ಪ್ರೀತಿಗೆ ಒಪ್ಪದ ತಂದೆಗೆ ಡ್ರಗ್ಸ್ ನೀಡಿ ಮೈಮೇಲೆ ಎಚ್ಚರ ಇಲ್ಲದಂತೆ ಮಾಡಿದ ಮಗಳು ಪ್ರಿಯಕರ ಕೊಲೆ ಮಾಡಲು ಹೇಳಿ ನೋಡುತ್ತಾ ನಿಂತ ಅಮಾನವೀಯ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಗುಜರಾತ್‌ನ ವಡೋದರಾದ ಪದ್ರಾ ಗ್ರಾಮದಲ್ಲಿ 17ರ ಹುಡುಗಿ ಗೆಳೆಯನ ಜೊತೆ ಸೇರಿ ತಂದೆಯನ್ನೇ ಕೊಲೆ ಮಾಡಿದ್ದಾಳೆ.
45 ವರ್ಷದ ತಂದೆ ಶಾನಾ ಚಾವ್ಡಾ ಕೊಲೆಯಾದವರು, ಕೊಲೆ ಮಾಡಿದ ಪ್ರಿಯಕರ 25 ವರ್ಷದ ರಂಜಿತ್ ವಾಘೇಲಾನನ್ನು ಬಂಧಿಸಲಾಗಿದೆ. ಅಪ್ರಾಪ್ತೆ ಮಗಳನ್ನು ಬಾಲಗ್ರಹಕ್ಕೆ ಕಳುಹಿಸಲಾಗಿದೆ.
ಪೋಷಕರ ಕೊಲೆ ಮಾಡುವುದಕ್ಕೆ ಬಾಲಕಿ ಮೂರು ಬಾರಿ ಪ್ರಯತ್ನಿಸಿದ್ದು, ಡಿಸೆಂಬರ್ 18ರಂದು ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾಳೆ. ಅಪ್ಪನಿಗೆ ನಿದ್ರೆ ಮಾತ್ರೆ ಕೊಟ್ಟ ಮಗಳು ಅಪ್ಪ ಗಾಢನಿದ್ರೆಗೆ ಜಾರಿದ ನಂತರ ಗೆಳೆಯನನ್ನು ಕರೆಸಿ ಕೊಲೆ ಮಾಡಿಸಿದ್ದಾಳೆ. ಕೊಲೆ ಮಾಡುವಾಗ ಪಕ್ಕದಲ್ಲೇ ನಿಂತು ನೋಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ಜೊತೆ ಸುತ್ತಾಡುತ್ತಿದ್ದ ರಂಜಿತ್ ವಾಘೇಲಾರನ್ನು ಕರೆಸಿ ತಂದೆ 4 ಶಾನಾ ಚಾವ್ಡಾ ಬುದ್ದಿವಾದ ಹೇಳಿದ್ದರು. ಆದರೆ ಮಾತು ಕೇಳದ ಇಬ್ಬರೂ ಓಡಾಡುತ್ತಿದ್ದರಿಂದ ರಂಜಿತ್ ವಾಘೇಲಾ ವಿರುದ್ಧ ದೂರು ನೀಡಿದ ತಂದೆ ಪೋಸ್ಕೋ ಕಾಯಿದೆಯಡಿ ಜೈಲಿಗೆ ಹಾಕಿಸಿದ್ದರು.
ಶಾನಾ ಚಾವ್ಡಾ ಕೊಲೆಯಾಗಿ ಪತ್ತೆಯಾದ ನಂತರ ಅವರ ಸೋದರ ರಂಜಿತ್ ವಾಘೇಲಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅದರಂತೆ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಜುಲೈನಲ್ಲಿ ಬಾಲಕಿ ವಘೇಲಾ ಜೊತೆ ಓಡಿಹೋಗಿದ್ದಳು. ಇತ್ತೀಚೆಗೆ ಹದಿನೈದು ದಿನಗಳ ಹಿಂದೆ ರಂಜಿತ್ ವಘೇಲಾ ತಮ್ಮ ಮಗಳ ಜೊತೆ ಮತ್ತೆ ಸುತ್ತಾಡುವುದನ್ನು ನೋಡಿ, ಶಾನಾ ಚಾವ್ಡಾ ಹಾಗೂ ಆತನಿಗೆ ಜಗಳವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ರಂಜಿತ್ ವಘೇಲಾ ದುವೆಯಾಗುವುದಾದರೆ ಆ ಹುಡುಗಿಯನ್ನು ಮಾತ್ರ ಮದುವೆಯಾಗುವುದಾಗಿ ಮತ್ತು ಈ ವಿಚಾರದಲ್ಲಿ ಯಾರಾದರು ಅಡ್ಡಿ ಬಂದರೆ ಅವರನ್ನು ಕೊಲ್ಲುವುದಕ್ಕೂ ಹಿಂಜರಿಯುವುದಿಲ್ಲ ಎಂದ ಆತ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಶಾನಾ ರಾತ್ರಿಯಲ್ಲಿ ಮಗಳು ಮತ್ತು ಹೆಂಡತಿ ಭಾವನಾಳನ್ನು ಕೋಣೆಯಲ್ಲಿ ಕೂಡಿ ಹಾಕಿ ತಾವು ಹೊರಗೆ ಮಲಗುತ್ತಿದ್ದರು. ಹಿರಿಯ ಮಗಳು ಅವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರಿಂದಾಗಿ ಶಾನಾ ಎರಡನೇ ಪುತ್ರಿಯ ಪ್ರೇಮ ಸಂಬಂಧವನ್ನು ಬಲವಾಗಿ ವಿರೋಧಿಸಿದ್ದರು ಎಂದು ವಡೋದರಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.


