Menu

ವಿವಾಹಿತನ ಲಿವ್‌ ಇನ್‌ ರಿಲೇಷನ್‌ಶಿಪ್‌: ಯುವತಿಯಿಂದ ಹಣ, ಚಿನ್ನ ಲೂಟಿ, ಆಕೆ ತಂಗಿ ಮೇಲೂ ರೇಪ್‌

ತಾನು ಮದುವೆಯಾಗಿರುವುದನ್ನು ಮುಚ್ಚಿಟ್ಟು, ಮದುವೆಯಾಗುವುದಾಗಿ ನಂಬಿಸಿ ಯುವತಿ ಜೊತೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದಾತ ಬೆದರಿಸಿ ಆಕೆಯಿಂದ 37 ಲಕ್ಷ ರೂ. ಪಡೆದು ಮನೆಯಿಂದ 559 ಗ್ರಾಂ ಚಿನ್ನಾಭರಣ ಕದ್ದು, ಆಕೆ ತಂಗಿ ಮೇಲೂ ಅತ್ಯಾಚಾರ ಎಸಗುತ್ತಿದ್ದ ಪ್ರಕರಣ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಯಲಾಗಿದೆ.

ಈ ಲವ್​ ಸೆಕ್ಸ್​ ದೋಖಾ ಆರೋಪ ಪ್ರಕರಣದಡಿ ಪೊಲೀಸರು ಆರೋಪಿ ಶುಭಾಂಶು ಶುಕ್ಲಾ (27)ನನ್ನು ಬಂಧಿಸಿದ್ದಾರೆ. ಶುಭಾಂಶು ಶುಕ್ಲಾ ಮೊದಲು ಸಂತ್ರಸ್ತೆಯ ಸಹೋದರಿ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. ಆಕೆಯ ಕುಟುಂಬಕ್ಕೂ ಬಲ್ಲವನಾಗಿದ್ದ. ಬಳಿಕ ಬಾಲಕಿಯ ಸಹೋದರಿಯನ್ನು ಪ್ರೀತಿಸುವುದಾಗಿ ನಂಬಿಸಿದ್ದ. ಆಕೆ ಮುಂಬೈನಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವ ರನ್ನು ನಂಬಿಸಿ ಆತನ ಜೊತೆಗೆ ತೆರಳಿದ್ದಳು. ಫ್ಲ್ಯಾಟ್​ನಲ್ಲಿ ಶುಭಾಂಶು ಮತ್ತು ಯುವತಿ ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದರು ಎನ್ನಲಾಗಿದೆ.

ಬಳಿಕ ಶುಭಾಂಶುಗೆ ಮೊದಲೇ ಮದುವೆಯಾಗಿರುವ ಬಗ್ಗೆ ಸಂತ್ರಸ್ತೆಗೆ ಗೊತ್ತಾಗಿದೆ. ವಿಚಾರಿಸಿದಾಗ ಆಕೆಯಿಂದ ವಿಚ್ಛೇದನ ಪಡೆದುಕೊಳ್ಳುತ್ತೇನೆ. ನಿನ್ನ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳು ತ್ತೇನೆ ಎಂದು ಹೇಳಿದ್ದ. ಶುಭಾಂಶು ಪತ್ನಿಯೂ ಸಂತ್ರಸ್ತೆ ಜೊತೆ ಮಾತಾಡಿದ್ದು, ತಾನು ಆತನಿಗೆ ಡಿವೋರ್ಸ್​​ ನೀಡೋದಾಗಿ ತಿಳಿಸಿದ್ದಳು. ಸಂತ್ರಸ್ತೆ ಸಂಬಂಧ ಮುಂದುವರಿಸಿದ್ದಳು. ಮತ್ತೊಂದು ಯುವತಿಗೂ ಶುಭಾಂಶು ಇದೇ ರೀತಿ ವಂಚಿಸುತ್ತಿರುವುದು ಸಂತ್ರಸ್ತೆಗೆ ಗೊತ್ತಾಗಿದೆ. ಆಕೆ ಮುಂದೆ ಈತನ ಬಂಡವಾಳವನ್ನು ಸಂತ್ರಸ್ತೆ ಬಯಲು ಮಾಡಿದ್ದಳು. ಆ ಬಳಿಕ ಶುಭಾಂಶು ಚಿತ್ರಹಿಂಸೆ ನೀಡಲಾರಂಭಿಸಿದ್ದ ಎಂದು ಹೇಳಲಾಗಿದೆ.

ಸಂತ್ರಸ್ತ ಯುವತಿಯಿಂದ 37 ಲಕ್ಷ ರೂಪಾಯಿ ಪಡೆದಿದ್ದ ಆರೋಪಿ ಶುಭಾಂಶು, ಆಕೆ ಮನೆಯಲ್ಲಿ 559 ಗ್ರಾಂ ಚಿನ್ನಾಭರಣ ಕದ್ದಿದ್ದ. ಈ ಬಗ್ಗೆ ದೂರು ನೀಡಿದರೆ ಸಾಯಿಸುತ್ತೇನೆ ಎಂದು ಬೆದರಿಸಿದ್ದ. ಸಂತ್ರಸ್ತೆ ಚಿತ್ರಹಿಂಸೆ ತಾಳಲಾರದೆ ಶುಭಾಂಶುನನ್ನು ಬಿಟ್ಟು ಬಂದಿದ್ದಳು. ಸಂತ್ರಸ್ತೆಯ ಪರಿಚಯಕ್ಕೆ ಮೂಲ ಕಾರಣವಾಗಿದ್ದ ಸಹೋದರಿ ಬಾಲಕಿ ಮೇಲೂ ಶುಭಾಂಶು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *