Menu

ಋತುಚಕ್ರ ರಜೆಗೆ ಸದ್ಯ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌

ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ಕಡ್ಡಾಯ ರಜೆಯನ್ನು ನೀಡಿ ಸರ್ಕಾರ ಜಾರಿಗೊಳಿಸಿದ್ದ ಆದೇಶಕ್ಕೆ ಹೈಕೋರ್ಟ್​ನಿಂದ ಬೆಳಗ್ಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ. ಸರ್ಕಾರದ ಪರ ವಕೀಲರು ಮನವಿ ಸಲ್ಲಿಸಿದ ಕಾರಣ ಬುಧವಾರ ಮರು ವಿಚಾರಣೆ ನಿಗದಿಪಡಿಸಿದ್ದು, ಸದ್ಯಕ್ಕೆ ಋತುಚಕ್ರ ರಜೆಗೆ ತಡೆ ಇಲ್ಲವಾಗಿದೆ.

ಋತುಚಕ್ರ ರಜೆ ವಿಚಾರದಲ್ಲಿ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ಕೋರಿ ಎಜಿ ಶಶಿಕಿರಣ್ ಶೆಟ್ಟಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಜೊತೆ ಕೇಳದೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಋತುಚಕ್ರದ ರಜೆ ಆದೇಶಕ್ಕೆ ಮುನ್ನ ಸರ್ಕಾರ ಕಾನೂನು ಪಾಲಿಸಿದೆ. ಹೀಗಾಗಿ ಆದೇಶ ಮಾರ್ಪಡಿಸಬೇಕೆಂದು ಅಡ್ವೊಕೇಟ್ ಜನರಲ್ ಮನವಿ ಮಾಡಿದ್ದರು.

ಸರ್ಕಾರದ ವಾದ ಆಲಿಸಿದ ಬಳಿಕ ಅರ್ಜಿ ಬಗ್ಗೆ ಆದೇಶಿಸಲಾಗುವುದು ಎಂದ ಹೈ ಕೋರ್ಟ್ ತಡೆಯಾಜ್ಞೆ ಮಾರ್ಪಡಿಸಿ ನಾಳೆಗೆ ವಿಚಾರಣೆ ನಿಗದಿಪಡಿಸಿದೆ. ತಡೆಯಾಜ್ಞೆಗೆ ಹಿರಿಯ ವಕೀಲ ರವಿವರ್ಮ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಋತುಚಕ್ರ ರಜೆ ಬೆಂಬಲಿಸಿ ಕೋರ್ಟ್​ಗೆ 50ಕ್ಕೂ ಹೆಚ್ಚು ಮಹಿಳಾ ವಕೀಲರು ಹಾಜರಾಗಿದ್ದರು. ಸದ್ಯ ಋತುಚಕ್ರದ ರಜೆ ಆದೇಶಕ್ಕೆ ತಡೆಯಾಜ್ಞೆ ಇಲ್ಲ.

ಸರ್ಕಾರದ ಏಕಪಕ್ಷೀಯ ಆದೇಶದಿಂದ ಹೋಟೆಲ್​ಗಳಿಗೆ ಸಮಸ್ಯೆ ಎಂದು ಹೋಟೆಲ್ ಸಂಘದ ಪರ ವಕೀಲ ಪ್ರಶಾಂತ್ ಬಿ.ಕೆ ವಾದ ಮಂಡಿಸಿದ್ದು, ಆದೇಶಕ್ಕೆ ಮುನ್ನ ಸಂಘಟನೆಗಳ ಅಭಿಪ್ರಾಯ ಪಡೆದಿಲ್ಲವೆಂದು ದೂರಿದ್ದರು. ಮುಂದಿನ ವಿಚಾರಣೆವರೆಗೆ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದ್ದು, ಮಧ್ಯಂತರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರ ಸ್ವತಂತ್ರವೆಂದು ಹೈಕೋರ್ಟ್ ಏಕಸದಸ್ಯ ಪೀಠ ಮಂಗಳವಾರ ಬೆಳಗ್ಗೆ ಹೇಳಿತ್ತು.

Related Posts

Leave a Reply

Your email address will not be published. Required fields are marked *