Menu

ಮಾಜಿ ಸಚಿವ ಎಚ್.ಎಂ. ರೇವಣ್ಣ ಪುತ್ರ ಕಾರು ಡಿಕ್ಕಿ: ಬೈಕ್ ಸವಾರ ಸಾವು

hm revanna son car accident

ಮಾಜಿ ಸಚಿವ ಹೆಚ್ ಎಂ ರೇವಣ್ಣ ಅವರ ಪುತ್ರ ಹಾಗೂ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಶಾಂಕ್ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾಬರನಹಳ್ಳಿ ಬಳಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಅಪಘಾತ ನಡೆಸಿದ ನಂತರ ನಾನು ಯಾರು ಗೊತ್ತಾ ಎಚ್.ಎಂ. ರೇವಣ್ಣ ಪುತ್ರ ಆವಾಜ್ ಹಾಕಿ ಪರಾರಿಯಾಗಿದ್ದಾರೆ.

ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಟೋಲ್‌ ನೂರು ಮೀಟರ್ ಬಳಿ ರೇವಣ್ಣ ಪುತ್ರ ಶಶಾಂಕ್‌ ಫಾರ್ಚೂನರ್ ಕಾರು ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ರಾಜೇಶ್ (23) ಮೃತಪಟ್ಟಿದ್ದಾರೆ.

ಗುರುವಾರ ರಾತ್ರಿ 10:30 ರ ಸುಮಾರಿಗೆ ಅಪಘಾತ ಎಸಗಿದ ಬಳಿಕ ಕಾರಿನಿಂದ ಇಳಿದ ಬಳಿಕ ಶಶಾಂಕ್‌ ನಾನು ಯಾರು ಗೊತ್ತಾ? ಹೆಚ್‌ಎಂ ರೇವಣ್ಣ ಪುತ್ರ ಎಂದು ಅವಾಜ್‌ ಹಾಕಿದ್ದಾರೆ. ನಂತರ ಕಾರನ್ನು ಬದಿಯಲ್ಲಿ ನಿಲ್ಲಿಸುತ್ತೇನೆ ಎಂದು ಹೇಳಿ ಶಶಾಂಕ್‌ ಪರಾರಿಯಾಗಿದ್ದಾರೆ.

ವಿಚಾರ ತಿಳಿದ ಸ್ಥಳೀಯರು 5 ಕಿ.ಮೀ. ಹಿಂಬಾಲಿಸಿ ಸನ್‌ ಫ್ಲವರ್‌ ಫ್ಯಾಕ್ಟರಿ ಬಳಿ ಅಡ್ಡಗಟ್ಟಿ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಕಾರಿನಲ್ಲಿ ರೇವಣ್ಣ ಕುಟುಂಬಸ್ಥರು ಇದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿರೆ.

ಹಿಟ್‌ ಆಂಡ್‌ ರನ್‌ ವಿಚಾರ ದೊಡ್ಡದಾಗುತ್ತಿದ್ದಂತೆ ತಡರಾತ್ರಿ ಫಾರ್ಚೂನರ್ ಕಾರನ್ನು ಕುದೂರು ಪೊಲೀಸ್ ಠಾಣೆಗೆ ತರಲಾಗಿದೆ.

Related Posts

Leave a Reply

Your email address will not be published. Required fields are marked *