35 ವರ್ಷಗಳ ಮಾದಿಗ ಮೀಸಲಾತಿ ಹೋರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ಫಲ ಸಿಕ್ಕಿದೆ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.
ಬೆಳಗಾವಿ ನಗರದಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ಸದನದಲ್ಲಿ ಒಳ ಮೀಸಲಾತಿ ವಿಧೇಯಕ ಅಂಗೀಕಾರಗೊಂಡಿದೆ.ವಿಪಕ್ಷವೂ ಬೆಂಬಲ ನೀಡಿದೆ. ಶೋಷಿತ ಮಾದಿಗ ಸಮಾಜಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಐತಿಹಾಸಿಕ ತೀರ್ಮಾನ ನೀಡಿ ನ್ಯಾಯ ಒದಗಿಸಿದೆ. ನಿಜವಾದ ಸ್ವಾತಂತ್ರ್ಯ ನಮಗೆ ಈಗ ಸಿಕ್ಕಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೆ ಸೂಕ್ತ ನಿರ್ಧಾರ ಕೈಗೊಂಡಿದೆ. ಇದಕ್ಕೆ ಸಹಕರಿಸಿದ ಎಲ್ಲ ಶಾಸಕರು, ಸಚಿವರು ಅಭಿನಂದನಾರ್ಹರು ಎಂದು ಹೇಳಿದರು.
ಒಳಮೀಸಲಾತಿಗೆ ಲಂಬಾಣಿ ಸಮಾಜದ ವಿರೋಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬೋವಿ, ಲಂಬಾಣಿ, ಕೊರಮ, ಕೊರಚ ಸಮಾಜಗಳಿಗೆ ಅನ್ಯಾಯ ಆಗದಂತೆ ಬದಲಾವಣೆಗೆ ಸರಕಾರ ಅವಕಾಶ ನೀಡಿದೆ. ಜನಸಂಖ್ಯೆ ಜಾಸ್ತಿ ಇದ್ದರೆ ರುಜುವಾತುಪಡಿಸಲು ಅವಕಾಶವಿದೆ. ನ್ಯಾ.ನಾಗಮೋಹನದಾಸ ವರದಿಯನ್ನು ಸ್ವಲ್ಪ ಬದಲಾವಣೆ ಮಾಡಲಾಗಿದೆ. ಸಮಸ್ಯೆಗಳಿದ್ದರೆ ಪರ್ಮನೆಂಟ್ ಕಮೀಷನರೇಟ್‌ನಲ್ಲಿ ಸರಿಪಡಿಸಿಕೊಳ್ಳಲು ಅವಕಾಶ ಇದೆ ಎಂದು ಅಭಿಪ್ರಾಯಪಟ್ಟರು.


