Menu

ಸ್ವದೇಶಿ ಎಂಆರ್‌ಐ ಸ್ಕ್ಯಾನರ್‌ ಅಭಿವೃದ್ಧಿಪಡಿಸಿದ ಬೆಂಗಳೂರು ಸ್ಟಾರ್ಟಪ್‌ ಕಂಪನಿ

ಬೆಂಗಳೂರು ಮೂಲದ ಸ್ಟಾರ್ಟಪ್‌ ಕಂಪನಿವೋಕ್ಸೆಲ್‌ಗ್ರಿಡ್‌ ಮೊದಲ ಸ್ವದೇಶಿ ಎಂಆರ್‌ಐ ಸ್ಕ್ಯಾನರ್‌ ಅಭಿವೃದ್ಧಿಪಡಿಸಿ, ಪುಣೆಯ ಚಂದ್ರಪುರದ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಅಳವಡಿಸಿದೆ. ವೋಕ್ಸೆಲ್‌ಗ್ರಿಡ್‌ ಕಂಪನಿ 12 ವರ್ಷಗಳ ಶ್ರಮದಲ್ಲಿ ಈ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಕಂಪನಿಗೆ ಕೇಂದ್ರ ಸರ್ಕಾರ ಮತ್ತು ಝೋಹೋ ಸಂಸ್ಥೆ ನೆರವು ನೀಡಿವೆ.

ಅಮೆರಿಕದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅರ್ಜುನ್‌ ಅರುಣಾಚಲಂ, ಭಾರತದ ಆರೋಗ್ಯ ವಲಯದಲ್ಲಿನ ಕೊರತೆ ಮನಗಂಡು ಸ್ವದೇಶಿ ಎಂಆರ್‌ಐ ಅಭಿವೃದ್ಧಿಪಡಿಸಲು ಮುಂದಾಗಿ ಬೆಂಗಳೂರಿನಲ್ಲಿ ವೋಕ್ಸೆಲ್‌ಗ್ರಿಡ್‌ ಕಂಪನಿ ಸ್ಥಾಪನೆ ಮಾಡಿದರು.

ವಿದೇಶಗಳಿಗಿಂತ ಶೇ.40ರಷ್ಟು ಅಗ್ಗದ ದರದಲ್ಲಿ ಅರ್ಜುನ್‌ ಅರುಣಾಚಲಂ ಎಂಆರ್‌ಐ ಸ್ಕ್ಯಾನರ್‌ ಅಭಿವೃದ್ಧಿಪಡಿಸಿದ್ದಾರೆ. ಕಂಪನಿಯ ಮೊದಲ ಯಂತ್ರವನ್ನು ಮಹಾರಾಷ್ಟ್ರದ ಚಂದ್ರಪುರದಲ್ಲಿರುವ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಇತ್ತೀಚೆಗೆ ಅಳವಡಿಸಲಾಗಿದೆ.
ಭಾರತ ಪೂರ್ಣಪ್ರಮಾಣದಲ್ಲಿ ಎಂಆರ್‌ಐ ಯಂತ್ರ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಇಂಥ ಯಂತ್ರಗಳಿಗೆ 3-6 ಕೋಟಿ ರೂ. ಬೆಲೆ ಇದೆ. ಈಗ ದೇಶೀಯವಾಗಿ ಲಭ್ಯವಾಗುವ ಕಾರಣ ಶೇ.40 ಅಗ್ಗದ ದರದಲ್ಲಿ ಸಿಗಲಿದೆ. ಇವುಗಳಲ್ಲಿ ಲಿಕ್ವಿಡ್‌ ಹೀಲಿಯಂ ಎಂಬ ಅಂಶ ಬಳಸದ ಕಾರಣ ವಿದ್ಯುತ್‌ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ನಿರ್ವಹಣೆಯೂ ಸುಲಭವಾಗಲಿದೆ.

ವೋಕ್ಸೆಲ್‌ ಗ್ರಿಡ್‌ ಕಂಪನಿಯು ಆಸ್ಪತ್ರೆಗಳಿಗೆ ‘ಪೇ ಪರ್‌ ಯೂಸ್‌’ ಎಂಬ ಹೊಸ ಪಾವತಿ ವಿಧಾನವನ್ನು ಪರಿಚಯಿಸುವ ಪರಿಕಲ್ಪನೆ ಕೊಟ್ಟಿದೆ. ಬಳಕೆ ಮಾಡಿದ್ದಕ್ಕಷ್ಟೇ ಆಸ್ಪತ್ರೆಗಳು ಪಾವತಿ ಮಾಡಲಿವೆ. ಬೆಂಗಳೂರು ಸ್ಟಾರ್ಟಪ್‌ ವರ್ಷಕ್ಕೆ 20-25 ಯಂತ್ರಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.

Related Posts

Leave a Reply

Your email address will not be published. Required fields are marked *