ಆರ್ ಎಸ್ ಎಸ್ ನಿಲುವುಗಳ ಪರ ಧ್ವನಿ ಎತ್ತಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುತ್ತಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ವೀರ್ ಸಾವರ್ಕರ್ ಪ್ರಶಸ್ತಿ ನಿರಾಕರಿಸಿ ಅಚ್ಚರಿ ಮೂಡಿಸಿದ್ದಾರೆ.
ಹೈ ರೇಂಜ್ ಗ್ರಾಮೀಣ ಅಭಿವೃದ್ಧಿ ಸೊಸೈಟಿ ವೀರ್ ಸಾವರ್ಕರ್ ಅಂತರರಾಷ್ಟ್ರೀಯ ಇಂಪ್ಯಾಕ್ಟ್ ಪ್ರಶಸ್ತಿ 2025 ಸ್ಥಾಪಿಸಿದ್ದು, ಸಂಸ್ಥೆಯ ಮೊದಲ ಪ್ರಶಸ್ತಿಯನ್ನು ಶಶಿ ತರೂರ್ ಅವರಿಗೆ ನೀಡುವುದಾಗಿ ಘೋಷಿಸಿತ್ತು.
ಪಠ್ಯದಲ್ಲಿ ವೀರ ಸಾವರ್ಕರ್ ವಿಷಯ ಸೇರ್ಪಡೆ ಕುರಿತು ವಾದ ಮಾಡಿದ್ದ ಕೇರಳದ ತಿರುವನಂತಪುರಂ ಸಂಶದ ಶಶಿ ತರೂರ್ ಪಕ್ಷಕ್ಕೆ ಮುಜುಗರ ತಂದಿದ್ದರು. ವೀರ ಸಾವರ್ಕರ್ ಪರ ಧ್ವನಿ ಎತ್ತಿದ್ದಕ್ಕಾಗಿ ಸಂಸ್ಥೆ ಘೋಷಿಸಿದ ಪ್ರಶಸ್ತಿಯನ್ನು ಶಶಿ ತರೂರ್ ನಿರಾಕರಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಲು ನಾನು ಹೋಗುವುದಿಲ್ಲ ಶಶಿ ತರೂರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಪ್ರಶಸ್ತಿ ನಿರಾಕರಿಸಿದ್ದಾರೆ.
ಈ ಪ್ರಶಸ್ತಿಯನ್ನು ಬುಧವಾರ ದೆಹಲಿಯ NDMC ಕನ್ವೆನ್ಷನ್ ಹಾಲ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರದಾನ ಮಾಡಲಿದ್ದಾರೆ. ರಾಷ್ಟ್ರೀಯ ಅಭಿವೃದ್ಧಿ, ಸಾಮಾಜಿಕ ಸುಧಾರಣೆ ಮತ್ತು ಮಾನವೀಯ ಸಂಪರ್ಕದಲ್ಲಿ ಬದಲಾವಣೆಗಾಗಿ ಶ್ರಮಿಸಿದ ವ್ಯಕ್ತಿಗಳು ಮತ್ತು ಸಂಘಟನೆಗಳನ್ನು ಗೌರವಿಸಲಾಗುತ್ತದೆ.
ಮಂಗಳವಾರ ಕೇರಳದಲ್ಲಿ ಮಾಧ್ಯಮ ವರದಿಗಳಿಂದ ಪ್ರಶಸ್ತಿಯ ಬಗ್ಗೆ ತಿಳಿದುಕೊಂಡೆ ಎಂದು ಶಶಿ ತರೂರ್ ಪ್ರತಿಕ್ರಿಯಿಸಿದ್ದು, ಪ್ರಶಸ್ತಿಯ ಬಗ್ಗೆ ತಮಗೆ ತಿಳಿದಿಲ್ಲ ಅಥವಾ ಅದನ್ನು ಸ್ವೀಕರಿಸಿಲ್ಲ ಎಂದು ಹೇಳಿದರು.


