Menu

ಗಿಳಿ ರಕ್ಷಿಸಲು ಹೋದ ಯುವ ಕರೆಂಟ್ ಹೊಡೆದು ಸಾವು!

bengaluru man

ಬೆಂಗಳೂರು: ಸಾಕು ಗಿಳಿಯನ್ನು ರಕ್ಷಿಸಲು ಹೋದ ಯುವಕ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.

ಗಿರಿನಗರ ಪೊಲೀಸ್​ ಠಾಣಾ ವ್ಯಾಪ್ತಿಯ ವೀರಭದ್ರ ನಗರದಲ್ಲಿ ಅರುಣ್ ಕುಮಾರ್ (32) ಮೃತಪಟ್ಟಿದ್ದಾರೆ.

ಲಿಖಿತಾ ಎಂಬವರು ವಿದೇಶಿ ಗಿಳಿಯೊಂದನ್ನು ತಮ್ಮ ಫ್ಲ್ಯಾಟ್‌ನಲ್ಲಿ ಸಾಕಿದ್ದರು. ಇಂದು ಅಪಾರ್ಟ್‌ಮೆಂಟ್‌ ಆವರಣದಲ್ಲಿರುವ ಹೈಟೆನ್ಷನ್ ವೈರ್​ ಕಂಬದ ಮೇಲೆ ಕುಳಿತಿತ್ತು. ಇದನ್ನು ನೋಡಿದ ಲಿಖಿತಾ ಸಂಬಂಧಿ ಅರುಣ್​ ಕುಮಾರ್,​ ಕಬ್ಬಿಣದ ಪೈಪ್‌ಗೆ ಕಟ್ಟಿಗೆ ಸೇರಿಸಿ ಅಪಾರ್ಟ್‌ಮೆಂಟ್​ ಕಾಂಪೌಂಡ್ ಮೇಲೆ ನಿಂತು ಗಿಳಿಯನ್ನು ಓಡಿಸಲು ಪ್ರಯತ್ನಿಸಿದ್ದಾರೆ.

ಈ ವೇಳೆ 66 ಸಾವಿರ ಕೆ.ವಿ ವಿದ್ಯುತ್ ಪ್ರವಹಿಸಿದ ಪರಿಣಾಮ ಅರುಣ್ ಕುಮಾರ್, ಕಾಂಪೌಂಡ್​​ ಮೇಲಿಂದ ಕೆಳಗೆ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಾರ್ಟ್‌ಮೆಂಟ್ ಆವರಣದೊಳಗೆ ಹೈಟೆನ್ಷನ್ ವೈರ್​ಗಳು ಇರುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೀರಭದ್ರ ನಗರದಲ್ಲಿ ಕೃತಿಕಾ ಅಪಾರ್ಟ್​ಮೆಂಟ್​ನಲ್ಲಿ ಲಿಖಿತಾ ಎಂಬವರು ಒಂದು ಗಿಳಿಯನ್ನು ಸಾಕಿದ್ದರು. ಆ ಗಿಳಿಯು ಎಲೆಕ್ಟ್ರಿಕ್​ ವೈರ್ ಮೇಲೆ ಕುಳಿತಿತ್ತು. ಆಗ ಲಿಖಿತಾರ ಸಂಬಂಧಿ ಅರುಣ್​ ಕುಮಾರ್​, ಕಬ್ಬಿಣದ ಸಲಾಕೆಯನ್ನು ತೆಗೆದುಕೊಂಡು ಗಿಳಿಯ ಜೀವ ಉಳಿಸಲು ಯತ್ನಿಸಿದ್ದಾರೆ. ಆಗ ಶಾಕ್​ ತಗುಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ವರದಿ (ಯುಡಿಆರ್​) ಪ್ರಕರಣ ದಾಖಲಾಗಿದೆ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *