ಪ್ರೀತಿಸಿ ಮದುವೆಯಾದ ಮಗಳು ಆರು ತಿಂಗಳ ಗರ್ಭಿಣಿಯಾಗಿರುವಾಗಲೇ ತಂದೆ ಕೊಲೈದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಏಳು ತಿಂಗಳ ಹಿಂದೆ ಮಾನ್ಯ ಪಾಟೀಲ್ ಮತ್ತು ವಿವೇಕಾನಂದ್ ದೊಡ್ಡಮನಿ ಪ್ರೀತಿಸಿ ಮದುವೆಯಾಗಿದ್ದರು.
ವಿವೇಕಾನಂದ ದೊಡ್ಡಮನಿ ದಲಿತ ಸಮುದಾಯಕ್ಕೆ ಸೇರಿದ್ದರಿಂದ ಮಾನ್ಯ ಪಾಟೀಲ್ ಕುಟುಂಬಸ್ಥರುಈ ಮದುವೆಯನ್ನು ವಿರೋಧಿಸಿದ್ದರು. ಇದೇ ವಿಚಾರಕ್ಕೆ ಗಲಾಟೆಯಾಗಿ ಎರಡು ಕುಟುಂಬಗಳ ನಡುವೆ ಪೊಲೀಸರು ರಾಜಿ ಪಂಚಾಯ್ತಿ ನಡೆಸಿದ್ದರು.
ರಿಜಿಸ್ಟರ್ ಮದುವೆಯಾದ ಬಳಿಕ ಮಾನ್ಯ ಮತ್ತು ವಿವೇಕಾನಂದ್ ಹಾವೇರಿ ಜಿಲ್ಲೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಗ್ರಾಮಕ್ಕೆ ಹಿಂದಿರುಗಿದ್ದರು. ಆ ವೇಳೆ ಮಾನ್ಯಳ ತಂದೆ ಪ್ರಕಾಶ್ ಗೌಡ ಪಾಟೀಲ್, ಮಾವ ವೀರನಗೌಡ ಪಾಟೀಲ್ ಮತ್ತು ಸೋದರ ಅರುಣ್ ಗೌಡ ತಲ್ವಾರ್‌ನಿಂದ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದಕ್ಕೂ ಮೊದಲು ಮಾನ್ಯಳ ಕುಟುಂಬದವರು ವಿವೇಕಾನಂದ್ ತಂದೆ ಸುಭಾಷ್ ದೊಡ್ಡಮನಿ ಅವರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆಸಿ ಹತ್ಯೆಗೆ ಯತ್ನಿಸಿ ತಂದೆಗೆ ಅಪಘಾತವಾಗಿದೆ ಎಂದು ವಿವೇಕಾನಂದ್‌ಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಲೇ ವಿವೇಕಾನಂದ್ ಮನೆಯಿಂದ ಹೊರಗೆ ಹೋಗಿದ್ದಾನೆ. ಅತ್ತೆ ರೇಣವ್ವಾ ಜೊತೆ ಮಾನ್ಯ ಮನೆಯಲ್ಲಿದ್ದಳು. ಮನೆಯಲ್ಲಿ ಇಬ್ಬರೇ ಇದ್ದಾಗ ಪಾಟೀಲ್ ಕುಟುಂಬಸ್ಥರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಾನ್ಯ ಅಸು ನೀಗಿದ್ದರೆ, ಅತ್ತೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಮಾನ್ಯ ಪಾಟೀಲ್ ತಂದೆ ಪ್ರಕಾಶಗೌಡ ಪಾಟೀಲ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಲೆ ಬೀಸಿದ್ದಾರೆ.
ಪ್ರೀತಿ ಒಪ್ಪದ ತಂದೆಯ ಕೊಲೆಗೈದ ಮಗಳು
ಗುಜರಾತ್‌ನ ವಡೋದರಾದ ಪದ್ರಾ ಗ್ರಾಮದಲ್ಲಿ ತನ್ನ ಪ್ರೇಮ ಸಂಬಂಧವನ್ನು ವಿರೋಧಿಸಿ ಮನೆಯಲ್ಲಿ ಕೂಡಿ ಹಾಕಿದ್ದರಿಂತ ಕುಪಿತಗೊಂಡ 17ರ ಹುಡುಗಿ ಗೆಳೆಯನ ಜೊತೆ ಸೇರಿ ತಂದೆಯನ್ನೇ ಕೊಲೆ ಮಾಡಿದ್ದಾಳೆ. ಪೋಷಕರ ಕೊಲೆ ಮಾಡುವುದಕ್ಕೆ ಬಾಲಕಿ ಮೂರು ಬಾರಿ ಪ್ರಯತ್ನಿಸಿದ್ದು, ಡಿಸೆಂಬರ್ 18ರಂದು ಯಶಸ್ವಿಯಾಗಿದ್ದಾಳೆ. ಬಾಲಕಿ ನಿದ್ರೆ ಮಾತ್ರೆ ಹಾಕಿದ್ದು, ತಂದೆ ಗಾಢನಿದ್ರೆಗೆ ಜಾರಿದ ನಂತರ ಗೆಳೆಯನ ಕರೆಸಿ ಆತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
45 ವರ್ಷದ ಶಾನಾ ಚಾವ್ಡಾ ಕೊಲೆಯಾದವರು, 25 ವರ್ಷದ ರಂಜಿತ್ ವಾಘೇಲಾ ಕೊಲೆ ಆರೋಪಿ. ಈತನ ವಿರುದ್ಧ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿ ಜೈಲಿಗೆ ಹೋಗಿದ್ದ. ಯುವತಿಯ ತಂದೆ ಶಾನಾ ಚಾವ್ಡಾ ನೀಡಿದ ದೂರಿನಡಿ ಜೈಲಿಗೆ ಹೋಗಿಜಾಮೀನಿನ ಮೇಲೆ ಹೊರಬಂದಿದ್ದ.
ಶಾನಾ ಚಾವ್ಡಾ ಕೊಲೆಯಾಗಿ ಪತ್ತೆಯಾದ ನಂತರ ಅವರ ಸೋದರ ರಂಜಿತ್ ವಾಘೇಲಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅದರಂತೆ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಜುಲೈನಲ್ಲಿ ಬಾಲಕಿ ವಘೇಲಾ ಜೊತೆ ಓಡಿಹೋಗಿ ದ್ದಳು. ಇತ್ತೀಚೆಗೆ ಹದಿನೈದು ದಿನಗಳ ಹಿಂದೆ ರಂಜಿತ್ ವಘೇಲಾ ತಮ್ಮ ಮಗಳ ಜೊತೆ ಮತ್ತೆ ಸುತ್ತಾಡುವುದನ್ನು ನೋಡಿ, ಶಾನಾ ಚಾವ್ಡಾ ಹಾಗೂ ಆತನಿಗೆ ಜಗಳವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ರಂಜಿತ್ ವಘೇಲಾ ದುವೆಯಾಗುವುದಾದರೆ ಆ ಹುಡುಗಿಯನ್ನು ಮಾತ್ರ ಮದುವೆಯಾಗುವುದಾಗಿ ಮತ್ತು ಈ ವಿಚಾರದಲ್ಲಿ ಯಾರಾದರು ಅಡ್ಡಿ ಬಂದರೆ ಅವರನ್ನು ಕೊಲ್ಲುವುದಕ್ಕೂ ಹಿಂಜರಿಯುವುದಿಲ್ಲ ಎಂದ ಆತ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಶಾನಾ ರಾತ್ರಿಯಲ್ಲಿ ಮಗಳು ಮತ್ತು ಹೆಂಡತಿ ಭಾವನಾಳನ್ನು ಕೋಣೆಯಲ್ಲಿ ಕೂಡಿ ಹಾಕಿ ತಾವು ಹೊರಗೆ ಮಲಗುತ್ತಿದ್ದರು. ಹಿರಿಯ ಮಗಳು ಅವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರಿಂದಾಗಿ ಶಾನಾ ಎರಡನೇ ಪುತ್ರಿಯ ಪ್ರೇಮ ಸಂಬಂಧವನ್ನು ಬಲವಾಗಿ ವಿರೋಧಿಸಿದ್ದರು ಎಂದು ವಡೋದರಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.


