ಮೈಸೂರಿನ ವಿಶ್ವವಿಖ್ಯಾತ ಅರಮನೆ ಬಳಿ ಬಲೂನ್ಗೆ ತುಂಬುವ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದ ತನಿಖೆಗೆ ಇಳಿದ ರಾಷ್ಟ್ರೀಯ ತನಿಖಾ ದಳ ಮೃತಪಟ್ಟ ಬಲೂನ್ ವ್ಯಾಪರಿಯ ಸಂಬಂಧಿಕರ ವಿಚಾರಣೆಗೆ ಮುಂದಾಗಿದೆ.
ಬಲೂನ್ ಗೆ ತುಂಬುವ ವೇಳೆ ಸ್ಫೋಟ ಸಂಭವಿಸಿ ಬಲೂನ್ ವ್ಯಾಪಾರಿ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಸಲೀಂ ಖಮರುದ್ದೀನ್ (40) ಮೃತಪಟ್ಟಿದ್ದು, ಗಾಯಗೊಂಡ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ವಿಶ್ವ ವಿಖ್ಯಾತ ಮೈಸೂರು ಅರಮನೆಯ ಬಳಿ ಜಯಮಾರ್ತಾಂಡ ದ್ವಾರದ ಬಳಿ ಗುರುವಾರ ರಾತ್ರಿ ಘಟನೆ ಸಂಭವಿಸಿದ ಬೆನ್ನಲ್ಲೇ ಎಚ್ಚೆತ್ತ ಎನ್ ಐಎ ತಂಡ ಮೈಸೂರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದೂ ಅಲ್ಲದೇ ಹಲವು ಸ್ಫೋಟದ ಮಾದರಿ ಸಂಗ್ರಹಿಸಿದೆ.
ಇದೇ ವೇಳೆ ಪೊಲೀಸರು ಸಲೀಂ ಜೊತೆಗೆ ಇದ್ದ ಉತ್ತರ ಪ್ರದೇಶದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಜೊತೆಗೆ ಇಬ್ಬರೂ ಸಹ ಮಾರಾಟಕ್ಕೆ ಬಂದಿದ್ದರು ಎನ್ನಲಾಗಿದೆ.
ಸಲೀಂ ಜೊತೆಗೆ ಇಬ್ಬರು ಸಹ ಬಲೂನ್ ಮಾರಾಟ ಮಾಡಲು ತೆರಳುತ್ತಿದ್ದರು ಆದರೆ ನಿನ್ನೆ ಸಲಿ ಒಬ್ಬನೇ ಬಲೂನ್ ಮಾರಲು ಹೋಗಿದ್ದ ಉಳಿದ ಇಬ್ಬರು ಲಾಡ್ಜ್ ನಲ್ಲಿಯೇ ಉಳಿದುಕೊಂಡಿದ್ದರು ನಿನ್ನೆ ಬಲೂನ್ ಮಾಡಲು ಉಳಿದ ಇಬ್ಬರು ಯಾಕೆ ಹೋಗಲಿಲ್ಲ ಎಂದು ಈ ಅನುಮಾನದೊಂದಿಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


