ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್ ಮಾಡುವವರು ವೇಸ್ಟ್ ನನ್ಮಕ್ಕಳು. ಅವರ ಬಗ್ಗೆ ಮಾತನಾಡಿದರೆ ನಾವು ಚೀಪ್ ಆಗುತ್ತೇವೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಮಾರ್ಕ್ ಚಿತ್ರದ ಯಶಸ್ಸಿನ ಬೆನ್ನಲ್ಲೆ ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುತ್ರಿ ಸಾನ್ವಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಸಿನಿಮಾ ಸಕ್ಸಸ್ ಹಿನ್ನೆಲೆಯಲ್ಲಿ ಸೆಲೆಬ್ರೆಷನ್ ಬಗ್ಗೆ ಮಾತನಾಡೋಣ. ಇಂತಹ ವಿಚಾರಗಳ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ಕಿತ್ತೋಗಿರೋ ಕಮೆಂಟ್ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಅವರ ಬಗ್ಗೆ ಮಾತನಾಡಿ ನಾನು ನನ್ನ ಟೈಮ್ ಯಾಕೆ ವ್ಯರ್ಥ ಮಾಡಲಿ ಎಂದು ಅವರು ಹೇಳಿದರು.
ನಾನು ಫೇಸ್ ಮಾಡಿದ್ದಕ್ಕಿಂತ 10 ಪಟ್ಟು ಹೆಚ್ಚು ನನ್ನ ಮಗಳು ಸಾನ್ವಿ ಎದುರಿಸುತ್ತಾಳೆ. ನನಗಿಂತ ಮತ್ತಷ್ಟು ಎತ್ತರಕ್ಕೆ ನನ್ನ ಮಗಳು ಬೆಳೆಯುತ್ತಾಳೆ ಎಂದು ಸುದೀಪ್ ವಿಶ್ವಾಸ ವ್ಯಕ್ತಪಡಿಸಿದರು.
ಹೊಡೆದ್ರೆ ಸುಮ್ಮನೆ ಕೂರುವಷ್ಟು ಒಳ್ಳೆಯ ವ್ಯಕ್ತಿ ನಾನಲ್ಲ. ಪ್ರೀತಿಯಿಂದ ಕರೆದು ಮಾತನಾಡಿದರೆ ಮಾತನಾಡುತ್ತೇನೆ. ಪಕ್ಕದ ಮನೆಯವರು ಒಡೆದ್ರೆ ನಾವು ಬಿಡಲ್ಲ ಎಂದು ಸುದೀಪ್ ದರ್ಶನ್ ಪತ್ನಿ ಕೆಟ್ಟ ಕಮೆಂಟ್ ಮಾಡಿದವರ ವಿರುದ್ಧ ದೂರು ನೀಡಿದ್ದಕ್ಕೆ ಪ್ರತಿಕ್ರಿಯಿಸಿದರು.
ಕೆಟ್ಟ ಕಮೆಂಟ್ ಬಗ್ಗೆ ದರ್ಶನ್ ಪತ್ನಿ ಪೊಲೀಸರಿಗೆ ದೂರು ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಕಲಿ ಖಾತೆಗಳಿಂದ ಕಮೆಂಟ್ ಮಾಡಿರಬಹುದು. ನನ್ನ ಹುಡುಗರು ಸರಿಯಿಲ್ಲ ಎಂದಾದರೆ ಸರಿಪಡಿಸಿಕೊಳ್ಳೋಣ ಎಂದರು.
9 ಸಾವಿರ ಪೈರಸಿ ಲಿಂಕ್ಸ್ ಡಿಲಿಟ್
ಮಾರ್ಕ್ ಚಿತ್ರದ ಬಿಡುಗಡೆಯಾದ ನಂತರ ಒಟ್ಟಾರೆ 9 ಸಾವಿರ ಲಿಂಕ್ಸ್ ಡಿಲಿಟ್ ಮಾಡಿಸಿದ್ದೇವೆ. ಫಸ್ಟ್ ಡೇ ಮತ್ತು ಸೆಕೆಂಡ್ ಡೇ ಶೋ ವೇಳೆ ಸುಮಾರು 4 ಸಾವಿರಕ್ಕೂ ಅಧಿಕ ಲಿಂಕ್ಸ್ ಡಿಲಿಟ್ ಮಾಡಿಸಿದ್ದೇವೆ ಎಂದರು.
ಕಳೆದ ಬಾರಿ ಕೆಲವು ಕೆಟ್ಟ ವ್ಯಕ್ತಿಗಳನ್ನು ಹಿಡಿದು ಬಿಟ್ಟಿದ್ದೆವು. ಈ ಬಾರಿ ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ಪೈರಸಿ ತಡೆಯುವುದು ಸರ್ಕಾರದ ಜವಾಬ್ದಾರಿಯೂ ಆಗಿದೆ. ಆದರೆ ನಮ್ಮ ಸಿನಿಮಾ ರಕ್ಷಿಸಿಕೊಳ್ಳಲು ಏನು ಮಾಡಬೇಕೋ ನಾವು ಅದನ್ನು ಮಾಡಲೇಬೇಕು ಎಂದು ಅವರು ಹೇಳಿದರು.
ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ನಾನು ಜಗಳ ಮಾಡಲು ಸಿನಿಮಾಗೆ ಬಂದಿಲ್ಲ. ನಗಿಸಲು, ಮನರಂಜನೆ ನೀಡಲು ಬಂದಿದ್ದೇನೆ. ಯುದ್ಧ ಅಂತಾ ಬರಲ್ಲಾ, ನನ್ನ ವಿಚಾರ ನಾನು ಮಾಡನಾಡಿದ್ದೆನೆ. ಸಿನಿಮಾ ಅಂದ ಮೇಲೆ ರಾಜಕೀಯ ಇದ್ದಿದ್ದೆ. ನಾವು ಸರಿದೂಗಿಸಿಕೊಂಡು ಹೋಗಬೇಕು ಎಂದು ಸುದೀಪ್ ಹೇಳಿದರು.


