Saturday, January 31, 2026
Menu

ಕೋಟಿ ರೂ. ವಿಮೆ ಹಣ ಪಡೆಯಲು ಅಮಾಯಕನನ್ನು ತನ್ನ ಕಾರಲ್ಲಿ ಸುಟ್ಟು ಹಾಕಿದಾತ ಅರೆಸ್ಟ್‌

ಮಹಾರಾಷ್ಟ್ರದ ಲಾತೂರಿನಲ್ಲಿ ಒಂದು ಕೋಟಿ ರೂ. ವಿಮೆ ಹಣ ಪಡೆಯಲು ಲಿಫ್ಟ್‌ ಕೊಡೋದಾಗಿ ನಂಬಿಸಿ ವ್ಯಕ್ತಿಯೊಬ್ಬನನ್ನು ಕರೆದೊಯ್ದು ಕಾರಲ್ಲಿ ಸುಟ್ಟು ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್ ವಸೂಲಾತಿ ಏಜೆಂಟ್ ಗಣೇಶ್ ಚೌಹಾಣ್​ ಬಂಧಿತ ಆರೋಪಿ. ಆತ ಒಂದು ಕೋಟಿ ರೂ. ವಿಮೆ ಹಣವನ್ನು ಪಡೆಯುವ ಉದ್ದೇಶಕ್ಕ್ಕಾಗಿ ತಾನೇ ಸತ್ತಿರುವುದೆಂದು ನಂಬಿಸಲು ಮತ್ತೊಬ್ಬ ವ್ಯಕ್ತಿಗೆ ತನ್ನ ಕಾರಿನಲ್ಲೇ ಬೆಂಕಿ ಹಚ್ಚಿ ಪರಾರಿಯಾಗಿದ್ದ.

ತುಳಜಾಪುರ ಸಮೀಪ ಭಾನುವಾರ ಕಾರು ಸುಟ್ಟುಕರಕಲಾಗಿ ಪತ್ತೆಯಾಗಿತ್ತು, ಅದರಲ್ಲಿ ಗೋಣಿಚೀಲದಲ್ಲಿದ್ದ ಶವ ಬೆಂದು ಹೋಗಿತ್ತು. ಈ ಕಾರು ಬ್ಯಾಂಕ್ ವಸೂಲಾತಿ ಏಜೆಂಟ್ ಗಣೇಶ್ ಚೌಹಾಣ್​ನದ್ದು ಆಗಿರುವುದರಿಂದ ಆತನಏ ಸತ್ತಿರುವುದಾಗಿ ಎಲ್ಲರೂ ಅಂದುಕೊಂಡಿದ್ದರು.

ಆದರೆ ಪೊಲೀಸ್‌ ತನಿಖೆಯಲ್ಲಿ ಗಣೇಶ್ ಚೌಹಾಣ್ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವನಿಗೆ ಲಿಫ್ಟ್​ ಕೊಡುವುದಾಗಿ ಹತ್ತಿಸಿಕೊಂಡು ಕೊಂದು ಗೋಣಿಚೀಲದಲ್ಲಿ ತುಂಬಿ ಕಾರಿನಲ್ಲಿರಿಸಿ ಬೆಂಕಿ ಹಚ್ಚಿ ಪರಾರಿಯಾಗಿದ್ದ ಎಂಬುದು ತಿಳಿದು ಬಂದಿದೆ.

ಗಣೇಶ್​ಗೆ ತಾನು ಸತ್ತಿದ್ದೇನೆಂದು ಎಲ್ಲರೂ ತಿಳಿದುಕೊಳ್ಳಬೇಕು ಎಂಬ ಉದ್ದೇಶ ಹೊಂದಿದ್ದ. ಕಾರಿನ ಮಾಲೀಕರನ್ನು ಪೊಲೀಸರು ಪತ್ತೆ ಹಚ್ಚಿದಾಗ ಅವರು ಅದನ್ನು ಸಂಬಂಧಿಕರೊಬ್ಬರಿಗೆ ನೀಡಿರುವುದು ತಿಳಿದು ಬಂದಿದೆ. ಆ ವ್ಯಕ್ತಿ ಸಂಬಂಧಿ ಗಣೇಶ್​ ಚೌಹಾಣ್​ ಸಂಪರ್ಕಿಸಲು ಮುಂದಾದಾಗ ಆತ ಮನೆಗೆ ಬಂದಿಲ್ಲ, ಮೊಬೈಲ್ ಕೂಡ ಸ್ವಿಚ್ಡ್​ ಆಫ್ ಆಗಿದೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.

ಹೀಗಾಗಿ ಮೃತಪಟ್ಟ ವ್ಯಕ್ತಿ ಗಣೇಶ್ ಎಂದು ಭಾವಿಸಲಾಗಿತ್ತು. ಪೊಲೀಸರ ತನಿಖೆ ಮುಂದುವರಿದಂತೆ ಆತನಿಗೆ ಯುವತಿ ಜತೆ ಪ್ರೀತಿ ಇದೆ ಗೊತ್ತಾಗಿದೆ. ಆಕೆಯನ್ನು ಸಂಪರ್ಕಿಸಿದಾಗ ಈ ಘಟನೆಯ ಬಳಿಕ ಗಣೇಶ್ ಬೇರೊಂದು ನಂಬರ್​ ಬಳಸಿ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ. ಸತ್ತಿದ್ದಾನೆಂದು ಭಾವಿಸಿದ ವ್ಯಕ್ತಿ ಜೀವಂತವಾಗಿದ್ದಾನೆ ಎಂಬುದನ್ನು ತಿಳಿದ ಪೊಲೀಸರು ಹುಡುಕಾಟ ಆರಂಭಿಸಿದ್ದರು.

ಆ ನಂಬರ್‌ ಹಿಂಬಾಲಿಸಿಕೊಂಡು ಪೊಲೀಸರು ಕೊಲ್ಹಾಪುರಕ್ಕೆ ಹೋಗಿ ಗಣೇಶ್‌ ಔಹಾಣ್‌ನನ್ನು ಬಂಧಿಸಿದ್ದಾರೆ. ಆತನನ್ನು ಪ್ರಶ್ನಿಸಿದಾಗ ಒಂದು ಕೋಟಿ ರೂ. ಜೀವವಿಮಾ ಪಾಲಿಸಿ ಇದ್ದು, ಗೃಹ ಸಾಲದ ಹಣವನ್ನು ತೀರಿಸಲು ಈ ನಾಟಕವಾಡಿದ್ದ, ಅದಕ್ಕೆ ಅಮಾಯಕನ ಜೀವವನ್ನು ಬಲಿ ಪಡೆದಿದ್ದ ಎಂಬುದು ತಿಳಿದುಬಂದಿದೆ.

ಶನಿವಾರ ತುಳಜಾಪುರ ಟಿ ಜಂಕ್ಷನ್​ನಲ್ಲಿ ಗೋವಿಂದ್ ಯಾದವ್ ಎಂಬ ವ್ಯಕ್ತಿಗೆ ಗಣೇಶ್ ಲಿಫ್ಟ್​ ಕೊಟ್ಟಿದ್ದ. ಯಾದವ್ ಕುಡಿದ ಮತ್ತಿನಲ್ಲಿದ್ದ, ಚೌಹಾಣ್ ಕಾರನ್ನು ನಿಲ್ಲಿಸಿ ಯಾದವ್​ಗೆ ಊಟ ತಂದುಕೊಟ್ಟಿದ್ದ, ಊಟದ ಬಳಿಕ ಯಾದವ್ ನಿದ್ರೆಗೆ ಜಾರಿದಾಗ ಕೊಲೆ ಮಾಡಿದ್ದ.

Related Posts

Leave a Reply

Your email address will not be published. Required fields are marked *