ಬೆಂಗಳೂರಿನ ರಾಜಗೋಪಾಲ ನಗರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸ್ನೇಹಿತ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತನಾಗಿ ಪರಿಚಿತನಾಯಿದ್ದ ವ್ಯಕ್ತಿ ಸಹಾಯದ ಹೆಸರಲ್ಲಿ ಮಹಿಳೆಯನ್ನು ದೈಹಿಕವಾಗಿ ಬಳಸಿಕೊಳ್ಳುವ ಯತ್ನ ನಡೆಸಿರುವುದಾಗಿ ಆರೋಪಿಸಲಾಗಿದೆ.
ಇದರಿಂದ ಮನನೊಂದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಗಳಿಗೆ ಗ್ಯಾಸ್ ಸಿಲಿಂಡ್ ಸ್ಪೋಟದಿಂದ ಗಾಯಗೊಂಡಿದ್ದ ಮಗಳ ಚಿಕಿತ್ಸೆಗಾಗಿ ಮಹಿಳೆ ಆರೋಪಿ ಪಾರಿತೋಷ್ ಯಾದವ್ ಅವರಿಂದ 30 ಸಾವಿರ ಹಣ ಸಾಲ ಪಡೆದಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ದೈಹಿಕವಾಗಿ ಸಹಕರಿಸುವಂತೆ ಕಾಟ ಕೊಡುತ್ತಿದ್ದ. ಪ್ರತಿನಿತ್ಯ ಮೆಸೇಜ್ ಮಾಡಿ ಕಿರುಕುಳ ಕೊಡುತ್ತಿದ್ದ. ಸಹಕರಿಸದಿದ್ದರೆ ಪಾರ್ನ್ ವೆಬ್ ಸೈಟ್, ವೇಶ್ಯಾವಾಟಿಕೆ ಮಾಡುವವರಿಗೆ ಮಹಿಳೆಯ ನಂಬರ್ ಕೊಡುವುದಾಗಿ ಬೆದರಿಸಿದ್ದ ಎನ್ನಲಾಗಿದೆ.
ಅಸಭ್ಯ ಮೆಸೇಜ್ ಮಾಡುವುದರ ಜೊತೆಗೆ ಅಸಭ್ಯ ವೀಡಿಯೊ ಕಳಿಸುತ್ತಿದ್ದ. ವಿಷಯ ಗಂಡನಿಗೆ ತಿಳಿದು ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಗಂಡನನ್ನು ತೊರೆದು ಸ್ನೇಹಿತೆಯರ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಲ್ಳಲು ಮಹಿಳೆ ಯತ್ನಿಸಿದ್ದಾರೆ.


