Menu

ಔಟ್‌ಗೋಯಿಂಗ್‌ ಮತ್ತು ಇನ್‌ಕಮಿಂಗ್‌ ಪಾಲಿಟಿಕ್ಸ್‌ನಲ್ಲಿ ಜನ ಹೈರಾಣ: ಛಲವಾದಿ

ರಾಜ್ಯದಲ್ಲಿ ಔಟ್‌ಗೋಯಿಂಗ್‌ ಮತ್ತು ಇನ್‌ಕಮಿಂಗ್‌ ಪಾಲಿಟಿಕ್ಸ್‌ನಲ್ಲಿ ಜನರ ಮಾರಣಹೋಮವಾಗುತ್ತಿದೆ. ಅಭಿವೃದ್ಧಿ ಶೂನ್ಯವಾಗಿದೆ. ಬರೀ ಲೂಟಿ ಕೆಲಸ ನಡೆಯುತ್ತಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಬೆಳಗಾವಿ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಲೂಟಿ ಮಾಡುವುದರಲ್ಲಿ ನಿರತವಾಗಿದೆ. ವಾಲ್ಮೀಕಿ ನಿಗಮದ ಐದು ಸಾವಿರ ಕೋಟಿ ರೂಪಾಯಿ ಎಲ್ಲಿ ಹೋಗಿದೆ? ಸಚಿವರಿಂದ ಜಮೀನು ಕದಿಯುವ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಚಿವರ ಹಗರಣ ಹೊರಬೀಳಲಿವೆ ಎಂದರು.

ಕಲ್ಯಾಣ ಕರ್ನಾಟಕದ ವಿಚಾರಗಳ ಬಗ್ಗೆ ಸರಕಾರ ಬೇಜವಾಬ್ದಾರಿ ತೋರಿದೆ. ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸರಕಾರ ವಿಫಲವಾಗಿದೆ. ಇನ್ನೊಂದು ವಾರ ಅಧಿವೇಶನ ಮುಂದುವರಿಸುವಂತೆ ಒತ್ತಾಯಿಸಿದ್ದೇವೆ. ಆದರೆ ಸಿಎಂ ಮನಸ್ಸು ಮಾಡಿಲ್ಲ. ಬೆಳಗಾವಿಗೆ ಬಂದು ಬರಿಗೈಯಲ್ಲಿ ಹೋದಂತಾಗುತ್ತಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *