ಕೋಟಿ ರೂ. ಬಹುಮಾನ ಭಾರತೀಯ ಭದ್ರತಾ ಪಡೆ ಘೋಷಿಸಿದ್ದ ನಕಲ್ಸರ ನಾಯಕ ಗಣೇಶ್ ಉಕಿ ಸೇರಿದಂತೆ ನಾಲ್ವರನ್ನು ಓಡಿಶಾದಲ್ಲಿ ಎನ್ ಕೌಂಟರ್ ಮಾಡಲಾಗಿದೆ.
ಸಿಪಿಐ ನಕ್ಸಲ್ ಸಂಘಟನೆಯ ಕೇಂದ್ರ ಸಮಿತಿ ಸದಸ್ಯರಲ್ಲಿ ಒಬ್ಬರಾಗಿದ್ದ ತೆಲುಗು ನಕ್ಸಲ್ ನಾಯಕನಾಗಿದ್ದ 69 ವರ್ಷದ ಗಣೇಶ್ ಉಕಿ ಹತ್ಯೆ ಮಾಡಲಾಗಿದೆ.
ಗಡಿ ಭದ್ರತಾ ಪಡೆ, ಕೇಂದ್ರಿಯ ಮೀಸಲು ಪಡೆ ಜಂಟಿಯಾಗಿ ಕಂಡಮಲ್ ಮತ್ತು ಗಂಜಾಮ್ ಜಿಲ್ಲೆಗಳ ನಡುವೆ ಇರುವ ರಾಂಪಾ ಅರಣ್ಯಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಗಣೇಶ್ ಉಕಿ ಹತ್ಯೆಯಾಗಿದ್ದಾರೆ.
ಗಣೇಶ್ ಉಕಿ ಜೊತೆಗೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಭದ್ರತಾ ಪಡೆಗಳು ಕೊಂದಿವೆ. ಇದು ಇತ್ತೀಚೆಗೆ ಭದ್ರತಾ ಪಡೆಗಳು ನಡೆಸಿದ ಅತ್ಯಂತ ಯಶಸ್ವಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


