ಮೈಸೂರು: ಅರಮನೆ ಮುಂಭಾಗದಲ್ಲಿ ಬಲೂನ್ ಗೆ ಗಾಳಿ ತುಂಬುವ ಸಿಲಿಂಡರ್ ಸ್ಫೋಟಗೊಂಡು, ಬಲೂನ್ ವ್ಯಾಪಾರಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅರಮನೆಯ ಜಯಮಾರ್ತಂಡ ದ್ವಾರದ ಬಳಿ ರಾತ್ರಿ 9 ಗಂಟೆ ಈ ದುರ್ಘಟನೆ ನಡೆದಿದೆ. ಮೃತರ ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡವರ ಪೈಕಿ ನಂಜನಗೂಡು ಮೂಲದ ಮಂಜುಳಾ, ಬೆಂಗಳೂರು ಮೂಲದ ಲಕ್ಷ್ಮಿ, ಕೊಲ್ಕತ್ತಾ ಮೂಲದ ಶಬ್ಬೀರ್, ರಾಣೆಬೆನ್ನೂರು ಮೂಲದ ಕೊಟ್ರೇಶ್ ಎಂದು ಗೊತ್ತಾಗಿದೆ.
ಅರಮನೆ ಆವರಣದಲ್ಲಿ ಮಾಗಿ ಉತ್ಸವ ನಡೆಯುತ್ತಿದ್ದು ಅದನ್ನು ನೋಡಲು ಮತ್ತು ಕ್ರಿಸ್ ಮಸ್ ಹಿನ್ನಲೆಯಲ್ಲಿ ಅರಮನೆ ವಿದ್ಯುತ್ ದೀಪಲಂಕಾರ ವೀಕ್ಷಣೆ ಮಾಡಲು ಸ್ಥಳೀಯರು ಸೇರಿದಂತೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.
ಈ ವೇಳೆ ಅರಮನೆ ಮುಂಭಾಗ ಬಲೂನ್ ಗೆ ಗ್ಯಾಸ್ ತುಂಬುವ ನೈಟ್ರೋಜನ್ ಸಿಲಿಂಡರ್ ಸ್ಪೋಟಗೊಂಡಿದೆ. ಇದರ ಪರಿಣಾಮ ಬಲೂನ್ ಮಾರುವವರು ಮತ್ತು ಅದನ್ನು ಕೊಂಡುಕೊಳ್ಳಲು ಆಗಮಿಸದವರು ಮತ್ತು ಪಕ್ಕದಲ್ಲಿದ್ದವರು ಸಾವನ್ನಪ್ಪಿದ್ದರೆ, ಐವರಿಗೆ ಗಂಭೀರ ಗಾಯವಾಗಿದೆ.
ಗಾಯಗೊಂಡವರನ್ನು ನಗರದ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಸ್ಪೋಟಕ್ಕೆ ಅಲ್ಲಿದ್ದವರು ಗಾಬರಿಯಾಗಿ ಓಡಲಾರಂಭಿಸಿದ್ದಾರೆ. ಈ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆಯೂ ಹೆಚ್ಚಾಗಿದ್ದು, ಘಟನೆ ಕಂಡು ಅಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಬಿಂದುಮಣಿ, ಸುಂದರ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


