Menu

ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಈ ಬಾರಿ ಫೆ. 24ರಿಂದ ಮಾ. 4ರವರೆಗೆ

ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಈ ಬಾರಿ ಫೆ. 24ರಿಂದ ಮಾ. 4ರವರೆಗೆ ಒಂಬತ್ತು ದಿನ ನಡೆಯಲಿದೆ. ಫೆ.24 ರಂದು ದೇವಿಯ ರಥದ ಕಲಶ ಪ್ರತಿಷ್ಠೆ ಮತ್ತು ಜಾತ್ರಾ ಕಲ್ಯಾಣ ಪ್ರತಿಷ್ಠೆ, ಫೆ.25 ರಂದು ಬೆಳಗ್ಗೆ 7.27ಕ್ಕೆ ರಥೋತ್ಸವ ನಡೆಯಲಿದೆ. ಜನವರಿ 7ರಿಂದಲೇ ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಹೊರಬೀಡು, ರಥದ ಮರಕ್ಕೆ ಪೂಜೆ ಸೇರಿ ಹಲವು ಧಾರ್ಮಿಕ ಕಾರ್ಯಗಳು ನಡೆಯಲಿವೆ.

ಫೆ.25 ರಂದು ಬೆಳಗ್ಗೆ 7.27ಕ್ಕೆ ರಥೋತ್ಸವ ಹಾಗೂ ಫೆ.26ರಂದು ಗದ್ದುಗೆ ಸೇವೆಗಳು ನಡೆದು ಮಾರ್ಚ್‌ 4ರಂದು ಜಾತ್ರೆ ಮುಕ್ತಾಯವಾಗಲಿದೆ. ಮಾರ್ಚ್‌ 19ರಂದು ಯುಗಾದಿ ಪ್ರತಿಷ್ಠೆ ನೆರವೇರಲಿದೆ.

ದೇವಾಲಯದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಜಾತ್ರಾ ದಿನಾಂಕ ಮತ್ತು ಧಾರ್ಮಿಕ ಚಟುವಟಿಕೆಗಳ ಮಾಹಿತಿಯ ಪತ್ರಿಕೆಯನ್ನು ವಿದ್ವಾನ್ ಶರಣಾಚಾರ್ಯರು ಓದಿದರು. ಸಭೆಯಲ್ಲಿ ಶಾಸಕ ಭೀಮಣ್ಣ ಟಿ ನಾಯ್ಕ, ಎಸಿ ಕಾವ್ಯರಾಣಿ, ಡಿವೈಎಸ್‌ಪಿ ಗೀತಾ ಪಾಟೀಲ್, ದೇವಾಲಯದ ಅಧ್ಯಕ್ಷ ರವೀಂದ್ರ ಗಣಪತಿ ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೆಕರ್, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಪ್ರಮುಖ ಬಾಬುದಾರರಾದ ಜಗದೀಶ ಗೌಡ್ರು, ಪೌರಾಯುಕ್ತರಾದ ಪ್ರಕಾಶ ಚನ್ನಪ್ಪನವರ್, ಅಧಿಕಾರಿಗಳು, ಬಾಬುದಾರರು ಮತ್ತು ಸಾರ್ವಜನಿಕರು ಭಾಗಿಯಾಗಿದ್ದರು.

ಜಾತ್ರಾ ದಿನಗಳಲ್ಲಿ ಜನ ದಟ್ಟಣೆ ಹೆಚ್ಚಿರುವ ಕಾರಣ ನೀವು ದೇವಿಯ ದರ್ಶನವನ್ನು ನಿರಾತಂಕವಾಗಿ ಪಡೆಯಬೇಕೆಂದರೆ ಫೆಬ್ರವರಿ 26 ಅಥವಾ 27 ರ ನಂತರ ಬರುವುದು ಸೂಕ್ತ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಗೆ ಕರ್ನಾಟಕದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ಮಹಾರಾಷ್ಟ್ರ, ಗೋವಾ ಹಾಗೂ ಇತರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಶಿರಸಿ ಮಾರಿಕಾಂಬೆಯ ಹಿನ್ನೆಲೆ

ವಿರಾಟ ನಗರವಾಗಿದ್ದ ಈಗಿನ ಹಾನಗಲ್ಲಿನಲ್ಲಿ ಧರ್ಮರಾಯನು ದೇವಿಯನ್ನು ಆರಧಿಸುತ್ತಿದ್ದನ್ನು ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಚಾಲುಕ್ಯರ ಕಾಲದ ಶಾಸನದಲ್ಲಿ ಕೂಡ ಇದರ ಉಲ್ಲೇಖವಿದೆ. ಹಾನಗಲ್ಲಿನಲ್ಲಿ ಜಾತ್ರೆ ಮುಗಿದ ನಂತರ ಆಭರಣ ಗಳ ಸಮೇತವಾಗಿ ದೇವಿಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಇಟ್ಟಿದ್ದರು. ಅದನ್ನು ಕಳ್ಳರು ಅಪಹರಿಸಿ ಸಿರ್ಸಿಗೆ ತಂದರು. ಆಭರಣಗಳನ್ನು ಹಂಚಿಕೊಂಡ ನಂತರ ವಿಗ್ರಹವನ್ನು ಪೆಟ್ಟಿಗೆಯಲ್ಲಿಟ್ಟು ಕೆರೆಗೆ ಎಸೆದರು. ಆ ಕೆರೆಯು ಸಿರ್ಸಿಯ ದೇವಿಕೆರೆ ಎಂದು ಹೆಸರಾಗಿದೆ.

ಭಕ್ತನೊಬ್ಬ ಪ್ರತಿ ವರ್ಷ ಚಂದ್ರಗುತ್ತಿಯ ಜಾತ್ರೆಗೆ ಹೋಗುತ್ತಿದ್ದ. ಒಂದು ಬಾರಿ ಅವನನ್ನು ಜನರು ತಡೆದು ಪೀಡಿಸಿದರು. ಮುಂದಿನ ವರ್ಷ ಜಾತ್ರೆಗೆ ಹೋಗದೆ ಸಿರ್ಸಿಯಲ್ಲಿಯೇ ದೇವಿಯ ಆರಾಧನೆ ಮಾಡಿದನು. ರಾತ್ರಿ ದೇವಿ ಅವನಿಗೆ “ನಾನು ಮಾರಮ್ಮ. ನಾನು ನಿಮ್ಮ ಊರಿನ ಕೆರೆಯಲ್ಲಿದ್ದೇನೆ. ನನ್ನನ್ನು ಮೇಲೆತ್ತು” ಎಂದು ಹೇಳಿದಂತೆ ಕನಸು ಬಿತ್ತು. ಅವನು ಊರಿನ ಪ್ರಮುಖರಿಗೆ ತಿಳಿಸಿದ, ಊರವರು ಕೆರೆಯ ಸುತ್ತ ಸೇರಿ ಭಕ್ತನು ಮೂರು ಸುತ್ತು ಕೆರೆಯನ್ನು ಸುತ್ತಿ ದೇವಿಯನ್ನು ಪ್ರಾರ್ಥಿಸಿ ದನು. ಕೆರೆಯ ಮೇಲೆ ತೇಲುತ್ತಿರುವ ಪೆಟ್ಟಿಗೆಯು ಕಂಡುಬಂದಿತು. ಅದರಲ್ಲಿನ ವಿಗ್ರಹದ ಭಾಗಗಳನ್ನು ಒಟ್ಟು ಸೇರಿಸಲಾಗಿ ದೇವಿಯ ವಿಗ್ರಹವು ಮೂಡಿಬಂದಿತು ಎಂದು ಹೇಳಳಾಗುತ್ತಿದೆ.

ಗ್ರಾಮಸ್ಥರು ದೇವಿಯ ವಿಗ್ರಹವನ್ನು ಸಿರ್ಸಿಯಲ್ಲಿ ಸ್ಥಾಪಿಸಲು ಸೋಂದಾ ಸಂಸ್ಥಾನದ ಮಹಾರಾಜರನ್ನು ಕೇಳಿದರು. ಕ್ರಿ.ಶ. ೧೬೮೯ರಲ್ಲಿ ಶಾಲಿವಾಹನ ಶಕೆ ೧೬೧೧ರ ಶುಕ್ಲ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿಯಂದು ಮಂಗಳವಾರ ದೇವಿಯನ್ನು ಈಗಿನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.

Related Posts

Leave a Reply

Your email address will not be published. Required fields are marked *