ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಣ್ಣ ಪಾಳ್ಯದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಖಾಸಗಿ ಅಂಗ ತೋರಿಸಿದ್ದು, ಪ್ರಶ್ನಿಸಿದ್ದಕ್ಕೆ ಪುಡಿ ರೌಡಿಗಳೊಂದಿಗೆ ಬಾಗಿಲು ಒಡೆದು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾನೆ.
ಪುಷ್ಪರಾಣಿ ಪತಿಯೊಂದಿಗೆ ಅಂಗಡಿಗೆ ಹೋಗುವಾಗ ಬೈಕ್‌ನಲ್ಲಿ ಬಂದ ಕಾರ್ತಿಕ್ ಎಂಬಾತ ಮುಂದೆ ನಿಂತು ಪ್ಯಾಂಟ್ ಜೀಪ್ ಬಿಚ್ಚಿ ಖಾಸಗಿ ಅಂಗ ತೋರಿಸಿದ್ದ, ಇದನ್ನ ಪ್ರಶ್ನಿಸಿದ್ದ ದಂಪತಿ ಅಲ್ಲಿಂದ ಮನೆಗೆ ವಾಪಸ್ ಆಗಿದ್ದಾರೆ.
ಬಳಿಕ ಕಾರ್ತಿಕ್ 30 ಕ್ಕೂ ಹೆಚ್ಚು ಪುಡಿ ರೌಡಿಗಳೊಂದಿಗೆ ಆಕೆಯ ಮನೆಗೆ ನುಗ್ಗಿ ಕಿಟಿಕಿ ಗಾಜು, ಬಾಗಿಲುಗಳನ್ನು ಕ್ರಿಕೆಟ್ ಬ್ಯಾಟ್ ಮಚ್ಚಿನಿಂದ ಒಡೆದು ಹಾಕಿದ್ದಾನೆ. ಮನೆಯಲ್ಲಿದ್ದವರಿಗೆಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಪೊಲೀಸ್ ಬರುವಷ್ಟರಲ್ಲಿ ಪರಾರಿಯಾಗಿದ್ದಾರೆ. ಬಾಗಿಲು, ಕಿಟಕಿ ಗಾಜು ,ಸಿಸಿಟಿವಿ, ಹೂವಿನ ಕುಂಡ ಒಡೆದು ಗಲಾಟೆ ಮಾಡಿದ್ದು, ಮಕ್ಕಳು ಭಯಭೀತರಾಗಿದ್ದರು. ಶೋಭಾರಾಣಿ ಈ ಸಂಬಂಧ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅಪಾರ್ಟ್ಮೆಂಟ್‌ನಲ್ಲಿ ನೈತಿಕ ಪೋಲಿಸ್ ಗಿರಿ
ಕುಂಬಳಗೋಡು ಬಳಿಯ ಪ್ರಾವಿಡೆಂಟ್ ಸನ್ ಬರ್ತ್ ಅಪಾರ್ಟ್‌ಮೆಂಟ್‌ನಲ್ಲಿ ಸಿಗರೇಟ್ ಸೇದಿದ್ರೆ 10 ಸಾವಿರ, ಗಾಂಜಾ ಸೇದಿದ್ರೆ 30 ಸಾವಿರ, ಎಣ್ಣೆ ಹೊಡೆದ್ರೆ 20 ಸಾವಿರ ದಂಡ ವಿಧಿಸಲಾಗುತ್ತದೆ. ಆದರೆ, ಕಾನೂನು, ಪೊಲೀಸ್, ಕೋರ್ಟ್ ಯಾವುದೂ ಇದರಲ್ಲಿ ಭಾಗಿಯಲ್ಲ.
ಕೋರ್ಟ್ ಹೋಗೊ ಹಾಗಿಲ್ಲ, ಕೇಸ್ ಹಾಕುವಂತಿಲ್ಲ, ಇಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳದ್ದೇ ಕಾನೂನು. ಇಲ್ಲಿ ವಾಸಿಸುವವರು ಎಣ್ಣೆ, ಸಿಗರೇಟ್, ಗಾಂಜಾ ಸೇದಿದ್ರೆ ಬೇಸ್ ಮೆಂಟ್‌ನಲ್ಲೇ ರಾಜಿ ಪಂಚಾಯತಿ ನಡೆದು ದಂಡ ವಿಧಿಸಲಾಗುತ್ತದೆ.
ಮನೆ ಮನೆ ಪೋಲಿಸ್ ಅಪಾರ್ಟ್‌ಮೆಂಟ್ ಗೆ ಅನ್ವಯಿಸಲ್ವ ಎಂದು ಪ್ರಶ್ನಿಸಿ ಇಲ್ಲಿನ ನೊಂದ ಸಂತ್ರಸ್ತರು ಪೊಲೀಸ್ ಇಲಾಖೆಗೆ ಅನಾಮಧೇಯ ಪತ್ರ ಬರೆದಿದ್ದಾರೆ.


