ಬೆಂಗಳೂರು: ಮರ್ಜಿ ಬೈ ಪ್ರೈಮಸ್ ಸಂಸ್ಥೆಯು ಇದೇ ಮೊದಲ ಬಾರಿಗೆ 50 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಮರ್ಜಿ ಕಾರ್ನಿವಲ್ 2025 ಅನ್ನು ಯಶಸ್ವಿಯಾಗಿ ಆಯೋಜಿಸಿದೆ.
ಚರ್ಚ್ ಸ್ಟ್ರೀಟ್‌ನಲ್ಲಿರುವ ಭೈವ್ ಪ್ಲಾಟಿನಂ ವರ್ಕ್‌ಸ್ಪೇಸ್‌ನಲ್ಲಿ ನಡೆದ ಈ ಕಾರ್ಯಕ್ರಮವು ಭೈವ್, ಫೋರ್ಟಿಸ್ ಹಾಸ್ಪಿಟಲ್, ಸ್ವಿಗ್ಗಿ ಸೀನ್ಸ್ ಮತ್ತು ಇತರ ಪಾಲುದಾರರ ಜೊತೆಗಿನ ಜಂಟಿ ಸಹಭಾಗಿತ್ವದಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ನಗರದ ಜೆನ್ ಇವಿ (ಜನರೇಷನ್ ಎವರ್‌ಗ್ರೀನ್) ಭಾಗವಹಿಸಿ ಸಂಭ್ರಮಿಸಿತು.
ಮರ್ಜಿ ಕಾರ್ನಿವಲ್ 2025 ಎಂಬುದು ಮರ್ಜಿ ಬೈ ಪ್ರೈಮಸ್‌ನ ಐಪಿ-ನೇತೃತ್ವದ ಸಮುದಾಯ ಕೇಂದ್ರಿತ ಯೋಜನೆಯಾಗಿದ್ದು, ಬೆಂಗಳೂರಿನಲ್ಲಿ 50+ ವಯಸ್ಸಿನ ನಾಗರಿಕರಿಗೆ ನಡೆದ ಅತಿ ದೊಡ್ಡ ಪ್ರತಿಭಾನ್ವೇಷಣಾ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯಾಗಿತ್ತು. ನಗರವ್ಯಾಪಿ ನಡೆದ ಈ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಮತ್ತು ವರ್ಡ್‌ಪ್ಲೇ ಎಂಬ ಮೂರು ವಿಭಾಗಗಳಲ್ಲಿ 300ಕ್ಕೂ ಹೆಚ್ಚು ಹಿರಿಯರು ಭಾಗವಹಿಸಿದ್ದರು. ಪ್ರೇಕ್ಷಕರ ಮತದಾನದ ಆಧಾರದಲ್ಲಿ ಪ್ರತೀ ವಿಭಾಗದಿಂದ 10 ಮಂದಿಯನ್ನು ಶಾರ್ಟ್‌ಲಿಸ್ಟ್ ಮಾಡಲಾಯಿತು. ಪ್ರತೀ ವಿಭಾಗದಿಂದ ಮೂರು ಫೈನಲಿಸ್ಟ್ ಗಳು ಗ್ರ್ಯಾಂಡ್ ಫಿನಾಲೆಯಲ್ಲಿ ಲೈವ್ ಪ್ರದರ್ಶನ ನೀಡುವ ಅವಕಾಶ ಗಳಿಸಿದರು ಮತ್ತು ಅಂತಿಮ ಹಂತದಲ್ಲಿ ವಿಜೇತರ ಹೆಸರನ್ನು ಘೋಷಿಸಲಾಯಿತು.
ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಸಿದ್ಧ ಫ್ಯಾಷನ್ ಡಿಸೈನರ್ ಶ್ರೀ ಪ್ರಸಾದ್ ಬಿದಪ ಮತ್ತು ಪ್ರಖ್ಯಾತ ಪರಿಸರವಾದಿ ಶ್ರೀಮತಿ ರೇವತಿ ಕಾಮತ್ ಗೌರವಾನ್ವಿತ ತೀರ್ಪುಗಾರರಾಗಿ ಭಾಗಲಹಿಸಿದ್ದರು. ಖ್ಯಾತ ಭರತನಾಟ್ಯ ನರ್ತಕಿ ಮತ್ತು ಶಿಕ್ಷಣತಜ್ಞೆ ಪದ್ಮಿನಿ ರವಿ ಕೂಡಾ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ನಟ ಮತ್ತು ನಿರ್ದೇಶಕ ಶ್ರೀ ಪ್ರಕಾಶ್ ಬೆಳವಾಡಿ ಅವರು ಗೌರವ ಅತಿಥಿಯಾಗಿ ಭಾಗವಹಿಸಿದರು. ಸಂಜೆ ನೃತ್ಯ, ಸಂಗೀತ ಮತ್ತು ಸಂವಾದ ಕಾರ್ಯಕ್ರಮಗಳು ನಡೆದುವು.
ಈ ಸಂದರ್ಭದಲ್ಲಿ ಮಾತನಾಡಿದ ಮರ್ಜಿ ಬೈ ಪ್ರೈಮಸ್‌ನ ಸಂಸ್ಥಾಪಕರಾದ ಶ್ರೀ ಆದರ್ಶ್ ನರಹರಿ ಅವರು, “ಮರ್ಜಿ ಕಾರ್ನಿವಲ್ 2025 ಅನ್ನು ನಾವು 50+ ವಯಸ್ಸಿನ ನಾಗರಿಕರ ಹುಮ್ಮಸ್ಸು ಹೆಚ್ಚಿಸುವ, ಸೃಜನಶೀಲ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವ ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯಕ್ರಮವಾಗಿ ರೂಪಿಸಿದ್ದೆವು. ನಾವು ಪ್ರೀತಿಯಿಂದ ಜನರೇಷನ್ ಎವರ್‌ಗ್ರೀನ್ ಎಂದು ಕರೆಯುವ ಈ ವಿಭಾಗಕ್ಕೆ ಅವರ ಅಭಿವ್ಯಕ್ತಿ ಅಥವಾ ಸಂತೋಷಕ್ಕೆ ವಯಸ್ಸು ಎಂದೂ ತಡೆಗೋಡೆಯಾಗಬಾರದು. ಇಂತಹ ಯೋಜನೆಗಳ ಮೂಲಕ ಹಿರಿಯರು ಸಂಭ್ರಮಿಸುವ, ಅವರ ಕತೆಗಳನ್ನು ಹೇಳುವ ಮತ್ತು ನಿಜವಾಗಿಯೂ ಸಂತೋಷಪಡುವ ಒಂದು ಸೊಗಸಾದ, ಒಳಗೊಳ್ಳುವಂತಹ ವೇದಿಕೆಯನ್ನು ರೂಪಿಸುವುದು ನಮ್ಮ ಉದ್ದೇಶವಾಗಿ” ಎಂದು ಹೇಳಿದರು.
ಮರ್ಜಿ ಬೈ ಪ್ರೈಮಸ್‌ನ ಸಹ-ಸಂಸ್ಥಾಪಕರಾದ ವಿಭಾ ಸಿಂಗಲ್ ಅವರು ಮಾತನಾಡಿ, “ಈ ಕಾರ್ನಿವಲ್ 50 ವರ್ಷದ ನಂತರದ ಜೀವನವನ್ನು ಸಂಭ್ರಮಿಸುವ ಮತ್ತು ಅರ್ಥಪೂರ್ಣ ಕ್ಷಣಗಳನ್ನು ಕಳೆಯುವ ಒಂದು ಸೊಗಸಾದ ಮಾರ್ಗವಾಗಿದೆ. ಮರ್ಜಿಯಲ್ಲಿ ನಾವು ವಯಸ್ಸಾಗುವಿಕೆಯನ್ನು ಘನತೆಯಿಂದ ಎದುರಿಸಬೇಕು ಎಂದು ಬಯಸುತ್ತೇವೆ. ಅದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ನಮ್ಮ ಮೊದಲ ಕಾರ್ನಿವಲ್ ಆಯೋಜಿಸಿದ್ದು, ಈ ಮೂಲಕ ಹಿರಿಯರು ಸಂಭ್ರಮಿಸುವ ವೇದಿಕೆ ಕಲ್ಪಿಸಿರುವುದು ಹೆಮ್ಮೆ ತಂದಿದೆ,” ಎಂದು ಹೇಳಿದರು.


