಶದ ಸಮಸ್ಯೆ ಅವರನ್ನು ಕಾಡುತ್ತಿತ್ತು.
ಬಾಂಗ್ಲಾದೇಶದ ದಿವಂಗತ ಪ್ರಧಾನಿ ಜಿಯಾವುರ್ ರೆಹಮಾನ್ ಅವರ ಪತ್ನಿ ಖಲೀದಾ ಜಿಯಾ ಯಕೃತ್ತು ಮತ್ತು ಮೂತ್ರಪಿಂಡದ ಸಮಸ್ಯೆಗಳು, ಮಧುಮೇಹ, ಸಂಧಿವಾತ ಮತ್ತು ಕಣ್ಣಿನ ಸಮಸ್ಯೆಗಳು ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ವರ್ಷದ ಆರಂಭದಲ್ಲಿ ನಾಲ್ಕು ತಿಂಗಳ ವೈದ್ಯಕೀಯ ಚಿಕಿತ್ಸೆಯ ನಂತರ ಮೇ 6 ರಂದು ಲಂಡನ್‌ನಿಂದ ಮರಳಿದ್ದರು. ಅವರ ಹಿರಿಯ ಮಗ ಮತ್ತು ಬಿಎನ್‌ಪಿ ಅಧ್ಯಕ್ಷ ತಾರಿಕ್ ರೆಹಮಾನ್ 2008 ರಿಂದ ಲಂಡನ್‌ನಲ್ಲಿ ವಾಸಿಸು ತ್ತಿದ್ದಾರೆ. ಅವರ ಕಿರಿಯ ಮಗ ಅರಾಫತ್ ರೆಹಮಾನ್ 2025 ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಾಂಗ್ಲಾದೇಶದಲ್ಲಿ 2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳ ನೇತೃತ್ವದ ಹಿಂಸಾತ್ಮಕ ಪ್ರತಿಭಟನೆ ನಡೆದು ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರ ಅಧಿಖಾರ ಕಲೆದುಕೊಂಡಿದೆ. ಬದಲಾಗುತ್ತಿರುವ ರಾಜಕೀಯದಲ್ಲಿ ಬಿಎನ್‌ಪಿ ಮುಂಚೂಣಿ ಪಕ್ಷ ವಾಗಿ ಹೊರಹೊಮ್ಮಿದೆ.
ಖಲೀದಾ ಜಿಯಾ 15 ಆಗಸ್ಟ್ 1945ರಲ್ಲಿ ಹುಟ್ಟಿದ್ದರು. 1991 ರಿಂದ 1996 ರವರೆಗೆ ಮತ್ತು 2001 ರಿಂದ 2006 ರವರೆಗೆ ಬಾಂಗ್ಲಾದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಬೆನಜೀರ್ ಭುಟ್ಟೋ ನಂತರ ಎರಡನೇ ಮುಸ್ಲಿಂ ಮಹಿಳಾ ಪ್ರಧಾನಿ ಯಾಗಿದ್ದರು.


