ಎರಡ್ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಲಿವ್ ಇನ್ ಟುಗೆದರ್ ಬಳಿಕ ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ವಿಚ್ಛೇದನ ಪಡೆದುಕೊಂಡ ಪ್ರಕರಣ ಪುಣೆಯಲ್ಲಿ ನಡೆದಿದೆ.
ಮದುವೆ ಆಗಿ 24 ಗಂಟೆಯೊಳಗೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ದಂಪತಿ ವಿಚ್ಛೇದನ ಪಡೆದಿದ್ದಾರೆ. ಮದುವೆಯಾದ ಕೂಡಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯವುಂಟಾಗಿ ಜೊತೆಗಿರಲು ಸಾಧ್ಯವೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಪರಸ್ಪರ ಒಪ್ಪಿಗೆ ನೀಡಿ ಬೇರೆಯಾಗಿ ನಂತರ ವಿಚ್ಛೇದನ ನಡೆಯಿತು. ಇಬ್ಬರೂ ನಾಲ್ಕು ವರ್ಷಗಳಿಂದ ಪರಿಚಿತರು, ಪರಸ್ಪರ ಪ್ರೀತಿಸಿದ ನಂತರ ಎರಡು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಬಳಿಕ ವಿವಾಹವಾದರು ಎಂದು ಅವರ ವಕೀಲರಾದ ರಾಣಿ ಸೋನಾವಾನೆ ತಿಳಿಸಿದ್ದಾರೆ.
ಇದು ಪ್ರೇಮ ವಿವಾಹವಾಗಿತ್ತು. ದೀರ್ಘಕಾಲದ ಸಂಬಂಧದ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಪತ್ನಿ ವೃತ್ತಿಯಲ್ಲಿ ವೈದ್ಯೆ, ಗಂಡ ಎಂಜಿನಿಯರ್. ಮದುವೆಯಾದ ಕೂಡಲೇ ಮುಂದಿನ ಜೀವನದ ಬಗ್ಗೆ ಹಲವು ಗೊಂದಲಗಳು ಹುಟ್ಟಿಕೊಂಡಿದ್ದವು. ಪತಿ ಮತ್ತು ಪತ್ನಿಯರ ಸೈದ್ಧಾಂತಿಕಎ ಪರಸ್ಪರ ತೀವ್ರ ವಿರೋಧವಾಗಿದ್ದವು. ಯಾವುದೇ ಹಿಂಸೆ, ಕಿರಿಕಿರಿ ಇಲ್ಲದೆ ಬೇರೆಯಾಗಲು ನಿರ್ಧರಿಸಿದರು ಎಂದು ವಕೀಲರು ಹೇಳಿದ್ದಾರೆ.
ಇಬ್ಬರೂ ಶಾಂತಿಯುತವಾಗಿ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸಿದರು ಮತ್ತು ಪರಸ್ಪರ ಒಪ್ಪಿಗೆಯ ಮೂಲಕ ಮದುವೆಯನ್ನು ಕೊನೆಗೊಳಿಸಿದರು. ನ್ಯಾಯಾಲಯದಲ್ಲಿ ಈ ಪ್ರಕರಣವು ಬಹಳ ಬೇಗನೆ ಇತ್ಯರ್ಥವಾಯಿತು ಎಂದು ರಾಣಿ ಸೋನಾವಾನೆ ತಿಳಿಸಿದ್ದಾರೆ.
ಮದುವೆಯಾದ ಮರುದಿನವೇ ದಂಪತಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು ಮತ್ತು ನ್ಯಾಯಾಲಯವು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಿರ್ಧಾರವನ್ನು ಪ್ರಕಟಿಸಿತ್ತು. ಮದುವೆ ಗಂಡು ಮದುವೆ ಆದ ಮೇಲೆ ತಾನು ವೈದ್ಯನಲ್ಲ, ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಂಜಿನಿಯರ್ ಎಂದು ಹೇಳಿದ್ದಾನೆ, ತಾನು .ಆಗಾಗ ಐದಾರು ತಿಂಗಳು ಮನೆಯಿಂದ ಹೊರಗಿರಬೇಕಾಗುತ್ತದೆ ಎಂದು ವಿವರಿಸಿದಾಗ ಹುಡುಗಿಗೆ ಆಘಾತವಾಗಿ. ತಕ್ಷಣ ಬೇರೆಯಾಗುವ ನಿರ್ಧಾರ ಮಾಡಿದ್ದಾಳೆ.


