ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರ ಸುರಕ್ಷತೆಗಾಗಿ ಬಿಎಂಟಿಸಿ ಬೆಂಗಳೂರು ನಗರದ ಪ್ರಮುಖ ರಸ್ತೆಗಳಿಂದ ಹಲವು ಮಾರ್ಗಗಳಲ್ಲಿ ವಿಶೇಷ ಹೆಚ್ಚುವರಿ ಬಸ್ ಸೇವೆ ನೀಡಲಿದೆ.
ಹೊಸ ವರ್ಷದ ರಾತ್ರಿ ಸಾರ್ವಜನಿಕರು ಖಾಸಗಿ ವಾಹನಗಳ ಬದಲು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂದು ಬಿಎಂಟಿಸಿ ಮನವಿ ಮಾಡಿದೆ. ಅದೇ ರೀತಿ ಪೊಲೀಸ್ ಇಲಾಖೆ ನಗರದಲ್ಲಿ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸದ್ದು, ತೀವ್ರ ನಿಗಾ ವಹಿಸಲಿದೆ.
ಡಿಸೆಂಬರ್ 31ರ ರಾತ್ರಿಯಿಂದ ಜನವರಿ 1ರ ರಾತ್ರಿ 2 ಗಂಟೆಯವರೆಗೆ ನಗರದಲ್ಲಿ ಜನ ಸಂಚಾರ ದಟ್ಟಣೆಯ ತೀವ್ರವಿರಲಿದ್ದು, ನಗರದ ಪ್ರಮುಖ ರಸ್ತೆಗಳಿಂದ ಹಲವು ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಲಭ್ಯವಾಗಲಿದೆ. ಈ ಅವಧಿಯಲ್ಲಿ ಒಟ್ಟು 70 ಹೆಚ್ಚುವರಿ ಬಿಎಂಟಿಸಿ ಬಸ್‌ಗಳು ಕಾರ್ಯಾಚರಿಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.
ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಗೆ – 6 ಬಸ್‌ಗಳು, ಜಿಗಣಿಗೆ – 6 ಬಸ್‌ಗಳು, ಎಂಜಿ ರಸ್ತೆಯಿಂದ ಸರ್ಜಾಪುರಕ್ಕೆ – 6 ಬಸ್‌ಗಳು, ಕೆಂಗೇರಿಗೆ – 4, ಜನಪ್ರಿಯ ಟೌನ್‌ಶಿಪ್‌ಗೆ – 4, ನೆಲಮಂಗಲಕ್ಕೆ – 4, ಯಲಹಂಕಕ್ಕೆ – 4 , ಬಾಗಲೂರಿಗೆ – 4, ಹೊಸಕೋಟೆಗೆ – 6 , ಚನ್ನಸಂದ್ರಕ್ಕೆ – 6, ಕಾಡುಗೋಡಿಗೆ – 4, ಬನಶಂಕರಿಗೆ – 4, ಜೀವನ್ ಭೀಮಾನಗರಕ್ಕೆ – 2, ಮೆಟ್ರೋ ಹಾಗೂ ಮೆಜೆಸ್ಟಿಕ್ ಸಂಪರ್ಕ ಬಸ್‌ಗಳು ಕಾರ್ಯಾಚರಿಸಲಿವೆ. ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ – 4 ಬಸ್‌ಗಳು, ಮೆಜೆಸ್ಟಿಕ್‌ನಿಂದ ಕೋರಮಂಗಲಕ್ಕೆ – 2 ಬಸ್‌ಗಳು ಸಂಚರಿಸಲಿವೆ.


